ವಿಂಡ್ ಫಾಲ್ ಟ್ಯಾಕ್ಸ್ ಮರು ಪರಿಶೀಲನೆ
ನವ ದೆಹಲಿ, 21 ಸೆಪ್ಟೆಂಬರ್ (ಹಿ.ಸ): ಆ್ಯಂಕರ್ : ಆದಾಯದ ಮೇಲೆ ಹೆಚ್ಚು ತೆರಿಗೆ ವಿಧಿಸುವ - ವಿಂಡ್ ಫಾಲ್ ಟ್ಯಾಕ್ಸ್ ಮರ
ವಿಂಡ್ ಫಾಲ್ ಟ್ಯಾಕ್ಸ್ ಮರು ಪರಿಶೀಲನೆ


ನವ ದೆಹಲಿ, 21 ಸೆಪ್ಟೆಂಬರ್ (ಹಿ.ಸ):

ಆ್ಯಂಕರ್ :

ಆದಾಯದ ಮೇಲೆ ಹೆಚ್ಚು ತೆರಿಗೆ ವಿಧಿಸುವ - ವಿಂಡ್ ಫಾಲ್ ಟ್ಯಾಕ್ಸ್ ಮರು ಪರಿಶೀಲನೆ ಮಾಡಲಾಗುತ್ತಿದೆ ಎಂಬ ಮಾಧ್ಯಮಗಳ ವರದಿ ತಪ್ಪು ದಾರಿಗೆ ಎಳೆಯುವಂತದ್ದು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ. ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ತೆರಿಗೆಯಲ್ಲಿ ಬದಲಾವಣೆಗಳನ್ನು ಮಾಡಲು ಸಚಿವಾಲಯ ಮುಂದಾಗಿದೆ ಎನ್ನುವ ವರದಿಗಳನ್ನು ಸಚಿವಾಲಯ ಅಲ್ಲಗಳೆದಿದೆ. ಈ ಸಂಬಂಧ ಮಾಧ್ಯಮಗಳಲ್ಲಿ ಬಂದಿರುವ ವರದಿ ಸತ್ಯಕ್ಕೆ ದೂರವಾದುದ್ದು ಎಂದು ತಿಳಿಸಿದೆ. ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿದ ನಂತರ ಈಗಾಗಲೇ ಇಂತಹ ೬ ಚರ್ಚೆಗಳು ನಡೆದಿವೆ. ಲೆವಿ ವಿಧಾನಗಳು, ದರಗಳು, ಹೊಣೆಗಾರಿಕೆ ನಿರ್ಣಯದ ಮೇಲೆ ಸರ್ಕಾರ ಈ ರೀತಿಯ ಮನವಿಯನ್ನು ಸ್ವೀಕಾರಿಸಲಿದೆ ಎಂದು ಹೇಳಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande