ಟೈಲರ್ ಹತ್ಯೆ ಪ್ರಕರಣ.. ಉದಯಪುರದಲ್ಲಿ ಕರ್ಫ್ಯೂ ಸಡಿಲಿಕೆ
ಉದಯಪುರ (ರಾಜಸ್ಥಾನ), 3 ಜುಲೈ (ಹಿ.ಸ):ಆ್ಯಂಕರ್ : : ಈ ವಾರದ ಆರಂಭದಲ್ಲಿ ಇಬ್ಬರು ವ್ಯಕ್ತಿಗಳು ಟೈಲರ್ನನ್ನು ಹತ್ಯ
್


ಉದಯಪುರ (ರಾಜಸ್ಥಾನ), 3 ಜುಲೈ (ಹಿ.ಸ):ಆ್ಯಂಕರ್ :

: ಈ ವಾರದ ಆರಂಭದಲ್ಲಿ ಇಬ್ಬರು ವ್ಯಕ್ತಿಗಳು ಟೈಲರ್ನನ್ನು ಹತ್ಯೆಗೈದ ನಂತರ ಉದಯಪುರದಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಈಗ ಪರಿಸ್ಥಿತಿ ಸುಧಾರಿಸುತ್ತಿದ್ದು, ಇಂದಿನಿಂದ ಕರ್ಫ್ಯೂ ಸಡಿಲಿಸಲಾಗಿದೆ.

ಹಿಂಸಾಚಾರದ ಘಟನೆಗಳ ನಂತರ ಉದಯಪುರದ ಏಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ನಗರದಲ್ಲಿ ಪರಿಸ್ಥಿತಿ ಸಹಜವಾಗುತ್ತಿದ್ದು, ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಕರ್ಫ್ಯೂ ಸಡಿಲಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಮಾರುಕಟ್ಟೆಗಳು ತೆರೆದು ದಿನನಿತ್ಯದ ಚಟುವಟಿಕೆಗಳು ಪುನಾರಂಭಗೊಂಡಿವೆ. ಈ ಮೂಲಕ ನಗರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಸ್ಥಳೀಯ ಜನರಿಂದ ಶಾಂತಿ ಕಾಪಾಡಲಾಗಿದ್ದು, ಕರ್ಫ್ಯೂ ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ಸ್ಥಳೀಯ ನಿವಾಸಿಯೊಬ್ಬರು ಆಗ್ರಹ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande