ಮಹಾರಾಷ್ಟ್ರ ವಿಧಾನಸಭೆ : ನಾಳೆ ನೂತನ ಸರ್ಕಾರದ ವಿಶ್ವಾಸಮತ
ಮುಂಬೈ 03ಜುಲೈ (ಹಿ.ಸ):ಆ್ಯಂಕರ್: ಮಹಾರಾಷ್ಟ್ರ ವಿಧಾನಸಭೆ ಅಧಿವೇಶನ ಇಂದು ಹಾಗೂ ನಾಳೆ ನಡೆಯಲಿದೆ. ಇಂದು ಸ್ಪೀಕರ್ ಆಯ್
ೀಿ


ಮುಂಬೈ 03ಜುಲೈ (ಹಿ.ಸ):ಆ್ಯಂಕರ್:

ಮಹಾರಾಷ್ಟ್ರ ವಿಧಾನಸಭೆ ಅಧಿವೇಶನ ಇಂದು ಹಾಗೂ ನಾಳೆ ನಡೆಯಲಿದೆ. ಇಂದು ಸ್ಪೀಕರ್ ಆಯ್ಕೆ ನಡೆಯಲಿದ್ದು ಹಾಗೂ ಸೋಮವಾರ ನೂತನ ಸರ್ಕಾರದ ವಿಶ್ವಾಸ ಮತಯಾಚನೆ ಪ್ರಕ್ರಿಯೆ ನಡೆಯಲಿದೆ.

ವಿಧಾನಸಭೆ ಕಲಾಪ ಬೆಳಗ್ಗೆ 11 ಗಂಟೆಗೆ ಆರಂಭವಾಗಿದೆ. ಬಿಜೆಪಿಯು ಶಾಸಕ ರಾಹುಲ್ ನಾರ್ವೇಕರ್ ಅವರನ್ನು ಸ್ಪೀಕರ್ ಹುದ್ದೆಗೆ ಅಖಾಡಕ್ಕಿಳಿಸಿದ್ದು, ಬಹುತೇಕ ಆಯ್ಕೆಯಾಗಲಿದ್ದಾರೆ. ಇನ್ನು, ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಶಿವಸೇನಾ ಶಾಸಕ ಮತ್ತು ಉದ್ಧವ್ ಠಾಕ್ರೆ ಆಪ್ತ ರಾಜನ್ ಸಾಲ್ವಿ ಅಖಾಡದಲ್ಲಿದ್ದಾರೆ.288 ಸದಸ್ಯ ಬಲದ ವಿಧಾನಸಭೆಯಲ್ಲಿ ಬಂಡಾಯ ಶಿವಸೇನೆಯ ಶಾಸಕರು ಹಾಗೂ ಬಿಜೆಪಿ ಸೇರಿದಂತೆ 156 ಶಾಸಕರ ಬೆಂಬಲ ಸಿಎಂ ಏಕನಾಥ್ ಶಿಂಧೆಗಿದ್ದು, ನಾಳೆ ನಡೆಯುವ ವಿಶ್ವಾಸಮತ ಅಗ್ನಿಪರೀಕ್ಷೆಯನ್ನು ಸುಲಭವಾಗಿ ಜಯಿಸಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande