ರಮೇಶ್ ಅರವಿಂದ್ ಹುಟ್ಟುಹಬ್ಬ
ಬೆಂಗಳೂರು, 10 ಸೆಪ್ಟೆಂಬರ್ (ಹಿ.ಸ): ಆ್ಯಂಕರ್ : ಚಿರ ಯೌವನಿಗ ನಟ ರಮೇಶ್ ಅರವಿಂದ್ ಇಂದು (ಸೆ.10) ಹುಟ್ಟುಹಬ್ಬ ಆಚರಿ
ವನವ


ಬೆಂಗಳೂರು, 10 ಸೆಪ್ಟೆಂಬರ್ (ಹಿ.ಸ):

ಆ್ಯಂಕರ್ :

ಚಿರ ಯೌವನಿಗ ನಟ ರಮೇಶ್ ಅರವಿಂದ್ ಇಂದು (ಸೆ.10) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.ಈ ಸಂದರ್ಭದಲ್ಲಿ ಅವರ ಹೊಸ ಚಿತ್ರ ‘ಶಿವಾಜಿ ಸುರತ್ಕಲ್ 2’ ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.

ಅಲ್ಲದೆ ರಮೇಶ್ ಅರವಿಂದ್ ಅವರೊಂದಿಗೆ ಅಭಿಮಾನಿಗಳು ಮಾತನಾಡುವುದಕ್ಕೂ ಅವಕಾಶ ಸಿಗಲಿದ್ದು, ವಾಟ್ಸಾಪ್ ಚಾಟ್ ಮಾಡಿ ಸಂದೇಶ ಕಳುಹಿಸಿದವರಿಗೆ ಖುದ್ದು ರಮೇಶ್ ಅವರೇ ಕರೆ ಮಾಡಿ ಮಾತನಾಡಲಿದ್ದಾರೆ.

ಅಭಿಮಾನಿಗಳು ವಾಟ್ಸಾಪ್ ಸಂದೇಶವನ್ನು ಮೊಬೈಲ್ ಸಂಖ್ಯೆ 8951599009 ಅಥವಾ 8951699009 ತಮ್ಮ ಹೆಸರು, ಊರು ಮೊದಲಾದ ವಿವರಗಳೊಂದಿಗೆ ಕಳುಹಿಸಬೇಕಾಗಿದ್ದು, ವಿಭಿನ್ನವಾಗಿ ಸಂದೇಶ ಕಳುಹಿಸಿದವರಿಗೆ ರಮೇಶ್ ಅವರಿಂದ ಕರೆ ಬರಲಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande