ವಿಶ್ವ ಅಂಗಾಂಗ ದಾನ
ಬೆಂಗಳೂರು, 13 ಆಗಸ್ಟ್ (ಹಿ.ಸ):ಆ್ಯಂಕರ್ ಅಂಗಾಂಗ ದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಮತ್ತು ಅಂಗಾಂಗ ದಾನಕ್ಕೆ
ೀುೀೀ


ಬೆಂಗಳೂರು, 13 ಆಗಸ್ಟ್ (ಹಿ.ಸ):ಆ್ಯಂಕರ್

ಅಂಗಾಂಗ ದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಮತ್ತು ಅಂಗಾಂಗ ದಾನಕ್ಕೆ ಪ್ರತಿಯೊಬ್ಬ ವ್ಯಕ್ತಿಯನ್ನು ಉತ್ತೇಜಿಸುವ ಸಲುವಾಗಿ ಭಾರತದಲ್ಲಿ ಪ್ರತಿ ವರ್ಷ ಆಗಸ್ಟ್ 13 ರಂದು ಸರ್ಕಾರಿ ಸಂಸ್ಥೆಗಳಲ್ಲಿ ಆಚರಿಸಲಾಗುತ್ತದೆ. ಸಾಕಷ್ಟು ಜೀವಗಳನ್ನು ಉಳಿಸುವ ಸಲುವಾಗಿ ಸಾವಿನ ನಂತರ ತಮ್ಮ ಆರೋಗ್ಯಕರ ಅಂಗಗಳನ್ನು ದಾನ ಮಾಡಲು ಜನರನ್ನು ಪ್ರೋತ್ಸಾಹಿಸಲು ಈ ದಿನವು ಮೀಸಲಾಗಿರುವುದು. ಅಂಗಾಂಗ ದಾನಿ ಯಾರೇ ಆಗಿರಬಹುದು ಅವರ ಅಂಗವನ್ನು ತುಂಬಾ ಅಗತ್ಯವಿರುವ ರೋಗಿಗೆ ದಾನ ಮಾಡಬಹುದು. ರೋಗಿಗೆ ಕಸಿ ಮಾಡಲು, ಸಾಮಾನ್ಯ ವ್ಯಕ್ತಿ ನೀಡಿದ ಅಂಗವನ್ನು ಸರಿಯಾಗಿ ಸಂರಕ್ಷಿಸಲಾಗುವುದರಿಂದ ಅದನ್ನು ಸಮಯಕ್ಕೆ ಸರಿಯಾಗಿ ಬಳಸಬಹುದು. ಯಾರೋ ಒಬ್ಬ ವ್ಯಕ್ತಿ ನೀಡಿದ ದೇಹದ ಭಾಗದಿಂದ ಬೇರೆಯೊಬ್ಬರು ಹೊಸ ಜೀವನವನ್ನು ಪಡೆಯಬಹುದು.

ಮೂತ್ರಪಿಂಡಗಳು, ಹೃದಯ, ಮೇದೋಜ್ಜೀರಕ ಗ್ರಂಥಿ, ಕಣ್ಣುಗಳು, ಶ್ವಾಸಕೋಶಗಳು ಮುಂತಾದ ಅಂಗಗಳನ್ನು ದಾನ ಮಾಡುವುದರಿಂದ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರ ಜೀವವನ್ನು ಉಳಿಸಬಹುದು. ಆರೋಗ್ಯವಂತ ಅಂಗಾಂಗಗಳ ಅಲಭ್ಯತೆಯಿಂದಾಗಿ ಹಲವಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಸಾವಿನ ನಂತರ ತಮ್ಮ ಅಂಗಗಳನ್ನು ದಾನ ಮಾಡಲು ಸ್ವಯಂ ಪ್ರೇರಿತರಾಗಿ ಮುಂದು ಬಂದರೇ ಅನೇಕರ ಜೀವಗಳನ್ನು ಮತ್ತು ಜೀವನವನ್ನು ಬದಲಾಯಿಸಬಹುದು ಎಂದು ಜನರು ಅರಿತುಕೊಳ್ಳಲು ಈ ದಿನವು ಪ್ರಮುಖವಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande