ಶಾಂತಿಯುತ ಮಾತುಕತೆಯಿಂದ ಪ್ರಗತಿ ಸಾಧ್ಯ
ನ್ಯೂಯಾರ್ಕ್(ಅಮೆರಿಕ), 21 ಸೆಪ್ಟೆಂಬರ್ (ಹಿ.ಸ): ಆ್ಯಂಕರ್ : : ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77ನೇ ಅಧಿವೇಶನದಲ್ಲ
ುಿ


ನ್ಯೂಯಾರ್ಕ್(ಅಮೆರಿಕ), 21 ಸೆಪ್ಟೆಂಬರ್ (ಹಿ.ಸ):

ಆ್ಯಂಕರ್ :

: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 77ನೇ ಅಧಿವೇಶನದಲ್ಲಿ ಪಾಲ್ಗೊಂಡು ಭಾಷಣ ಮಾಡಿದ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್, ಇದು ಯುದ್ಧದ ಸಮಯವಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು ಸರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಕಳೆದ ಕೆಲವೇ ದಿನಗಳ ಹಿಂದೆ ಉಜ್ಬೇಕಿಸ್ತಾನದ ಸಮರ್ಖಂಡ್ನಲ್ಲಿ ಆಯೋಜಿಸಿದ್ದ ಎರಡು ದಿನಗಳ ಶಾಂಘೈ ಸಹಕಾರ ಸಂಘಟನೆಯ(ಎಸ್ಸಿಒ) ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದ ಅವರು, ಇದು ಯುದ್ಧದ ಸಮಯವಲ್ಲ. ಉಕ್ರೇನ್ ಜೊತೆಗಿನ ಸಂಘರ್ಷ ಕೊನೆಗೊಳಿಸಿ ಎಂದು ಕಿವಿಮಾತು ಹೇಳಿದ್ದರು. ಇದಕ್ಕೆ ಅಮೆರಿಕ ಸೇರಿದಂತೆ ಜಾಗತಿದ ಮಾಧ್ಯಮಗಳು ಮೆಚ್ಚುಗೆ ಸೂಚಿಸಿದ್ದವು.

ಇದು ಪಶ್ಚಿಮದ ದೇಶಗಳ ವಿರುದ್ಧ ಸೇಡು ತೀರಿಸಿಕೊಳ್ಳುವ ಅಥವಾ ಪೂರ್ವದ ದೇಶಗಳ ವಿರುದ್ಧ ಪಶ್ಚಿಮವನ್ನು ಎತ್ತಿಕಟ್ಟುವ ಸಮಯವಲ್ಲ. ತಮ್ಮ ಮುಂದಿರುವ ಜಾಗತಿಕ ಸವಾಲುಗಳನ್ನು ಎಲ್ಲ ರಾಷ್ಟ್ರಗಳೂ ಒಗ್ಗಟ್ಟಿನಿಂದ ಎದುರಿಸಬೇಕು. ಶಾಂತಿಯುತ ಮಾತುಕತೆಯಿಂದ ಸಕಲ ರೀತಿಯ ಪ್ರಗತಿಯೂ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಹಿಂದೂಸ್ತಾನ್ ಸಮಾಚಾರ್


 rajesh pande