ಅಂಚೆ ಇಲಾಖೆ ಸಿಬ್ಬಂದಿಗೆ ಸನ್ಮಾನ
ಬಳ್ಳಾರಿ, 22 ಸೆಪ್ಟೆಂಬರ್ (ಹಿ.ಸ): ಆ್ಯಂಕರ್: ಬಳ್ಳಾರಿ ನಗರದ ಕೋಟೆ ಪ್ರದೇಶದಲ್ಲಿರುವ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲ
ಅಂಚೆ ಇಲಾಖೆ ಸಿಬ್ಬಂದಿಗೆ ಸನ್ಮಾನ


ಬಳ್ಳಾರಿ, 22 ಸೆಪ್ಟೆಂಬರ್ (ಹಿ.ಸ):

ಆ್ಯಂಕರ್: ಬಳ್ಳಾರಿ ನಗರದ ಕೋಟೆ ಪ್ರದೇಶದಲ್ಲಿರುವ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕಾವಧಿಯಲ್ಲಿ ಗ್ರಾಮೀಣ ಅಂಚೆ ಜೀವ ವಿಮೆ ಹಾಗೂ ಅಂಚೆ ಜೀವ ವಿಮೆಯ ವ್ಯವಹಾರದಲ್ಲಿ ಹೆಚ್ಚಿನ ಕಾರ್ಯಪ್ರಗತಿ ಸಾಧಿಸಿದ 10 ಜನ ಅಂಚೆ ಸಿಬ್ಬಂದಿ ಹಾಗೂ ಪ್ರತಿನಿಧಿಗಳನ್ನು ಸಾಮ್ರಾಟ್-10 ಎಂಬ ಯೋಜನೆಯಡಿ ಬುಧವಾರದಂದು ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಚೆ ಅಧೀಕ್ಷಕರಾದ ವಿ.ಎಲ್.ಚಿತಕೋಟೆ ಅವರು ಮಾತನಾಡಿ, ಬಳ್ಳಾರಿ ವಿಭಾಗವು ಕರ್ನಾಟಕ ವಲಯದಲ್ಲಿ ಹಾಗೂ ಉತ್ತರ ಕರ್ನಾಟಕ ಕ್ಷೇತ್ರೀಯ ಮಟ್ಟದಲ್ಲಿ ವಹಿಸಲಾಗುತ್ತಿರುವ ಎಲ್ಲಾ ಗುರಿಗಳನ್ನು ಸಾಧಿಸುವಲ್ಲಿ ಮುತುವರ್ಜಿ ವಹಿಸಿ ಪ್ರಯತ್ನಿಸಿದ್ದು, ಎಲ್ಲಾ ವಿಭಾಗಗಳಲ್ಲಿಯೂ ಗಮನಾರ್ಹ ಸಾಧನೆಗೈದಿದೆ. ಈ ಹಿನ್ನಲೆಯಲ್ಲಿ ವಿಭಾಗೀಯ ಮಟ್ಟದಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗಿದೆ ಎಂದು ತಿಳಿಸಿದರು.

ಇಂಡಿಯಾ ಪೆÇೀಸ್ಟ್ ಪೇಮೆಂಟ್ಸ್ ಬ್ಯಾಂಕ್ನ ಮೂಲಕ ಟಾಟಾ ಗ್ರೂಪ್ ಆಕ್ಸಿಡೆಂಟಲ್ ಗಾರ್ಡ್ ಎಂಬ ಸಮೂಹ ಅಪಘಾತ ವಿಮೆಯನ್ನು ಜು.20ರಂದು ಹಮ್ಮಿಕೊಳ್ಳಲಾದ ವಿಶೇಷ ಅಭಿಯಾನದಲ್ಲಿ ಹೆಚ್ಚು ಪಾಲಿಸಿಗಳನ್ನು ಸಾಧಿಸಿದ 21 ಸಿಬ್ಬಂದಿಯನ್ನು ಸಹ ವಿಶೇಷ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿ ವಿಭಾಗದ ಇಂಡಿಯಾ ಪೆÇೀಸ್ಟ್ ಪೇಮೆಂಟ್ಸ್ ಬ್ಯಾಂಕ್ನ ವ್ಯವಸ್ಥಾಪಕರಾದ ಟಿ.ಡಾಲಿ, ಸಹಾಯಕ ಅಂಚೆ ಅಧೀಕ್ಷಕರಾದ ಶ್ರೀನಿಧಿ.ಕೆ, ಬಳ್ಳಾರಿ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಜಿ.ಬಸವರಾಜ್, ಅಂಚೆ ಜೀವವಿಮೆ ವಿಸ್ತರಣಾಧಿಕಾರಿ ವೀರೇಶಪ್ಪ, ಮಾರುಕಟ್ಟೆ ವಿಸ್ತರಣಾಧಿಕಾರಿ ಎಂ.ನಾಗರಾಜರಾವು ಸೇರಿದಂತೆ ಬಳ್ಳಾರಿಯ ವಿಭಾಗೀಯ ಕಚೇರಿಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು


 rajesh pande