ಸೈನಿಕ, ರೈತ, ವೈದ್ಯರು ದೈವಸ್ವರೂಪಿಗಳು : ವಸತಿ ಸಚಿವ ವಿ.ಸೋಮಣ್ಣ
ಬೆಂಗಳೂರು, 3 ಜುಲೈ (ಹಿ.ಸ): ಆ್ಯಂಕರ್ : ದೇಶದ ರಕ್ಷಣೆ ಮಾಡುವ ಸೈನಿಕ, ಅನ್ನ ನೀಡುವ ರೈತ ಮತ್ತು ಆರೋಗ್ಯವಂತ ಸಮಾಜ ಕೊಡ
ದೇಶದ ರಕ್ಷಣೆ ಮಾಡುವ ಸೈನಿಕ, ಅನ್ನ ನೀಡುವ ರೈತ ಮತ್ತು ಆರೋಗ್ಯವಂತ ಸಮಾಜ ಕೊಡುಗೆ ನೀಡುವ ವೈದ್ಯರು ದೈವ ಸ್ವರೂಪಿಗಳು ಎಂದು ವಸತಿ ಸಚಿವ ಸೋಮಣ್ಣ ಹೇಳಿದರು.


ಬೆಂಗಳೂರು, 3 ಜುಲೈ (ಹಿ.ಸ):

ಆ್ಯಂಕರ್ : ದೇಶದ ರಕ್ಷಣೆ ಮಾಡುವ ಸೈನಿಕ, ಅನ್ನ ನೀಡುವ ರೈತ ಮತ್ತು ಆರೋಗ್ಯವಂತ ಸಮಾಜ ಕೊಡುಗೆ ನೀಡುವ ವೈದ್ಯರು ದೈವ ಸ್ವರೂಪಿಗಳು ಎಂದು ವಸತಿ ಸಚಿವ ಸೋಮಣ್ಣ ಹೇಳಿದರು.

ವಿ.ಸಿ.ಎನ್.ಡಾಕ್ಟರ್ಸ್ ವೆಲ್ ಫೇರ್ ಆಸೋಸಿಯೇಷನ್ ವತಿಯಿಂದ ವಿಜಯನಗರ ಕಾಸಿಯ ಭವನದಲ್ಲಿ ವೈದ್ಯರ ದಿನಾಚರಣೆಯಲ್ಲಿ ಪಾಲ್ಕೊಂಡು ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ.ಅಂಜನಪ್ಪ, ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯ ಎಸ್.ರಾಜುರವರು,ಒಕ್ಕಲಿಗರ ಸಂಘದ ಅಧ್ಯಕ್ಷ ಪುತ್ತೂರಾಯ,ಚಲನಚಿತ್ರ ನಟ ಶರಣ್,ಆರೋಗ್ಯಧಿಕಾರಿ ಡಾ ಶಿವಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ಸಚಿವರಾದ ವಿ.ಸೋಮಣ್ಣರವರು ಮಾತನಾಡಿ ಕೊವಿಡ್-19 ಸಾಂಕ್ರಮಿಕ ರೋಗದಿಂದ ಬಡವರಿಗೆ ಕೊರೋನ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಸಾವನ್ನಪ್ಪಿದ್ದರು ಇಂತಹ ಪರಿಸ್ಥಿತಿ ಬಡವರಿಗೆ ಬರಬಾರದು ಎಂದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ದಾಸರಹಳ್ಳಿಯಲ್ಲಿ 290ಹಾಸಿಗೆ ಪಂತರಪಾಳ್ಯದಲ್ಲಿ 200ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಅಮ್ಲಜನಕ ಘಟಕ ಸಹ ಸ್ಥಾಪಿಸಲಾಗಿದೆ ಇನ್ನು ಮೂರು ತಿಂಗಳಲ್ಲಿ ಲೋಕರ್ಪಣೆ ಮಾಡಲಾಗುವುದು. ಕಿಡ್ನಿ ಡಯಾಲಿಸಿಸ್ ಚಿಕಿತ್ಯೆಗೆ 68ಬೆಡ್ ಗಳ ಆಸ್ಪತ್ರೆ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಜನರ ಜೀವ,ಜೀವನ ರಕ್ಷಣೆಗೆ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯ ಡಾ ಎಸ್.ರಾಜುರವರು ಮಾತನಾಡಿ ವೈದ್ಯರು ಸಹ ಮನುಷ್ಯರು ಅವರ ಸಹ ಎಲ್ಲರಂತೆ ಕುಟುಂಬವಿದೆ .

ರೋಗಿಗಳ ಆರೈಕೆಗೆ ಕುಟುಂಬದ ಕಡೆ ಗಮನಹರಿಸದೆ ಕೆಲಸ ನಿರ್ವಹಿಸುತ್ತಾರೆ. ವೈದ್ಯರು ಸಹ ಮಾನಸಿಕ,ದೃಹಿಕವಾಗಿ ಇರಲು ಕ್ರೀಡಾಕೂಟ,ಯೋಗ ಶಿಬಿರ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೊರೋನ ವಾರಿಯರ್ಸ್ ಗಳಾದ ವೈದ್ಯರುಗಳಿಗೆ ಸನ್ಮಾನಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್


 rajesh pande