ವಿದ್ಯಾರ್ಥಿಗಳಿಂದ ಮಾರಾಮಾರಿ ಇಬ್ಬರಿಗೆ ಗಾಯ
ರಾಯಚೂರು, 20 ಸೆಪ್ಟೆಂಬರ್ (ಹಿ.ಸ): ಆ್ಯಂಕರ್ : ರಾಯಚೂರು ನಗರದ ಪ್ರತಿಷ್ಠಿತ ಕಾಲೇಜು ಎಂದು ಹೆಸರುವಾಸಿಯಾಗಿರುವ
ಿ್ಿ


ರಾಯಚೂರು, 20 ಸೆಪ್ಟೆಂಬರ್ (ಹಿ.ಸ):

ಆ್ಯಂಕರ್ :

ರಾಯಚೂರು ನಗರದ ಪ್ರತಿಷ್ಠಿತ ಕಾಲೇಜು ಎಂದು ಹೆಸರುವಾಸಿಯಾಗಿರುವ ನವೋದಯ ಮೇಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ನಡೆದಿದೆ.

ಶಂಕರ, ಶಂಬುಲಿಂಗ ಎಂಬ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ರೋಹಿತ್ ಎಂಬ ವಿದ್ಯಾರ್ಥಿ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದಿದ್ದಾನೆ. ಇದರಿಂದ ಶಂಕರ ಎಂಬ ವಿದ್ಯಾರ್ಥಿ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, 12ಸ್ಟಿಚುಗಳನ್ನಿ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೊಬ್ಬ ವಿದ್ಯಾರ್ಥಿಗೆ ಹಣೆಗೆ ಪೆಟ್ಟು ಬಿದ್ದಿದ್ದು ನವೋದಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇವರೆಲ್ಲರು ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಾಗಿದ್ದಾರೆ.

ರೋಹಿತ್ ತನ್ನ ತಾಯಿ ಬರ್ತಡೆಇರುವುದರಿಂದ ಮೋಬೈಲ್ ನಲ್ಲಿ ಸ್ಟೇಟಸ್ ಇಟ್ಟಿದ್ದ ಅದನ್ನು ಶಂಬುಲಿಂಗ ಮತ್ತು ಶಂಕರ ಎಂಬುವರು

ಅದನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂದು ಆರೋಪಿಸಿದ್ದಾನೆ. ಅಲ್ಲದೇ ಕಾಲೇಜಿನಲ್ಲಿ ಇತನನ್ನು ಶಂಕರ ಟೀಂ ಕಾಲೇಜಿನಲ್ಲಿ ರೇಗಿಸುತ್ತಿತ್ತು.

ಇದರಿಂದ ರೋಸಿ ಹೋದ ರೋಹಿತ್ ಕಾಲೇಜಿನ ಟೇರಸ್ ಮೇಲಿಂದ ರಾಡ್ ತಂದು ಕಾಲೇಜಿನ ಕ್ಲಾಸ್ ರೂಂನಲ್ಲಿ ಲಕ್ಚರರ್ ಎದುರೆ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದ್ದೆ.

ಇಷ್ಟೆಲ ಕಾಲೇಜಿನಲ್ಲಿ ಮಾರಾಮಾರಿ ನಡೆದರು ಕಾಲೇಜಿನ ಪ್ರಿನ್ಸಿಪಲ್ ಇದನ್ನು ಮುಂಚಿಹಾಕಲು ಪ್ರಯತ್ನ ನಡೆಸಿದ್ರು,

ಅಲ್ಲದೇ ಕಾಲೇಜು ಕ್ಯಾಂಪಸ್ ಕಾರಿಡಾರನಲ್ಲಿ ಯಾವುದೇ ಸಿಸಿ ಕ್ಯಾಮರ್ ವಿಲ್ಲದೇ ಇರುವುದು ದುರಂತವೆ ಸರಿ ಇಂತಹ ಪ್ರತಿಷ್ಟಿತ ಕಾಲೇಜಿನಲ್ಲಿ ಯಾವುದೇ ಅಹಿತಕರ ಘಟನೆ ಜರುಗಿದ್ರು ಯಾವುದೇ ಸುಳಿವುಸಿಗದಂತೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಘಟನೆ ಮುಚ್ಚಿಹಾಕುಚುದಕ್ಕಾಗಿ ಕಾಲೇಜಿನ ಕ್ಯಾಂಪಸ್ ಓಳಗಡೆ ಯಾರು ಹೋಗದಂತೆ ಕಾಲೇಜಿನ ರಿಜಿಸ್ಟ್ರಾರ್ ರಿಂದಲು ನಿರ್ಬಂದ ಹೇರಲಾಗಿದೆ. ಈ ಘಟನೆ ಕುರಿತು ಹಲ್ಲೆಗೋಳಗಾದ ಶಂಬುಲಿಂಗ ಕೊಟ್ಟ ದೂರಿನ ಮೇರೆಗೆ ನೇತಾಜಿನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿದ ರೋಹಿತ್ ನನ್ನು ಪೋಲಿಸರು ಬಂಧಿಸಿ ಠಾಣೆಗೆ ಕರೆದೊಯ್ದಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande