ವಿದ್ಯಾರ್ಥಿಗಳಲ್ಲಿ ಸ್ವಚ್ಚತೆ ಕುರಿತು ಅರಿವು ಮೂಡಿಸಲು ಜಿಲ್ಲಾಧಿಕಾರಿಗಳ ಕರೆ
ವಿದ್ಯಾರ್ಥಿಗಳಲ್ಲಿ ಸ್ವಚ್ಚತೆ ಕುರಿತು ಅರಿವು ಮೂಡಿಸಲು ಜಿಲ್ಲಾಧಿಕಾರಿಗಳ ಕರೆ ಕೋಲಾರ, ಜು.0೩ (ಹಿ.ಸ): ಆ್ಯಂಕರ್ : ಶಾ
ಕೋಲಾರ ಜಿಲ್ಲಾ ಮಟ್ಟದ ಸ್ವಚ್ಚ ವಿದ್ಯಾಲಯ ಪುರಸ್ಕಾರಕ್ಕೆ ಭಾಜನವಾದ ೩೮ ಶಾಲೆಗಳಲ್ಲಿ ಒಂದು ಶಾಲೆಗೆ ಸಾಂಕೇತಿಕವಾಗಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಪ್ರಮಾಣಪತ್ರ ವಿತರಿಸಿದರು.


ವಿದ್ಯಾರ್ಥಿಗಳಲ್ಲಿ ಸ್ವಚ್ಚತೆ ಕುರಿತು ಅರಿವು ಮೂಡಿಸಲು ಜಿಲ್ಲಾಧಿಕಾರಿಗಳ ಕರೆ

ಕೋಲಾರ, ಜು.0೩ (ಹಿ.ಸ):

ಆ್ಯಂಕರ್ : ಶಾಲೆಗಳಲ್ಲಿ ಸ್ವಚ್ಚತೆಗೆ ಒತ್ತು ನೀಡುವ ಮೂಲಕ ಸುಂದರ ಪರಿಸರ ನಿರ್ಮಿಸಿ, ಶೌಚಾಲಯಗಳಲ್ಲಿ ನೀರು ಇರುವಂತೆ ನೋಡಿಕೊಳ್ಳಿ, ಮಕ್ಕಳಲ್ಲೂ ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ವೆಂಕಟ್ರಾಜಾ ಕರೆ ನೀಡಿದರು.

ಜಿಲ್ಲಾ ಮಟ್ಟದ ಸ್ವಚ್ಚ ವಿದ್ಯಾಲಯ ಪುರಸ್ಕಾರಕ್ಕೆ ಭಾಜನವಾದ ೩೮ ಶಾಲೆಗಳಲ್ಲಿ ಒಂದು ಶಾಲೆಗೆ ಸಾಂಕೇತಿಕವಾಗಿ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.

ಮಕ್ಕಳಲ್ಲಿ ಕೈತೊಳೆಯುವ ಅಭ್ಯಾಸ ಬೆಳೆಸಿ, ಸ್ವಚ್ಚತೆ ಮೊದಲ ಪಾಠವಾಗಲಿ ಎಂದ ಅವರು, ಕೋವಿಡ್ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಚಾಚೂತಪ್ಪದೇ ಪಾಲಿಸಬೇಕು ಎಂದು ಸೂಚಿಸಿದರು.

ಇದಾದ ನಂತರ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಡಿಪಿಐ ಕೃಷ್ಣಮೂರ್ತಿ, ಸ್ವಚ್ಚವಿದ್ಯಾಲಯ ಪುರಸ್ಕಾರವನ್ನು ಉಳಿದ ೩೭ ಶಾಲೆಗಳಿಗೆ ವಿತರಿಸಿ, ಸ್ವಚ್ಚತೆ ಕಾಪಾಡಿ, ಮಕ್ಕಳಿಗೆ ಶುದ್ದ ಕುಡಿಯುವ ನೀರು ಒದಗಿಸಿ ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯವಿದ್ದರೂ ಅದರ ನಿರ್ವಹಣೆ ಅತಿ ಮುಖ್ಯವಾಗಿದೆ, ನೀರು ಸಂಗ್ರಹ, ಮಕ್ಕಳಲ್ಲಿ ನೀರು ಬಳಕೆ ಕುರಿತು ಅರಿವು ಮೂಡಿಸುವುದು, ಬಯಲು ಬಹಿರ್ದೆಸೆಯಿಂದಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕೆಲಸವಾಗಬೇಕು ಎಂದರು.

ಶಾಲೆಗಳಲ್ಲಿ ಸ್ವಚ್ಚತೆ ಕಾಪಾಡುವ ಉದ್ದೇಶದಿಂದ ಎಸ್ವಿಪಿ ಪೋರ್ಟಲ್ನಲ್ಲಿ ಶಾಲೆಗಳಿಗೆ ತಮ್ಮ ಶಾಲೆಯಲ್ಲಿನ ಮೂಲಭೂತ ಸೌಲಭ್ಯಗಳ ಬಗ್ಗೆ ಆನ್ಲೈನ್ನಲ್ಲಿ ಇಂದೀಕರಿಸಿ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಲು ಸೂಚಿಸಲಾಗಿತ್ತು ಎಂದರು.

ಕೋಲಾರ ಜಿಲ್ಲೆಯಲ್ಲಿ ೧೫೦೦ ಶಾಲೆಗಳಿಂದ ಆನ್ಲೈನ್ನಲ್ಲಿ ಸ್ವಯಂ ಮೌಲ್ಯಮಾಪನ ಮಾಡಲಾಗಿತ್ತು. ನೀರು,ಶೌಚಾಲಯ, ಕೈತೊಳೆಯುವ ಘಟಕ ನಿರ್ವಹಣೆ, ವರ್ತನಾ ಬದಲಾವನೆ, ಕೋವಿಡ್-೧೯ರ ಮುನ್ನಚ್ಚರಿಕಾ ಕ್ರಮ ಎಂಬ ೬ ವಿಭಾಗಗಳಲ್ಲಿ ಪ್ರಶ್ನಾವಳಿ ನೀಡಲಾಗಿತ್ತು ಎಂದರು.

ಇದರ ಆಧಾರದ ಮೇಲೆ ಅಂಕಗಳನ್ನು ನೀಡಿ ಶಾಲೆಯನ್ನು ೩ ಸ್ಟಾರ್, ೪ ಸ್ಟಾರ್, ೫ ಸ್ಟಾರ್ ಎಮದು ಗುರುತಿಸಲಾಗಿತ್ತು ಎಂದು ವಿವರಿಸಿದರು.

ಡಿವೈಪಿಸಿ ಮೋಹನ್ ಬಾಬು ಮಾತನಾಡಿ, ಆಂತರಿಕ ಮೌಲ್ಯಮಾಪನದ ನಂತರ ಮೌಲ್ಯಮಾಪಕರಿಂದ ಬಾಹ್ಯ ಮೌಲ್ಯಮಾಪನ ನಡೆಸಲಾಗಿದ್ದು, ಆದರ ಆಧಾರದ ಮೇಲೆ ಜಿಲ್ಲೆಯಲ್ಲಿ ಎಲ್ಲಾ ೬ ವಿಭಾಗಗಳಲ್ಲು ಉತ್ತಮ ನಿರ್ವಹಣೆ ತೋರಿದ ೮ ಶಾಲೆಗಳನ್ನು ಗುರುತಿಸಿ ಸಮಗ್ರ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿಸಿದರು.

ಇದರ ಜತೆಗೆ ಇತರೆ ಆರು ವಿಭಾಗಗಳಲ್ಲಿ ಪ್ರತಿ ವಿಭಾಗದಲ್ಲೂ ಉತ್ತಮ ಸಾಧನೆಗಾಗಿ ೫ ಶಾಲೆಗಳಂತೆ ೩೦ ಶಾಲೆಗಳನ್ನು ಜಿಲ್ಲಾ ಮಟ್ಟದ ಸ್ವಚ್ಚವಿದ್ಯಾಲಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಇವುಗಳಲ್ಲಿ ತಲಾ ಒಂದೊ0ದರ0ತೆ ಒಟ್ಟು ೧೪ ಶಾಲೆಗಳನ್ನು ರಾಜ್ಯಮಟ್ಟದ ಸ್ವಚ್ಚವಿದ್ಯಾಲಯ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ತಿಳಿಸಿದರು. ವಿಷಯ ಪರಿವೀಕ್ಷ ಶಂಕರೇಗೌಡ ಮತ್ತಿತರರಿದ್ದರು.

ಚಿತ್ರ :ಕೋಲಾರ ಜಿಲ್ಲಾ ಮಟ್ಟದ ಸ್ವಚ್ಚ ವಿದ್ಯಾಲಯ ಪುರಸ್ಕಾರಕ್ಕೆ ಭಾಜನವಾದ ೩೮ ಶಾಲೆಗಳಲ್ಲಿ ಒಂದು ಶಾಲೆಗೆ ಸಾಂಕೇತಿಕವಾಗಿ ಜಿಲ್ಲಾಧಿಕಾರಿ ವೆಂಕಟ್ರಾಜಾ ಪ್ರಮಾಣಪತ್ರ ವಿತರಿಸಿದರು.


 rajesh pande