ಸ್ವಾತಂತ್ರ್ಯೋತ್ಸವ ವಿಶೇಷ ಲೇಖನ
ರಾಯಚೂರು, 12 ಆಗಸ್ಟ್ (ಹಿ.ಸ): ಆ್ಯಂಕರ್: ನಮ್ಮ ಪುಣ್ಯಭೂಮಿ ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನ ಸರ್ವಸ್ವವನ್ನೇ ಬಲ
ಸ್ವಾತಂತ್ರ್ಯೋತ್ಸವ ವಿಶೇಷ ಲೇಖನ


ರಾಯಚೂರು, 12 ಆಗಸ್ಟ್ (ಹಿ.ಸ):

ಆ್ಯಂಕರ್: ನಮ್ಮ ಪುಣ್ಯಭೂಮಿ ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನ ಸರ್ವಸ್ವವನ್ನೇ ಬಲಿಯಾಗಿಟ್ಟು ತ್ಯಾಗಮಯಿಗಳಾಗಿ ಹೋರಾಡಿ ನಮ್ಮ ಬಾಳಿನ ಸೂರ್ಯಕಿರಣಗಳಾಗಿರುವ ಅದೆμÉ್ಟೂೀ ಚೇತನ ಶಕ್ತಿಗಳಿಗೆ, ರಾಷ್ಟ್ರ ನಾಯಕರಿಗೆ, ದೇಶಭಕ್ತರಿಗೆ ತುಂಬು ಹೃದಯದ ಕೃತಜ್ಞತೆಗಳೊಂದಿಗೆ ನಾನೆಂದು ಚಿರಋಣಿ.

ಆತ್ಮೀಯ ಸ್ನೇಹಿತರೇ, ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಮತ್ತು ದೇಶವನ್ನು ಮುಕ್ತಿಗೊಳಿಸುವುದರ ಹಿಂದೆ ಅದೆμÉ್ಟೂೀ ರಾಷ್ಟ್ರ ನಾಯಕರ, ದೇಶ ಭಕ್ತರ ಹಾಗೂ ಯೋಧರ ನೋವು,ತ್ಯಾಗ, ಬಲಿದಾನ,ಪ್ರಾಣ ಹರಣವಾಗಿದೆಯೋ ಅದು ಅಪರಿಮಿತ. ಹಾಗೊಮ್ಮೆ ಕುಳಿತು ನೆನಪಿಸಿಕೊಂಡರೆ ಮೈ ಜುಮ್ಮೆನ್ನೆದೆ ಇರದು. ನಿಜವಾಗಲೂ ಕೂಡ ಅವರ ಅವಿರತ ಹೋರಾಟ ಕ್ರಾಂತಿಕಾರಕ ವಿಚಾರಗಳು, ಸಾತ್ವಿಕವಾದಂತಹ ನಿಲುವು ಹಾಗೂ ಜೀವನವೇ ಸ್ವಾತಂತ್ರಾಕ್ಕಾಗಿ ಎಂಬ ಧೋರಣೆ.

ಇವೆಲ್ಲವುಗಳನ್ನು ಗಮನಿಸಿದಾಗ ನಮ್ಮ ಹೃದಯ ತಲ್ಲಣಿಸದೇ ಇರದು.ಇವರೆಲ್ಲರ ಅವಿರತ ಪ್ರಯತ್ನ, ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ಹೋರಾಟದ ಪ್ರವೃತ್ತಿ,ಡಾ.ಬಾಬಾ ಸಾಹೇಬರ ಸಂವೀಧಾನ ರಚಿಸುವ ಭರವಸೆ, ಸುಭಾμï ಚಂದ್ರಭೋಷರವರ ಉಗ್ರವಾದ ಹೋರಾಟ, ಬಾಲ ಗಂಗಾಧರ ತಿಲಕರ 'ಸ್ವರಾಜ್ಯ ನಮ್ಮ ಅಜನ್ಮಸಿದ್ಧಹಕ್ಕು' ಎಂಬ ಬಲವಾದ ನಿಲುವು ಹಾಗೂ ಭಗತಸಿಂಗ್,ಚಂದ್ರಶೇಖರ ಆಜಾದ್ರಂತಹ ವೀರರು ತೀವ್ರವಾಗಿ ದಾಳಿ ಮಾಡಿ ಜೈಲುವಾಸ ಮಾಡುವುದರೊಂದಿಗೆ ನೇಣಿಗೇರಿ ಭಾರತಮಾತೆಗೆ ಪ್ರಾಣಾರ್ಪಣೆ ಮಾಡಿದ್ದಾರೆ.ಇವರೆಲ್ಲರ ಇಂತಹ ತ್ಯಾಗವೇ,ಇಂದು ಸ್ವಾತಂತ್ರ್ಯದ ಫಲವನ್ನು ನಾವು ಅನುಭವಿಸುತ್ತದ್ದೇವೆ. ಹಾಗೂ ಸುಲಲಿತವಾಗಿ ಆಚರಣೆಯನ್ನು ಮಾಡುತ್ತಿದ್ದೇವೆ.

ಹಾಗಾದರೆ ನಾವು ಅವರಿಗೆ ಋಣಿಯಾಗಿರಬೇಕಾದದ್ದೇನು.?ಸಮರ್ಪಿಸಬೇಕಾದದ್ದೇನು? ಎಂಬುದನ್ನು ಪ್ರಶ್ನಿಸಿಕೊಂಡಾಗ ಇದಕ್ಕೆ ಉತ್ತರ ಖಂಡಿತ ದೊರಕುತ್ತದೆ.ಆದರೆ ನಮ್ಮನ್ನು ನಾವು ಅವಲೋಕನ ಮಾಡಿಕೊಳ್ಳಬೇಕμÉ್ಟ, ಸ್ವಾತಂತ್ರ್ಯ ಬಂದು 75 ವರ್ಷ ಮುಗಿದರೂ ನಮ್ಮಲ್ಲೇ ಇರುವ ಪರಕೀಯತೆಯನ್ನು ದಬ್ಬಾಳಿಕೆಯನ್ನು ಗುಲಾಮಗಿರಿತನವನ್ನು ಮತ್ತು ಒಡೆದು ಆಳುವ ನೀತಿಯನ್ನು ನಾವು ಬಿಟ್ಟಿಲ್ಲ. ಒಂದು ರೀತಿಯಲ್ಲಿ ಬ್ರಿಟಿಷರ ವಂಶಸ್ಥರೇ ಆಗಿದ್ದೇವೆ.ಹಾಗಾದರೆ ಅವರಿಗೂ ನಮಗೂ ವ್ಯತ್ಯಾಸವೇನಾಯಿತು? ಆದ್ದರಿಂದಲೇ ಈ ಅಧಿಕಾರಿಶಾಹಿತನ, ಅಹಂಕಾರ,ಕುಹಕ , ಕುಟಿಲತೆ,ಮೋಸವಂಚನೆ, ಸ್ವಚ್ಛ ರಾಜಕಾರಣ, ಧಮಾರ್ಂಧತೆ,ಪರಸ್ವರ ದ್ವೇಷ,ಅಸೂಯೆ , ಭ್ರμÁ್ಟಚಾರ,ಅನೈತಿಕ ನಡುವಳಿಕೆ, ಭಯೋತ್ಪಾದನೆ ಮುಂತಾದ ಈ ಎಲ್ಲಾ ಪದಗಳಿಗೆ ನಾಂದಿಹಾಡಬೇಕಾದ ಕಾಲ ಇದು.

ಪ್ರತಿಯೊಬ್ಬರ ಮನೆ- ಮನಗಳಲ್ಲಿ ಪ್ರೀತಿ, ಪ್ರೇಮ, ಬ್ರಾತೃತ್ವ,ಸಮನ್ವಯತೆ, ಸ್ವಚ್ಚಂದ ಬದುಕು, ಉತ್ತಮ ರಾಜಕಾರಣ, ಅಧಿಕಾರದಲ್ಲಿ ಉತ್ತಮ ಆಡಳಿತ,ಬಡವ - ಬಲ್ಲಿದ ಎಂಬ ತಾರತಮ್ಯ ಮಾಡದೇ ಇರುವುದು ಇವೆಲ್ಲವುಗಳನ್ನು ಅಳವಡಿಸಿಕೊಂಡು ಮನಸ್ಸನ್ನು ಪರಿವರ್ತಿಸಿಕೊಂಡು ನಾವು ಬದುಕಿ ಇತರರನ್ನು ಬದುಕಲು ಬಿಟ್ಟರೆ ನಿಜವಾದ ನಮ್ಮ ಸ್ವಾತಂತ್ರತೆಗೆ ಗೌರವ ಸಲ್ಲಿಸಿದಂತಾಗಿತ್ತದೆ.

ಗಾಂಧಿಜಿಯವರು ಹೇಳಿದಂತೆ ಗಾಳಿಯನ್ನು ದುಡ್ಡು ಕೊಟ್ಟು ಗಳಿಸಬೇಕಾಗಿಲ್ಲ ಹಾಗೆಯೇ ಸ್ವಾತಂತ್ರ್ಯವೆನ್ನುವುದು ಕೂಡ ನಮ್ಮ ಬದುಕಿನ ಉಸಿರು ಎಂದಿದ್ದಾರೆ . ಪ್ರತಿಯೊಬ್ಬರಲ್ಲಿಯೂ ನಾವು ಸ್ವತಂತ್ರ ರಾಗಿರಬೇಕು ಸ್ವತಂತ್ರವಾಗಿ ಬಾಳಬೇಕು ಎಂಬ ಹೆಬ್ಬಯಕೆ ಇದ್ದೇ ಇರುತ್ತದೆ ಆದರೆ ಅವರಿಗೆ ಪ್ರೇರಣೆ ಸಹಕಾರ ಬೇಕμÉ್ಟೀ..! ನಾವೆಲ್ಲರೂ ಹಾಗೆಯೇ ಬದುಕಬೇಕು.

ಇತ್ತೀಚಿನ ದಿನಗಳಲ್ಲಿ ಭಾರತಮಾತೆಗೆ ನಾವು ಮೈಲಿಗೆ ಮಾಡುತ್ತಿದ್ದೇವೆ. ನಮ್ಮೆಲ್ಲರ ಮಧ್ಯ ಭಾರತಾಂಬೆ ನಲುಗಿ ನೊಂದಿದ್ದಾಳೆ.ಏಕೆಂದರೆ ನಾವು ಮಾಡುವ ಬದುಕುವ ರೀತಿ ಕ್ರೂರತನದಿಂದ ಕೂಡಿದೆ ಹೀಗಾಗಿ ನಮ್ಮ ದೇಶದ ದುಸ್ಥಿತಿ ಹೇಳತೀರದು.

ಭಯೋತ್ಪಾದನೆ, ಅವೈಚಾರಿಕತೆ,ದರೋಡೆ, ಅಮಾಯಕ ಜನರ ಬಲಿ,ಮಹಿಳೆಯರ ಮೇಲಿನ ಆಕ್ರಮಣ ದಮನಕಾರಿ ಪ್ರವೃತ್ತಿ, ಅನೈತಿಕ ರಾಜಕಾರಣ, ಧರ್ಮ-ಧರ್ಮಗಳಲ್ಲಿ ಕಲಹ ಶಿಕ್ಷಣದಲ್ಲಿ ಅವ್ಯವಸ್ಥೆ. ಒಟ್ಟಾರೆಯಾಗಿ ನಾವು ಕ್ಷಣಕ್ಷಣಕ್ಕೂ ಅನೈತಿಕ ಮಾರ್ಗದತ್ತ ಸಾಗುತ್ತಿದ್ದೇವೆ, ಅನೈತಿಕ ಮಾರ್ಗ ನಮಗೆ ಶ್ರೇಷ್ಠ ಎಂಬ ಧೋರಣೆಯನ್ನು ತಾಳುತ್ತಿದ್ದೇವೆ. ಸಾಮಾಜಿಕ, ರಾಜಕೀಯ,ಆರ್ಥಿಕ ಮತ್ತು ಧಾರ್ಮಿಕ,ಮುಂತಾದ ಕ್ಷೇತ್ರಗಳಲ್ಲಿ ಅಧಿಕಾರ ಮದ ಹಣ ಸುಲಿಯುವ ತಂತ್ರಗಾರಿಕೆ ನಮ್ಮಲ್ಲಿ ರಾರಾಜಿಸುತ್ತಿದೆ. ಇವೆಲ್ಲವುಗಳಿಗೆ ನಾವು ಕಡಿವಾಣ ಹಾಕಿ ಉತ್ತಮ ದೇಶ ಸೆವೆಗೆ ಅಣಿಯಾಗಲು ನಾವು ಬದ್ಧರಾಗೋಣವೇ..?

ಭಾರತ ಒಂದು ಪುಣ್ಯಭೂಮಿ,ಶಾಂತಿ ಮತ್ತು ಆಧ್ಯಾತ್ಮಿಕತೆಗೆ ಹೆಸರಾದ ರಾಷ್ಟ್ರ.ಇಲ್ಲಿ ಹಲವಾರು ಸಾಧು ಸಂತರು,ಶರಣರು, ಮಹಾತ್ಮರು ನೆಲೆಸಿ ಪಾವನಗೊಳಿಸಿದ ಪವಿತ್ರ ಭೂಮಿ ಎಂದು ವಿಶ್ವದ ಹಲವಾರು ರಾಷ್ಟ್ರಗಳಿಗೆ ಮಾದರಿಯಾಗಿದೆ.ಇಂತಹ ರಾಷ್ಟ್ರ ಭ್ರμÁ್ಟಚಾರದ ರಾಷ್ಟ್ರದ ಪಟ್ಟಿಗೆ ಸೇರಬೇಕೆ.? ದಯವಿಟ್ಟು ಹಾಗೆ ಮಾಡೋದು ಬೇಡ ಕಣ್ರಿ.ನಮ್ಮ ತಾಯಿಗೆ ನಾವೇ ಚೂರಿ ಹಾಕೋದು ಬೇಡ. ನಾವು ಇಂದು ಭಾರತ ಮಾತೆಗೆ ಸಮರ್ಪಣಾಭಾವದ ಸೇವೆಯ ಜೊತೆಗೆ ಸಂಕಲ್ಪವನ್ನು ಮಾಡೋಣ, ಅದು ಏನೆಂದರೆ ನಾವು ವಿಶ್ವಕುಟುಂಬಿಯಾಗಿ, ಭಾರತ ಮಾತೆಯ ಕಂದರಾಗಿ,ನಾವು ಮಾಡುವ ಕೆಲಸದಲ್ಲಿ ನಿಸ್ವಾರ್ಥಿಯಾಗಿ ದುಡಿಯುತ್ತ ಪರಧರ್ಮ ಸಹಿಷ್ಣುತವಾಗಿ ನಾನು ವಿಶ್ವಬಂಧು ಎಂಬ ವಿಶಾಲ ಮನೋಭಾವನೆಯಿಂದ ಬದುಕಿದರೆ ನಮ್ಮ ಜೀವನ ಸಾರ್ಥಕ ಮತ್ತು ಸ್ವಾತಂತ್ರ್ಯದ ಪದಕ್ಕೆ ಅರ್ಥ ಬಂದಾಗುತ್ತದೆ.

