ರಸಗೊಬ್ಬರ ಕ್ಷೇತ್ರ ಸೂಕ್ತ ಕಾರ್ಯತಂತ್ರಗಳು ಅಗತ್ಯ
ನವ ದೆಹಲಿ, 21 ಸೆಪ್ಟೆಂಬರ್ (ಹಿ.ಸ): ಆ್ಯಂಕರ್ : ದೇಶವನ್ನು ಜಾಗತಿಕ ಉತ್ಪಾದಕ ಕೇಂದ್ರವನ್ನಾಗಿ ಪರಿವರ್ತನೆ ಮಾಡಲು ಪ್
ರಸಗೊಬ್ಬರ ಕ್ಷೇತ್ರ ಸೂಕ್ತ ಕಾರ್ಯತಂತ್ರಗಳು ಅಗತ್ಯ


ನವ ದೆಹಲಿ, 21 ಸೆಪ್ಟೆಂಬರ್ (ಹಿ.ಸ):

ಆ್ಯಂಕರ್ :

ದೇಶವನ್ನು ಜಾಗತಿಕ ಉತ್ಪಾದಕ ಕೇಂದ್ರವನ್ನಾಗಿ ಪರಿವರ್ತನೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ದೂರ ದೃಷ್ಟಿಗೆ ಅನುಗುಣವಾಗಿ ರಾಸಾಯನಿಕ ಮತ್ತು ರಸಗೊಬ್ಬರ ವಲಯ ಕೆಲಸ ಮಾಡಬೇಕೆಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಮನ್ಸೂಖ್ ಮಾಂಡವೀಯ ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಆಯೋಜಿಸಿದ್ದ ರಾಸಾಯನಿಕ ಮತ್ತು ರಸಗೊಬ್ಬರಕ್ಕೆ ಸಂಬಂಧಿಸಿದ ಸಲಹಾ ವೇದಿಕೆಯ ಮೂರನೇ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಜಾಗತಿಕ ಬೇಡಿಕೆಗೆ ಸ್ಪಂದಿಸುವ ಹಿನ್ನೆಲೆಯಲ್ಲಿ ಮೆಕ್ ಇನ್ ಇಂಡಿಯಾಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯಮಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಸಚಿವರು ಹೇಳಿದ್ದಾರೆ. ದೇಶೀಯ ಪೂರೈಕೆಗೆ ಸಂಬಂಧಿಸಿದಂತೆ ಸೂಕ್ಷ್ಮ, ಸಣ್ಣ, ಮಧ್ಯಮ ವಲಯದ ರಸಗೊಬ್ಬರ ತಯಾರಕರು ಕೂಡ ಸಂಶೋಧನೆ, ಅಭಿವೃದ್ಧಿಗೆ ಒತ್ತು ನೀಡಬೇಕು ಈ ನಿಟ್ಟಿನಲ್ಲಿ ಅಕಾಡಮಿ ಮತ್ತು ಕೈಗಾರಿಕೆಗಳು ಭಾಗಿಯಾಗಬೇಕೆಂದು ಅವರು ತಿಳಿಸಿದ್ದಾರೆ. ರಸಗೊಬ್ಬರ ಕ್ಷೇತ್ರದಲ್ಲಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಭಾರತ ಸಿದ್ಧವಿದೆ. ಇದಕ್ಕಾಗಿ ಸೂಕ್ತ ಕಾರ್ಯತಂತ್ರಗಳು ಅಗತ್ಯವಿದೆ ಎಂದು ಮನ್ಸೂಖ್ ಮಾಂಡವೀಯ ಹೇಳಿದ್ದಾರೆ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್


 rajesh pande