ಮಾಂಸಹಾರಿ ಹೊಟೆಲ್ ತಂದೂರಿ ಚಿಕನ್ನಲ್ಲಿ ಹುಳ ; ನಗರಸಭಾ ಅಧಿಕಾರಿಗಳಿಂದ ಹೋಟೆಲ್ಗೆ ಬೀಗ
ಮಾಂಸಹಾರಿ ಹೊಟೆಲ್ ತಂದೂರಿ ಚಿಕನ್ನಲ್ಲಿ ಹುಳ ; ನಗರಸಭಾ ಅಧಿಕಾರಿಗಳಿಂದ ಹೋಟೆಲ್ಗೆ ಬೀಗ ಕೋಲಾರ, ಜು.0೩ (ಹಿ.ಸ): ಆ್ಯಂಕ
ಕೆಜಿಎಫ್ ನಗರಸಭೆ ಅಧಿಕಾರಿಗಳು ಹೊಟೆಲ್‌ಗೆ ಬೀಗ ಹಾಕಿದರು.


ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಮಾಂಸಹಾರಿ ಹೋಟೆಲ್‌ನಲ್ಲಿ ಗ್ರಾಹಕರು ಖರೀದಿಸಿದ ಚಿಕಿನ್ ತಂದೂರಿಯಲ್ಲಿ ಹುಳ ಕಾಣಿಸಿದೆ


ಮಾಂಸಹಾರಿ ಹೊಟೆಲ್ ತಂದೂರಿ ಚಿಕನ್ನಲ್ಲಿ ಹುಳ ; ನಗರಸಭಾ ಅಧಿಕಾರಿಗಳಿಂದ ಹೋಟೆಲ್ಗೆ ಬೀಗ

ಕೋಲಾರ, ಜು.0೩ (ಹಿ.ಸ):

ಆ್ಯಂಕರ್ : ಗ್ರಾಹಕರೊಬ್ಬರು ಮನೆಗೆ ಪಾರ್ಸೆಲ್ ತೆಗೆದುಕೊಂಡು ಹೋದ ತಂದೂರಿ ಚಿಕನ್ನಲ್ಲಿ ಹುಳಗಳು ಕಂಡುಬ0ದಿದ್ದು ಹೋಟೆಲ್ಗೆ ಬೀಗ ಹಾಕಲಾಗಿದೆ. ಕೆಜಿಎಫ್ ನಗರದ ಪ್ರಿಚಾರ್ಡ್ ರಸ್ತೆಯಲ್ಲಿರುವ ಹೋಟೆಲ್ ವಿರುದ್ದ ನಗರಸಭೆ ಕ್ರಮ ಕೈಗೊಂಡಿದೆ.

ಇತ್ತೀಚಿನ ದಿನಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿ ವೇಳಿ ಊಟದ ಸಮಯದಲ್ಲಿ ಚಿಕನ್ ಕಬಾಬ್ ಮತ್ತು ತಂಡೂರಿ ಚಿಕನ್ ತಿನ್ನುವುದು ಯುವಕರಿಗೆ ಅಭ್ಯಾಸವಾಗಿದೆ, ಆದರೆ ಹೋಟೆಲ್ನಿಂದ ತೆಗೆದುಕೊಂಡು ಹೋಗಿ ತಿನ್ನುವುದು ಅಷ್ಟು ಸುರಕ್ಷಿತವಲ್ಲ ಅದಕ್ಕೆ ಕೆ.ಜಿಎಫ್ ನಗರದ ಪ್ರಿಚಾರ್ಡ್ ರಸ್ತೆಯಲ್ಲಿರುವ ಮಾಂಸಹಾರಿ ಹೋಟೆಲ್ ಗ್ರಾಹಕರಿಗೆ ನೀಡಿರುವ ತಂದೂರಿ ಚಿಕನ್ ಹೋಟೆಲ್ನವರು ಮಾರಾಟವಾಗದೆ ಉಳಿಯುವ ಮಾಂಸವನ್ನು ಪ್ರಿಡ್ಜ್ನ್ಲ್ಲಿ ಇಡುತ್ತಾರೆ ಆದರೆ ತಡವಾದರೆ ಹುಳುಗಳು ವೃದ್ದಿಯಾಗುತ್ತವೆ. ಕೆಜಿಎಫ್ ನಗರದ ಹೈಗ್ರೌಂಡ್ ನಿವಾಸಿ ವಿನೋದ್ ಕುಮಾರ್ ಹೋಟೆಲ್ನಿಂದ ಮಧ್ಯಾಹ್ನ ಊಟಕ್ಕೆ ತಂಡೂರಿ ಚಿಕನ್ ಪಾರ್ಸೆಲ್ ತೆಗೆದುಕೊಂಡು ಹೋದರು.

ಮನೆಯಲ್ಲಿ ಪಾರ್ಸೆಲ್ ತೆಗೆದು ನೋಡೊದಾಗ ತಂಡೂರಿ ಚಿಕನ್ನಲ್ಲಿ ಹುಳುಗಳು ಕಾಣಿಸಿಕೊಂಡು ವಾಂತಿ ಬಂದ0ತಾಯಿತು. ಕೂಡಲೇ ವಿನೋದ್ ಕುಮಾರ್ ನಗರಸಭೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಹೋಟೆಲ್ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದರು ಆದರೆ ನಗರಸಭೆಯವರು ಆಗಲಿ ನೋಡೋಣ ಎಂದು ಕ್ರಮ ಕೈಗೊಳ್ಳಲು ನಿಧಾನ ಮಾಡಿದರು. ಇದರಿಂದ ಕುಪಿತಗೊಂಡ ವಿನೊಧ್ ಕುಮಾರ್ ಕೋಲಾರದ ಜಿಲ್ಲಾಧಿಕಾರಿಗಳ ವೆಂಕಟ್ರಾಜಾ ರವರಿಗೆ ದೂರವಾಣಿ ಕರೆ ಮಾಡಿದರು. ಜಿಲ್ಲಾಧಿ ಕಾರಿಗಳಿಗೆ ಹುಳು ಇದ್ದ ತಂದೂರಿ ಚಿಕನ್ ಅನ್ನು ವಾಟ್ಸಾಪ್ನಲ್ಲಿ ಕಳುಹಿಸಿದರು. ವಾಟ್ಸಾಪ್ ಸಂದೇಶ ನೋಡಿದ ಜಿಲ್ಲಾಧಿ ಕಾರಿ ನಗರಸಭೆ ಅಧಿ ಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಕೂಡಲೇ ಹೋಟೆಲ್ಗೆ ದಾವಿಸಿ ಪ್ರಿಡ್ಜ್ ನಲ್ಲಿದ್ದ ತಂಡೂರಿ ಚಿಕನ್ ನಗರಸಭೆ ಸಿಬ್ಬಂದಿ ವಶಪಡಿಸಿಕೊಂಡರು. ಆ ನಂತರ ಹೋಟೆಲ್ಗೆ ಬೀಗ ಜಡಿದರು.

ಘಟನೆಯ ಬಗ್ಗೆ ಮಾತನಾಡಿದ ಕೆಜಿಎಫ್ ನಗರಸಭೆ ಪೌರಾಯುಕ್ತ ನವೀನ್ ಚಂದ್ರ ಹೋಟೆಲ್ನಿಂದ ಸಂಗ್ರಹಿಸಲಾಗಿರುವ ಮಾಂಸವನ್ನು ಬೆಂಗಳೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಒಂದು ವೇಳೆ ಕಳಪೆ ಗುಣಮಟ್ಟವಾಗಿದ್ದರೆ ಆಹಾರ ಸುರಕ್ಷತಾ ಕಾಯ್ದೆ ಮತ್ತು ಮುನ್ಸಿಫಲ್ ಕಾಯ್ದೆಯ ಪ್ರಕಾರ ಹೋಟೆಲ್ ಲೈಸೆನ್ಸ್ರದ್ದುಗೊಳಿಸಿ ಕ್ರ ಕೈಗೊಳ್ಳಲಾಗುವುದು.

ಬಹುತೇಕ ಹೋಟೆಲ್ಗಳಲ್ಲಿ ಉಳಿದ ಮಾಂಸಹಾರವನ್ನು ಪ್ರಿಡ್ಜ್ನ್ಲ್ಲಿ ಇರಿಸಲಾಗುತ್ತದೆ. ಮಾರನೇ ದಿನ ಅದೇ ಮಾಂಸವನ್ನು ಗ್ರಾಹಕರಿಗೆ ಉಣ ಬಡಿಸಲಾಗುತ್ತದೆ. ಇಂತಹ ಮಾಂಸಹಾರ ಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕ ಆದರೆ ಗ್ರಾಹಕರು ಎಚ್ಚರಿಕೆ ವಹಿಸುವುದಿಲ್ಲ.

ಚಿತ್ರಗಳು

೧. ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಮಾಂಸಹಾರಿ ಹೋಟೆಲ್ನಲ್ಲಿ ಗ್ರಾಹಕರು ಖರೀದಿಸಿದ ಚಿಕಿನ್ ತಂದೂರಿಯಲ್ಲಿ ಹುಳ ಕಾಣಿಸಿದೆ

೨. ಕೆಜಿಎಫ್ ನಗರಸಭೆ ಅಧಿಕಾರಿಗಳು ಹೊಟೆಲ್ಗೆ ಬೀಗ ಹಾಕಿದರು.


 rajesh pande