ಆತ್ಮೀಯರೆ.. ಬಡವರಾಗಿ ನಿಷ್ಕಲ್ಮಶ ಮನಸ್ಸಿನಿಂದ ಬದುಕೋಣ,ಆದರೆ ಅನೀತಿ,ಅನ್ಯಾಯ , ಭ್ರμÁ್ಟಚಾರದ ಗಳಿಕೆಯಿಂದ ನಮ್ಮ ಅಂತರಾತ್ಮವನ್ನು ಕೊಂದು ಹೀನ ಜೀವನ ನಡೆಸುವುದು ಬೇಡ. ಬಸವೇಶ್ವರರು ಹೇಳಿದಂತೆ ಲೇಸೆನಿಸಿಕೊಂಡು ಒಂದು ದಿನ ಬದುಕಿದರೆ ಸಾಲದೇ? ಎಂಬಂತೆ ಕೆಟ್ಟವರಾಗಿ ಹಲವಾರು ದಿನಗಳನ್ನು ಕಳೆಯುವುದಕ್ಕಿಂತ ನೀತಿವಂತರಾಗಿ, ವಿಚಾರವಂತರಾಗಿ ಹಾಗೂ ಹೃದಯವಂತರಾಗಿ ಒಂದು ದಿನ ಬದುಕಿದರೆ ಸಾಕು. ನಮ್ಮ ಜನ್ಮ ಸಾರ್ಥಕವಾಗುವುದರ ಜೊತೆಗೆ ಭಾರತಮಾತೆಯ ಹೆಮ್ಮೆಯ ಪುತ್ರರಾಗಿ ಅವಳ ಮಡಿಲಿಗೆ ಸೇರಿದಂತಾಗುತ್ತದೆ.ಆಗಾಗ ಗಾಂಧೀಜಿಯವರ ಸತ್ಯ, ಶಾಂತಿ,ಆಹಿಂಸೆ,ಸತ್ಯಾಗ್ರಹ ಎಂಬ ತತ್ವಗಳು ಹಾಗೂ ಸನ್ನಿವೇಶಕ್ಕೆ ತಕ್ಕಂತೆ ಭಗತ್ ಸಿಂಗರ 'ಇಂಕ್ವಿಲಾಬ್ ಜಿಂದಾಬಾದ್ ' ಎಂಬ ಘೋಷವಾಕ್ಯ ನಮ್ಮ ಜೀವನಪೂರ್ತಿ ಅಳವಡಿಸಿಕೊಳ್ಳೋಣ.ಎಂದು ಶುಭಹಾರೈಸುವುದರ ಜೊತೆಗೆ ಕೊನೆಗೆ ನಮ್ಮ ಬುದ್ಧ ಹೇಳಿದಂತೆ 'ವ್ಯಕ್ತಿಗಳೆಂದೂ ಬಾಹ್ಯ ಆತ್ಮಶಕ್ತಿಯನ್ನು ಆಳಲು ಸಾಧ್ಯವಿಲ್ಲ ಎನ್ನುವ ಪ್ರಜ್ಞೆ ಮೂಡುವ ದಿನವೇ ನಿಜವಾದ ಸ್ವಾತಂತ್ರ್ಯ ಪಡೆಯುತ್ತೇವೆ.' ಎಂಬ ವಾಕ್ಯ ನೆನಪಿಟ್ಟುಕೊಂಡು ಸಾಗೋಣ.

ಲೇಖಕರು: ಸೋಮನಾಥ.ಡಿ. ಪ್ರಾಂಶುಪಾಲರು, ಸರ್ಕಾರಿ ಅಲ್ಪಸಂಖ್ಯಾತರ ಪದವಿ ಪೂರ್ವ ಕಾಲೇಜ್ ರಾಯಚೂರು.


 rajesh pande