ದೇಶವಾಸಿಗಳ ಉತ್ಸಾಹದ ನಿದರ್ಶನ ಹಂಚಿಕೊಂಡಿರುವ ಪ್ರಧಾನಿ
ನವ ದೆಹಲಿ, 13 ಆಗಸ್ಟ್ (ಹಿ.ಸ):ಆ್ಯಂಕರ್ ರಾಷ್ಟ್ರಾದ್ಯಂತ ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ಇರುವ ದೇಶವಾಸಿಗಳ ಉತ್
ದೇಶವಾಸಿಗಳ ಉತ್ಸಾಹದ ನಿದರ್ಶನ ಹಂಚಿಕೊಂಡಿರುವ ಪ್ರಧಾನಿ


ನವ ದೆಹಲಿ, 13 ಆಗಸ್ಟ್ (ಹಿ.ಸ):ಆ್ಯಂಕರ್

ರಾಷ್ಟ್ರಾದ್ಯಂತ ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ಇರುವ ದೇಶವಾಸಿಗಳ ಉತ್ಸಾಹದ ನಿದರ್ಶನಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ದೇಶದ ಜಲ, ಭೂಮಿ ಮತ್ತು ಆಕಾಶದಲ್ಲಿ ಭಾರತದ ತ್ರಿವರ್ಣಧ್ವಜ ಹಾರುವುದನ್ನು ನೋಡಲು ಪ್ರತಿಯೊಬ್ಬ ಭಾರತೀಯನು ಸಂತೋಷ ಪಡುತ್ತಾನೆ ಎಂದು ಅವರು ಸರಣಿ ಟ್ವೀಟ್ ಮಾಡಿದ್ದಾರೆ. ತ್ರಿವರ್ಣಧ್ವಜಗಾಗಿನ ದೇಶದ ಜನತೆಯ ಉತ್ಸಾಹಕ್ಕಾಗಿ ಪ್ರಧಾನಮಂತ್ರಿಯವರು, ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಈ ದಿಟ್ಟ ದೃಶ್ಯಗಳುಭಾರತೀಯರ ಉತ್ಸಾಹ ಮತ್ತು ಸ್ಫೂರ್ತಿಯನ್ನು ತೋರಿಸುತ್ತದೆ. ಭಾರತದ ಭವಿಷ್ಯದ ನಾಯಕರಿಂದ ತುಂಬಿರುವ ಇಂತಹ ತ್ರಿವರ್ಣ ಯಾತ್ರೆಗಳು ಪ್ರತಿಯೊಬ್ಬರಲ್ಲೂ ದೇಶ ಭಕ್ತಿಯ ಉತ್ಸಾಹವನ್ನು ಹೆಚ್ಚಿಸಲಿವೆ ಎಂದು ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande