ಪರಿಸರ ಅಭಿವೃದ್ಧಿ ಸಂಸ್ಥೆಯಿ0ದ ಗಿಡ ನೆಡುವ ಮೂಲಕ ಪರಿಸರ ಅಭಿಯಾನ
ಪರಿಸರ ಅಭಿವೃದ್ಧಿ ಸಂಸ್ಥೆಯಿ0ದ ಗಿಡ ನೆಡುವ ಮೂಲಕ ಪರಿಸರ ಅಭಿಯಾನ ಕೋಲಾರ, ಜು.0೩ : ಆ್ಯಂಕರ್ : ಗಿಡ ಬೆಳೆಸುವುದು ಪ್ರ
 ಕೋಲಾರ ತಾಲ್ಲೂಕಿನ ಧನಮಟ್ನಹಳ್ಳಿ ಬೆಟ್ಟದಲ್ಲಿ ನವ ಸಮಾಜ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆಯಿ0ದ ಗಿಡನೆಡಲಾಯಿತು.


ಪರಿಸರ ಅಭಿವೃದ್ಧಿ ಸಂಸ್ಥೆಯಿ0ದ ಗಿಡ ನೆಡುವ ಮೂಲಕ ಪರಿಸರ ಅಭಿಯಾನ

ಕೋಲಾರ, ಜು.0೩ :

ಆ್ಯಂಕರ್ : ಗಿಡ ಬೆಳೆಸುವುದು ಪ್ರತಿಯೊಬ್ಬರ ಹವ್ಯಾಸವಾಗಬೇಕು. ಗಿಡ ಬೆಳೆಸುವ ಕಾರ್ಯದಲ್ಲಿ ಸಂಘಟನೆಯ ಯವಕರು ಉತ್ಸುಕರಾಗಿ ಪಾಲ್ಗೊಂಡಿರುವುದು ಸಂತಸದ ವಿಷಯ. ಇದು ಇತರರಿಗೂ ಪ್ರೇರಣೆ ನೀಡಲಿ ಎಂಬುದು ನಮ್ಮ ಉದ್ದೇಶ ಎಂದು ನವ ಸಮಾಜ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಷಮ್ಸ್ ಎಂ.ಬಿ ತಿಳಿಸಿದರು.

ನವ ಸಮಾಜ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆಯಿ0ದ ಭಾನುವಾರ ಕೋಲಾರ ತಾಲ್ಲೂಕು ಧನಮಟ್ನಹಳ್ಳಿಯ ಬೆಟ್ಟದಲ್ಲಿ ನೂರೊಂದು ಗಿಡ ನೇಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಟ್ಟದ ಮೇಲೆ ಗಿಡ ನೇಡುವ ಮುಖ್ಯ ಉದ್ದೇಶ ಈ ಬೆಟ್ಟದ ಮೇಲೆ ಹಣ್ಣಿನ ಗಿಡಗಳನ್ನು ನೇಡುವ ಮೂಲಕ ಪ್ರಾಣಿ ಪಕ್ಷಿಗಳಿಗೆ ಹಣ್ಣು ಹಂಪಲು ದೊರೆಯಲಿ ಮತ್ತು ಪರಿಸರ ಸಂರಕ್ಷಣೆಯಾಗಲಿ, ನಮ್ಮ ಕೋಲಾರದಲ್ಲಿ ಎಲ್ಲಾ ಕಡೆ ಹಸಿರು ಕಾಣಬೇಕು ಎಂಬುದು ನಮ್ಮ ಸಂಸ್ಥೆಯ ಮುಖ್ಯ ಆಶಯವಾಗಿದೆ. ನಮ್ಮ ಸಂಸ್ಥೆಯಲ್ಲಿ ಎಲ್ಲಾ ಯುವಕರು ಇರುವುದರಿಂದ ನಮಗೆ ಸಮಾಜ ಸೇವೆ ಮತ್ತು ಪರಿಸರ ಅಭಿವೃದ್ಧಿ ಮಾಡಲು ತುಂಬಾ ಅನುಕೂಲವಾಗುತ್ತಿದೆ. ಸಂಸ್ಥೆಯ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದಗಳು ಎಂದರು.

ಸAಘದ ಉಪಾಧ್ಯಕ್ಷ ಮುಸ್ತಫಾ ಮಾತನಾಡಿ ಈ ದಿನ ನಾವೆಲ್ಲರೂ ಯುವಕರು ಸೇರಿ ಗಿಡ ನೇಡುವ ಕಾರ್ಯಕ್ರಮ ಮಾಡುತ್ತಿರುವುದು ತುಂಬಾ ಸಂತೋಷವಾಗುತ್ತಿದೆ. ಈ ರೀತಿಯ ಕಾರ್ಯಕ್ರಮಗಳು ಇನ್ನೂ ಹೆಚ್ಚಾಗಿ ಆಗಲಿ. ಹಾಲಿ ಕೊವಿಡ್ ಬಂದ ಸಂಧರ್ಭದಲ್ಲಿ ಆಕ್ಸಿಜನ್ ಮುಂತಾದವುಗಳ ಬಗ್ಗೆ ತುಂಬಾ ತೊಂದರೆ ಆಯಿತು ನಾವು ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಗಿಡ ನೇಡಲು ಅಭ್ಯಾಸ ಮಾಡಿಕೊಳ್ಳಬೇಕು. ಹಾಗೆಯೇ ಎಲ್ಲಾ ಯುವಕರು ಗಿಡ ನೆಡುವ ಕಾರ್ಯದಲ್ಲಿ ಕೈಜೋಡಿಸಿ ಪರಿಸರ ಅಭಿವೃದ್ಧಿ ಮಾಡಬೇಕು ಎಂದರು

ಕಲಾ ತಂಡದ ಅಧ್ಯಕ್ಷೆ ಪೂಜಾ ಮಾತನಾಡಿ ಗಿಡ ಬೆಳೆಸುವುದರಿಂದ ಪ್ರಾಣಿ ಪಕ್ಷಿಗಳಿಗೆ ಆಶ್ರಯ ಮತ್ತು ಹಣ್ಣು ಹಂಪಲು ದೊರೆಯುತ್ತದೆ. ಕೈಲಾದರೆ ಪ್ರತಿಯೊಬ್ಬರು ಸಹ ಒಂದೊ0ದು ಗಿಡವನ್ನು ನೆಟ್ಟು ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡಿ ಪರಿಸರವನ್ನು ಉಳಿಸಿ ಬೆಳಸಿ ಪರಿಸರವನ್ನು ಉಳಿಸಿ ಎಂದರು.

ಗೌರವ ಸಲಹೆಗಾರ ಚಲ್ಲಹಳ್ಳಿ ಶ್ರೀನಾಥ್ ಮಾತನಾಡಿ ಯುವಕರು ಇಂತಹ ಕಾರ್ಯಕ್ರಮಗಳಿಂದ ಪ್ರೇರಣೆ ಹೊಂದಬೇಕು. ಯುವ ಸಮುದಾಯವು ಸಮಾಜ ಮುಖಿಯಾಗಿ ಕೆಲಸ ಮಾಡಿದರೆ ನವ ಸಮಾಜ ನಿರ್ಮಾಣವು ಅಸಾಧ್ಯವೇನಲ್ಲ. ಗಿಡ ನೆಡುವ ಮೂಲಕ ಮುಂದಿನ ಪೀಳಿಗೆಗೆ ಅಮ್ಲಜನಕವು ಹೇರಳವಾಗಿ ದೊರೆಯಲು ಕಾರ್ಯೋನ್ಮುಕರಾಗಲು ತಿಳಿಸಿದರು.

ಗೌರವಾಧ್ಯಕ್ಷರು ವಿನಯ್ ಕುಮಾರ್ ಮಾತನಾಡಿ ಕಾರ್ಬನ್ ಡೈ ಆಕ್ಸೈಡ್ ತೆಗೆದುಕೊಂಡು ಮನುಷ್ಯನಿಗೆ ಆಮ್ಲಜನಕ ನೀಡುವ ಮರಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ನಮ್ಮ ದೇಶ ಯುವ ಸಮುದಾಯವನ್ನು ಹೊಂದಿರುವ ಬಹುದೊಡ್ಡ ದೇಶ ಆಗಾಗಿ ಯುವಕರು ಮುಂದೆ ಬರಬೇಕು ಗಿಡ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಚಂದ್ರು, ಅಂಚೆ ವಿಜಯ್, ಸಮಾಜ ಸೇವಕ ಧನಮಟ್ನಹಳ್ಳಿ ವೆಂಕಟೇಶ್, ಸವಿತಾ, ಸೊನಿಯ, ಸೌಮ್ಯ, ಚಂದನ, ಶ್ವೇತ, ಸುಮಂತ್, ರಮ್ಯ, ವೈಶಾಲಿ, ಸೌಂದರ್ಯ, ವಿನಯ್ ಮತ್ತು ಪೂಜಾ ಭಾಗವಹಿಸಿದರು.

ಚಿತ್ರ : ಕೋಲಾರ ತಾಲ್ಲೂಕಿನ ಧನಮಟ್ನಹಳ್ಳಿ ಬೆಟ್ಟದಲ್ಲಿ ನವ ಸಮಾಜ ಮತ್ತು ಪರಿಸರ ಅಭಿವೃದ್ಧಿ ಸಂಸ್ಥೆಯಿ0ದ ಗಿಡನೆಡಲಾಯಿತು.


 rajesh pande