ಕೋಲಾರದಲ್ಲಿ ಮಹರ್ಷಿ ಯೋಗ ಮಂದಿರದ ೧೮ನೇ ಯೋಗ ಶಿಬಿರ ಆರಂಭ
ಕೋಲಾರದಲ್ಲಿ ಮಹರ್ಷಿ ಯೋಗ ಮಂದಿರದ ೧೮ನೇ ಯೋಗ ಶಿಬಿರ ಆರಂಭ ಕೋಲಾರ, ಜು. 0೩ (ಹಿ.ಸ): ಆ್ಯಂಕರ್ : ನಿರಂತರ ಯೋಗಾಭ್ಯಾಸದ
ಕೋಲಾರದಲ್ಲಿ ಮಹರ್ಷಿ ಯೋಗ ಮಂದಿರದ ೧೮ನೇ ಯೋಗ ಶಿಬಿರ ಆರಂಭ


ಕೋಲಾರದಲ್ಲಿ ಮಹರ್ಷಿ ಯೋಗ ಮಂದಿರದ ೧೮ನೇ ಯೋಗ ಶಿಬಿರ ಆರಂಭ

ಕೋಲಾರ, ಜು. 0೩ (ಹಿ.ಸ):

ಆ್ಯಂಕರ್ : ನಿರಂತರ ಯೋಗಾಭ್ಯಾಸದ ಮೂಲಕ ಉತ್ತಮ ಆರೋಗ್ಯ ಪಡೆಯುವುದರ ಜತೆಗೆ ಮನಸ್ಸಿನಲ್ಲಿ ಶಾಂತಿ,ನೆಮ್ಮದಿ ಕಾಣಬಹುದಾಗಿದೆ ಎಂದು ಪತಂಜಲಿ ಯೋಗ ಮಂದಿರದ ಯೋಗ ಗುರು ಸೋಮಶೇಖರಯ್ಯ ತಿಳಿಸಿದರು.

ನಗರದ ಶ್ರೀ ಮಹರ್ಷಿ ಯೋಗ ಮಂದಿರದಲ್ಲಿ ೧೮ ನೇಯ ಯೋಗ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಯೋಗ ಇಂದು ವಿಶ್ವಮಾನ್ಯವಾಗಿದೆ, ಯೋಗದಿಂದ ಉತ್ತಮ ಆರೋಗ್ಯ ಮಾತ್ರವಲ್ಲ, ಸಮಾಜದಲ್ಲಿ ಸಾಮರಸ್ಯದ ವಾತಾವರಣ ಮೂಡಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಅನೇಕ ಕಾಯಿಲೆಗಳಿಂದ ಮುಕ್ತಿ ಪಡೆಯಲು ಯೋಗ ರಾಮಬಾಣವಾಗಿದೆ ಎಂದ ಅವರು, ಮನಸ್ಸು ಚಂಚಲತೆಯಿ0ದ ಹೊರ ಬಂದು ಶಾಂತಿ ಕಾಣಲು ಯೋಗ ಸಹಕಾರಿಯಾಗಿದೆ ಎಂದು ತಿಳಿಸಿ, ಪ್ರತಿಯೊಬ್ಬರೂ ಯೋಗಾಭ್ಯಾಸ ಮುಂದುವರೆಸಿ ಎಂದು ಕಿವಿಮಾತು ಹೇಳಿದರು.

ಯೋಗ ಶಿಕ್ಷಕ ಜಯಣ್ಣ ಮಾತನಾಡಿ, ಜೂ.೨೧ ವಿಶ್ವ ಯೋಗದಿನವಾಗಿದೆ, ಭಾರತದ ಸಂಸ್ಕೃತಿ ಇಂದು ವಿಶ್ವಕ್ಕೆ ಪರಿಚಯವಾಗಿದೆ, ಅದರಲ್ಲೂ ಕೋಲಾರ ಜಿಲ್ಲೆಯ ಬಿಕೆಎಸ್ ಅಯ್ಯಂಗಾರ್ರAತಹ ಮಹನೀಯರು ಯೋಗವನ್ನು ವಿಶ್ವಕ್ಕೆ ಮುಟ್ಟಿಸಿ ಭಾರತದ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರದರ್ಶಿಸಿದ್ದಾರೆ ಎಂದರು.

ಯೋಗ ಗುರು ಸೋಮಶೇಖರಯ್ಯ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಟೇಸ್ಟಿ ನಂದೀಶ್ವರ, ರಾಜೇಶ್,ಮುನಿಯಪ್ಪ, ಮಲ್ಲಿಕಾರ್ಜುನ್, ನಾಗಸುಂದರ್, ಉಮೇಶ,ರಾಜೇಂದ್ರಪ್ರಸಾದ್, ನಾರಾಯಣಸ್ವಾಮಿಮ, ವೆಂಕಟೇಶ್, ಮುನೀಂಧರ, ಪ್ರಕಾಶ್, ನಾಗಮಣಿ, ಅಂಬಿಕಾ ಮತ್ತಿತರರು ಹಾಜರಿದ್ದರು

ಚಿತ್ರ: ಕೋಲಾರದ ಶ್ರೀ ಮಹರ್ಷಿ ಯೋಗ ಮಂದಿರದಲ್ಲಿ ಯೋಗ ಶಿಬಿರ ಆರಂಭವಾಯಿತು.


 rajesh pande