ಫಿನ್ಟೆಕ್ ಉದ್ಯಮದ ಪಾತ್ರ ಮಹತ್ವದ್ದು
ನವ ದೆಹಲಿ, 21 ಸೆಪ್ಟೆಂಬರ್ (ಹಿ.ಸ): ಆ್ಯಂಕರ್ : ಫಿನ್ಟೆಕ್ ಉದ್ಯಮವು ಹಸಿರು ಹಣಕಾಸು ಕ್ಷೇತ್ರದಲ್ಲಿನ ನಿರ್ದಿಷ್ಟ ಅವ
ಫಿನ್ಟೆಕ್ ಉದ್ಯಮದ ಪಾತ್ರ ಮಹತ್ವದ್ದು


ನವ ದೆಹಲಿ, 21 ಸೆಪ್ಟೆಂಬರ್ (ಹಿ.ಸ):

ಆ್ಯಂಕರ್ :

ಫಿನ್ಟೆಕ್ ಉದ್ಯಮವು ಹಸಿರು ಹಣಕಾಸು ಕ್ಷೇತ್ರದಲ್ಲಿನ ನಿರ್ದಿಷ್ಟ ಅವಕಾಶಗಳ ಲಾಭವನ್ನು ಪಡೆದುಕೊಳ್ಳಬೇಕು ಮತ್ತು ಸುಸ್ಥಿರ ಹಣಕಾಸು ವಾತಾವರಣವನ್ನು ನಿರ್ಮಿಸುವಲ್ಲಿ ತನ್ನ ಪಾತ್ರವನ್ನು ನಿರ್ವಹಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕರೆ ನೀಡಿದ್ದಾರೆ. ಸರ್ಕಾರ ಮತ್ತು ಅದರ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಭಾಗವಹಿಸುವ ಮೂಲಕ ವಿಶ್ವಾಸ ವೃದ್ಧಿಗೂ ಪ್ರಯತ್ನಿಸಬೇಕೆಂದು ಫಿನ್ಟೆಕ್ ಉದ್ಯಮಿಗಳಿಗೆ ಅವರು ಸಲಹೆ ಮಾಡಿದ್ದಾರೆ. ಸುಸ್ಥಿರ ಹಣಕಾಸು, ಪರಿಸರದಲ್ಲಿ ಫಿನ್ಟೆಕ್ ಉದ್ಯಮಿಗಳು ಪ್ರಮುಖ ಪಾತ್ರವಹಿಸಲು ವಿಫುಲ ಅವಕಾಶಗಳಿವೆ. ಹಸಿರು ಹಣಕಾಸು ವ್ಯವಸ್ಥೆಯಲ್ಲಿನ ನಿರ್ದಿಷ್ಟವಾದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಜಾಗತಿಕ ಫಿನ್ಟೆಕ್ ಮೇಳದಲ್ಲಿ ಮಾತನಾಡಿದ ಹಣಕಾಸು ಸಚಿವರು, ಪ್ರಧಾನಮಂತ್ರಿಯೇ ಆಗಿರಲಿ, ಸಚಿವರು ಅಥವಾ ನೀತಿ ಆಯೋಗ ಸೇರಿದಂತೆ ಸರ್ಕಾರದಲ್ಲಿನ ಪ್ರತಿಯೊಬ್ಬರೂ ಸಕ್ರಿಯ ಪಾಲ್ಗೊಳ್ಳುವಿಕೆಗೆ, ಚರ್ಚೆಗಳಿಗೆ ಮತ್ತು ವಿಚಾರವಿನಿಮಯಗಳಿಗೆ ಲಭ್ಯವಿರುತ್ತಾರೆ ಎಂದು ಹೇಳಿದ್ದಾರೆ. ಆರ್ಬಿಐ ಗೌರ್ನರ್ ಶಕ್ತಿಕಾಂತ ದಾಸ್ ಮಾತನಾಡಿ, ಫಿನ್ಟೆಕ್ ಕಂಪನಿಗಳ ಅನ್ವೇಷಣೆಗಳಿಗೆ ಕೇಂದ್ರೀಯ ಬ್ಯಾಂಕ್ ಎಲ್ಲ ರೀತಿಯ ಬೆಂಬಲ ನೀಡಲು ತಯಾರಿದೆ. ಆದರೆ, ಗ್ರಾಹಕರ ಹಿತರಕ್ಷಣೆಗೆ ಯಾವುದೇ ರೀತಿಯ ದಕ್ಕೆ ಆಗದಂತೆ ಎಚ್ಚರಿಕೆ ವಹಿಸಲಿದೆ ಎಂದು ತಿಳಿಸಿದರು

ಹಿಂದೂಸ್ತಾನ್ ಸಮಾಚಾರ್


 rajesh pande