ವಿಷ್ಣು, ಶ್ರುತಿ, ಉಪ್ಪಿ ಜನ್ಮದಿನ..
ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ): ಆ್ಯಂಕರ್ : ಸೆಪ್ಟೆಂಬರ್ 18...ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ಗಳ ಜನ್ಮದಿನ.
ನಿನ


ಬೆಂಗಳೂರು, 18 ಸೆಪ್ಟೆಂಬರ್ (ಹಿ.ಸ):

ಆ್ಯಂಕರ್ :

ಸೆಪ್ಟೆಂಬರ್ 18...ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ಗಳ ಜನ್ಮದಿನ. ಸ್ಯಾಂಡಲ್ ವುಡ್ ಅಲ್ಲದೇ ಅಭಿಮಾನಿಗಳ ಪಾಲಿಗಿದು ವಿಶೇಷ ದಿನ. ನಮ್ಮನ್ನಗಲಿರುವ ಸಾಹಸ ಸಿಂಹ ವಿಷ್ಣುವರ್ಧನ್, ಕಬ್ಜ ಸೌಂಡ್ ಮಾಡುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಹಿರಿಯ ನಟಿ ಶ್ರುತಿ ಹುಟ್ಟುಹಬ್ಬ.

ಈ ವಿಶೇಷ ದಿನವನ್ನು ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಆಚರಿಸಿ ಸಂಭ್ರಮಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಸೆಲೆಬ್ರಿಟಿಗಳಿಗೆ ಹುಟ್ಟು ಹಬ್ಬದ ಶುಭಾಶಯಗಳ ಸಂದೇಶ ಹರಿದು ಬರುತ್ತಿದೆ. ವಿಶೇಷವಾಗಿ ಸಾಹಸಸಿಂಹನ ಸ್ಮರಣೆ ಆಗುತ್ತಿದೆ.

ಕನ್ನಡ ಚಿತ್ರರಂಗದ ಹೃದಯವಂತ ವಿಷ್ಣುವರ್ಧನ್ ಇಂದು ನಮ್ಮೊಂದಿಗಿದ್ದಿದ್ದರೆ ತಮ್ಮ 72ನೇ ಹುಟ್ಟು ಹಬ್ಬವನ್ನು ಅಭಿಮಾನಿಗಳು ಹಾಗೂ ಕುಟುಂಬಸ್ಥರ ಜೊತೆ ಆಚರಣೆ ಮಾಡಿಕೊಳ್ಳುತ್ತಿದ್ದರು. ಆದರೆ, ಅವರು ಇಹಲೋಕ ತ್ಯಜಿಸಿ 13 ವರ್ಷಗಳಾಗಿದ್ದು, ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಇಂದು ಅರ್ಥಪೂರ್ಣವಾಗಿ, ವಿಭಿನ್ನವಾಗಿ ಆಚರಿಸುತ್ತಿದ್ದಾರೆ.ಸೆಪ್ಟೆಂಬರ್ 18 ವಿಷ್ಣುವರ್ಧನ್ ಹುಟ್ಟಿದ ದಿನ, ಡಿಸೆಂಬರ್ 29ಕ್ಕೆ ವಿಷ್ಣು ಚಿತ್ರರಂಗಕ್ಕೆ ಬಂದು 50 ವರ್ಷಗಳು ಪೂರೈಸಲಿವೆ. ಈ ಹಿನ್ನೆಲೆಯಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿನ ವಿಷ್ಣುವರ್ಧನ್ ಸಮಾಧಿ ಬಳಿ ಅವರ ಪ್ರಮುಖ ಸಿನಿಮಾಗಳ 40 ಅಡಿ ಎತ್ತರದ 50 ಕಟೌಟ್ಗಳು ರಾರಾಜಿಸುತ್ತಿವೆ. ಒಂದೇ ಜಾಗದಲ್ಲಿ 40 ಅಡಿಯ ಕಟೌಟ್ಗಳನ್ನು ಹಾಕುತ್ತಿರುವುದು ಇದೇ ಪ್ರಥಮ ಪ್ರಯತ್ನವಾಗಿದ್ದು, ಭಾರತೀಯ ಚಿತ್ರರಂಗದಲ್ಲಿ ಹುಟ್ಟು ಹಬ್ಬಕ್ಕೆ 50 ಕಟೌಟ್ಗಳನ್ನ ಹಾಕಿಸಿಕೊಳ್ಳುತ್ತಿರುವ ಮೊದಲ ನಟ ಎಂಬ ಹೆಗ್ಗಳಿಕೆಗೆ ದಿ. ಡಾ. ವಿಷ್ಣುವರ್ಧನ್ ಪಾತ್ರರಾಗಿದ್ದಾರೆ.ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಸುಮಾರು 220 ಸಿನಿಮಾಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟಿ ಭಾರತಿ ಅವರನ್ನು ಮದುವೆಯಾಗಿ ಸುಂದರ ಜೀವನ ನಡೆಸುತ್ತಿದ್ದರು. ಆದರೆ, 2009ರ ಡಿಸೆಂಬರ್ 30ರಂದು ತಮ್ಮ 59ನೇ ವಯಸ್ಸಿಗೆ ಕೊನೆಯುಸಿರೆಳೆದು ಕನ್ನಡಿಗರ ಕಣ್ಣೀರಿಗೆ ಕಾರಣರಾದರು.

ಹಿಂದೂಸ್ತಾನ್ ಸಮಾಚಾರ್


 rajesh pande