ವಿಶ್ವಾಸಮತ ಯಾಚನೆ ನೂರಕ್ಕೆ ನೂರಷ್ಟು ಗೆಲುವು: ಡಿಸಿಎಂ ಫಡ್ನವಿಸ್ ವಿಶ್ವಾಸ
ಮುಂಬೈ, 03 ಜುಲೈ (ಹಿ.ಸ): ಆ್ಯಂಕರ್ : ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಾಳೆ ನಡೆಯಲಿರುವ ವಿಶ್ವಾಸ ಮತ ಯಾಚನೆಯಲ್ಲಿ ನೂರಕ
ವಿಶ್ವಾಸಮತ ಯಾಚನೆ ನೂರಕ್ಕೆ ನೂರಷ್ಟು ಗೆಲುವು: ಡಿಸಿಎಂ ಫಡ್ನವಿಸ್ ವಿಶ್ವಾಸ


ಮುಂಬೈ, 03 ಜುಲೈ (ಹಿ.ಸ):

ಆ್ಯಂಕರ್ : ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಾಳೆ ನಡೆಯಲಿರುವ ವಿಶ್ವಾಸ ಮತ ಯಾಚನೆಯಲ್ಲಿ ನೂರಕ್ಕೆ ನೂರರಷ್ಟು ಗೆಲವು ಸಾಧಿಸುವ ವಿಶ್ವಾಸವನ್ನು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವ್ಯಕ್ತಪಡಿಸಿದ್ದಾರೆ.

ಇಂದು ನಡೆದ ಸ್ಪೀಕರ್ ಚುನಾವಣೆಯಲ್ಲಿ 2 ಶಾಸಕರು ಆರೋಗ್ಯ ಸಮಸ್ಯೆಯಿಂದ ಬರಲು ಸಾಧ್ಯವಾಗದ ಕಾರಣ ಕಿರಿಯ ಸ್ಪೀಕರ್ ಅಭ್ಯರ್ಥಿ 164 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಅದರಂತೆ ನಾಳೆ ನಡೆಯಲಿರುವ ವಿಶ್ವಾಸ ಮತದಲ್ಲಿ 166 ಮತಗಳಿಂದ ಬಹುಮತ ಸಾಬೀತು ಮಾಡುತ್ತೇವೆ ಎಂದು ವಿಶ್ವಾಸ ಮತ ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ಮತ್ತು ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಹಾಗು ಪಕ್ಷೇತರು ಶಾಸಕರ ಬೆಂಬಲದೊಂದಿಗೆ ವಿಶ್ವಾಸ ಮತ ಯಾಚನೆಯಲ್ಲಿ ಗೆಲವು ಸಾಧಿಸುವುದಾಗಿ ಅವರು ಖಚಿತ ಮಾತುಗಳಲ್ಲಿ ಹೇಳಿದ್ದಾರೆ.

ಬಿಜೆಪಿ ಹಾಗು ಶಿವಸೇನೆಯ ಶಾಸಕರ ಮೈತ್ರಿ ಸರ್ಕಾರ ಮಹಾರಾಷ್ಟ್ರದಲ್ಲಿ ಅಭಿವೃದ್ದಿಯ ಕಡೆಗೆ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

10 ಸಾವಿರಕೋಟಿ ವೆಚ್ಚ:

ಮುಂಬೈನಲ್ಲಿ ಕೈಗೆತ್ತಿಕೊಂಡಿರುವ ಅರೆ ಕಾಮಗಾರಿ

ಅರ್ಧ ನೈಜವಾಗಿದೆ ಮತ್ತು ಅರ್ಧ ಪ್ರಾಯೋಜಿತವಾಗಿದೆ. 25ರಷ್ಟು ಪೂರ್ಣಗೊಂಡ ಬಳಿಕ ಕಾಮಗಾರಿ ಸ್ಥಗಿತಗೊಂಡಿದೆ. ಈಗಾಗಲೇ 10,000 ಕೋಟಿ ರೂ.ಗಳಷ್ಟು ವೆಚ್ಚವನ್ನು ಹೆಚ್ಚಿಸಲಾಗಿದೆ ಎಂದು ಅವರ ದೂರಿದ್ದಾರೆ.

ಕಾಮಗಾರಿ ಹೆಚ್ಚು ವಿಳಂಬದಿಂದ ಹೆಚ್ಚು ವೆಚ್ಚ ಹೆಚ್ಚಿಸಲಾಗಿದೆ. ಮುಂಬೈ ಜನದಟ್ಟಣೆಗೆ ಇದೊಂದೇ ಪರಿಹಾರ ಎಂದು ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande