ಸಮಾಜಮುಖಿಯಾಗಿ ಆಲೋಚಿಸುವ ಮೂಲಕ ಸಮೃದ್ದ ಭಾರತ ನಿರ್ಮಿಸೋಣ ತಹಸಿಲ್ದಾರ್ ಎಂ ದಯಾನಂದ್
ಸಮಾಜಮುಖಿಯಾಗಿ ಆಲೋಚಿಸುವ ಮೂಲಕ ಸಮೃದ್ದ ಭಾರತ ನಿರ್ಮಿಸೋಣ ತಹಸಿಲ್ದಾರ್ ಎಂ ದಯಾನಂದ್ ಕೋಲಾರ, ಜು.0೩ (ಹಿ.ಸ): ಆ್ಯಂಕರ್
ಸ್ವಾತಂತ್ರೊö್ಯ0ತ್ಸವ ಅಮೃತ ಮಹೋತ್ಸವ ಅಂಗವಾಗಿ ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ರಂಗವಿಜಯ ತಂಡದಿ0ದ ಸ್ವಾತಂತ್ರ ಸಮರ ಕರುನಾಡು ಅಮರ ನಾಟಕ ಪ್ರದರ್ಶನ ನಡೆಯಿತು.


ಸಮಾಜಮುಖಿಯಾಗಿ ಆಲೋಚಿಸುವ ಮೂಲಕ ಸಮೃದ್ದ ಭಾರತ ನಿರ್ಮಿಸೋಣ ತಹಸಿಲ್ದಾರ್ ಎಂ ದಯಾನಂದ್

ಕೋಲಾರ, ಜು.0೩ (ಹಿ.ಸ):

ಆ್ಯಂಕರ್ : ಸ್ವಾತಂತ್ರö್ಯದ ಅಮೃತ ಮಹೋತ್ಸವದ ಆನಂದದಲ್ಲಿರುವ ನಾವು ನಮಗಾಗಿ ಹೋರಾಡಿದ ಸ್ವಾತಂತ್ರ ವೀರರ ತ್ಯಾಗ ಬಲಿದಾನಗಳನ್ನು ಸದಾ ನೆನಪಿಸಿಕೊಳ್ಳಬೇಕು ಹಾಗೂ ಅವರ ಶ್ರಮಕ್ಕೆ ಸದಾ ವಂದಿಸಬೇಕು ಎಂದು ಬಂಗಾರಪೇಟೆ ತಹಸಿಲ್ದಾರ್ ಎಂ. ದಯಾನಂದ್ ನುಡಿದರು.

ಕೆ.ಜಿ.ಎಫ್ ಬೆಮೆಲ್ನ ಕನ್ನಡ ಮಿತ್ರರು ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಂಗ ವಿಜಯಾ ಟ್ರಸ್ಟ್ನ ಸ್ವಾತಂತ್ರ ಸಮರ ಕರುನಾಡು ಅಮರ ನಾಟಕ ಪ್ರದರ್ಶನದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಲಕ್ಷಾಂತರ ಜನರ ತ್ಯಾಗ ಬಲಿದಾನದ ಫಲವನ್ನು ಇಂದು ನಾವು ಅನುಭವಿಸುತ್ತಿದ್ದೇವೆ. ಆ ಹೋರಾಟಗಾರರು ಈಗಿನ ಜನರಂತೆ ನಾವು ನಮ್ಮ ಬದುಕು ಎಂಬAತಿದ್ದಿದ್ದರೆ ಸ್ವಾತಂತ್ರ ದಕ್ಕುತ್ತಿರಲಿಲ್ಲ ಇಂದಿನ ಜನರು ಬರಿ ಸಂಪಾದನೆ ಹಾಗೂ ಖರ್ಚಿನ ಬಗ್ಗೆ ಮಾತ್ರ ಆಲೋಚಿಸಿ ಹೆಚ್ಚು ಸಂಪಾದನೆ ಅತೀ ಹೆಚ್ಚು ವ್ಯಯ ಇದೇ ಬದುಕು ಎಂದುಕೊಳ್ಳುತ್ತಿದ್ದಾರೆ. ಸಮಾಜಮುಖಿಯಾಗಿ ಆಲೋಚಿಸುವ ಮನಸ್ಸುಗಳು ಇಲ್ಲವಾಗಿವೆ ಎಂದರು.

ಬೆಮೆಲ್ನ ಸಂಕೀರ್ಣದ ಪ್ರಧಾನ ವ್ಯವಸ್ಥಾಪಕರಾದ ಈಶ್ವರ್ ಭಟ್ ಮಾತನಾಡಿ ಕೋಲಾರದ ಮಣ್ಣಿನಲ್ಲಿ ಸ್ವಾತಂತ್ರಕ್ಕಾಗಿ ದುಡಿದ ಮಿಡಿದ ಲಕ್ಷಾಂತರ ಜನ ಒಂದು ಕಡೆಯಾದರೆ ಅದ್ಯಾವುದರ ಅರಿವಿಲ್ಲದೆ ಸ್ವಾತಂತ್ರವೆ0ದರೆ ಸ್ವೆಚ್ಚಾಚಾರ ಎಂದು ಬದುಕುವ ಜನರನ್ನು ಕಂಡು ಬೇಸರವಾಗುತ್ತದೆ ಎಂದರು.

ಕನ್ನಡ ಸಂಘದ ಅಧ್ಯಕ್ಷ ಪಲ್ಲವಿಮಣಿ ಮಾತನಾಡುತ್ತಾ ಸ್ವಾತಂತ್ರ ಯೋಧರ ತ್ಯಾಗ ಬಲಿದಾನದ ಕಥೆಗಳು ನಮ್ಮಲ್ಲಿ ರೋಮಾಂಚನ ಉಂಟುಮಾಡಿದರೆ ಪ್ರತಿಯೊಬ್ಬ ಬಾರತೀಯನಿಗೂ ತಾನೂ ಕೂಡ ತಾಯಿ ನೆಲದ ಉಳಿವಿಗೆ ದುಡಿಯಬೇಕೆಂಬ ಕಿಚ್ಚು ಹೆಚ್ಚಿಸುತ್ತದೆ. ಅವರ ಬದುಕುಗಳು ನಮಗೆ ಆದರ್ಶ ಅವರ ಹಾದಿ ನಮಗೆ ಮಾರ್ಗದರ್ಶಕ ಆ ನಿಟ್ಟಿನಲ್ಲಿ ನಾವು ಸಾಗೋಣ ಎಂದರು.

ಪ್ರಧಾನ ವ್ಯವಸ್ಥಾಪಕರಾದ ಕೆ.ಬಿ ನರೇಂದ್ರ ಕನ್ನಡ ಮಿತ್ರರು ಸಂಘದ ಅಧ್ಯಕ್ಷರಾದ ಆರ್.ಎ.ಎಸ್ ಪಾಟೀಲ್ ಹಾಗೂ ಪ್ರಧಾನ ಕರ್ಯದರ್ಶಿ ಮೀನಾ ಮೋಹನ್ ಉಪಾಧ್ಯಕ್ಷ ಪೀತಾಂಬರರಾವ್, ಶ್ರೀನಿವಾಸಮೂರ್ತಿ ಮುಂತಾದವರು ಉಪಸ್ಥಿತರಿದ್ದರು ಕಾರ್ಮಿಕ ಕಲ್ಯಾಣ ನಿಧಿ ಕಾರ್ಯದರ್ಶಿ ಬಿ.ಎಸ್. ಪರಮೇಶ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ರಂಗ ವಿಜಯಾ ಸಂಸ್ಥೆ ಅಭಿನಯಿಸಿದ ಸ್ವಾತಂತ್ರ ಸಮರ ಕರುನಾಡು ಅಮರ ನಾಟಕ ನೆರದಿದ್ದ ಪ್ರೇಕ್ಷಕರ ಮನಗೆದ್ದಿದ್ದಲ್ಲದೆ ಸ್ವಾತಂತ್ರದ ಕಿಚ್ಚು ಹಚ್ಚಿಸುವಂತಿತ್ತು. ಅಬ್ಬಕ್ಕನಾಗಿ ರಕ್ಷಿತಾ, ಚೆನ್ನಮ್ಮಳಾಗಿ ಪಲ್ಲವಿ, ವಿಕ್ಟೋರಿಯಾ ರಾಣಿಯಾಗಿ ಅನನ್ಯ ಪ್ರಸಾದ್, ಪೋರ್ಚುಗೀಸ್ ದೊರೆಯಾಗಿ ಚಂದು, ಸಂಗೊಳ್ಳಿ ರಾಯಣ್ಣನಾಗಿ ರಘುರಾಜನಂದ ಪ್ರೇಕ್ಷಕರ ಮನಗೆದ್ದರೆ ಭಾರತಾಂಬೆಯಾಗಿ ಗೀತಾರಾಘವೆಂದ್ರ, ನಿರೂಪಕರಾಗಿ ಚಂದ್ರಿಕಾ ಮತ್ತು ಎಂಸಿ. ಜ್ಯೋತಿ ತಾತನಾಗಿ ವಿನೋದ್ಪೂಜಾರ್, ಭಾರತ ಮಾತೆಯಾಗಿ ಸುಧಾರಾಣಿಕಲಾಪ್ರಿಯ ಪ್ರೇಕ್ಷಕರ ಮನದಲ್ಲಿ ಉಳಿದರು. ಒಟ್ಟಾರೆ ನಾಟಕ ಬೆಮೆಲ್ ಕನ್ನಡ ಮಿತ್ರರ ಮನಗೆದ್ದಿದೆ.

ಚಿತ್ರ : ಸ್ವಾತಂತ್ರೊö್ಯ0ತ್ಸವ ಅಮೃತ ಮಹೋತ್ಸವ ಅಂಗವಾಗಿ ಕೋಲಾರ ಜಿಲ್ಲೆಯ ಕೆಜಿಎಫ್ನಲ್ಲಿ ರಂಗವಿಜಯ ತಂಡದಿ0ದ ಸ್ವಾತಂತ್ರ ಸಮರ ಕರುನಾಡು ಅಮರ ನಾಟಕ ಪ್ರದರ್ಶನ ನಡೆಯಿತು.


 rajesh pande