ಜೂನ್ನಲ್ಲಿ ೧ ಲಕ್ಷದ ೪೪ ಸಾವಿರದ ೬೧೬ ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹ
ದೆಹಲಿ, 2 ಜುಲೈ (ಹಿ.ಸ):ಆ್ಯಂಕರ್ ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ-ಜಿಎಸ್ಟಿ ಸಂಗ್ರಹಣೆಯಲ್ಲಿ ಗಣನೀಯ ಸುಧಾರಣ
ಜೂನ್ನಲ್ಲಿ ೧ ಲಕ್ಷದ ೪೪ ಸಾವಿರದ ೬೧೬ ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹ


ದೆಹಲಿ, 2 ಜುಲೈ (ಹಿ.ಸ):ಆ್ಯಂಕರ್

ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ-ಜಿಎಸ್ಟಿ ಸಂಗ್ರಹಣೆಯಲ್ಲಿ ಗಣನೀಯ ಸುಧಾರಣೆಯಾಗಿದ್ದು, ಕಳೆದ ಜೂನ್ನಲ್ಲಿ ಒಂದು ಲಕ್ಷದ ೪೪ ಸಾವಿರದ ೬೧೬ ಕೋಟಿ ರೂಪಾಯಿ ಸಂಗ್ರಹವಾಗಿದೆ. ಈ ಪೈಕಿ ಸಿಜಿಎಸ್ಟಿ ೨೫ ಸಾವಿರದ ೩೦೬ ಕೋಟಿ ರೂಪಾಯಿ, ಎಸ್ಜಿಎಸ್ಟಿ ೩೨ ಸಾವಿರದ ೪೦೬ ಕೋಟಿ ರೂಪಾಯಿ, ಐಜಿಎಸ್ಟಿ ೭೫ ಸಾವಿರದ ೮೮೭ ಕೋಟಿ ರೂಪಾಯಿ ಹಾಗೂ ಸೆಸ್ ರೂಪದಲ್ಲಿ ೧೧ ಸಾವಿರದ ೧೮ ಕೋಟಿ ರೂಪಾಯಿ ಕ್ರೋಢೀಕರಣವಾಗಿದೆ. ಏಪ್ರಿಲ್ನಲ್ಲಿ ಒಂದು ಲಕ್ಷದ ೬೭ ಸಾವಿರದ ೪೫೦ ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಕಳೆದ ತಿಂಗಳು ಎರಡನೇ ಅತಿ ಹೆಚ್ಚು ಸಂಪನ್ಮೂಲ ಕ್ರೋಢೀಕರಣವಾಗಿದೆ. ಕಳೆದ ವರ್ಷದ ಜೂನ್ಗೆ ಹೋಲಿಸಿದರೆ ಈ ಬಾರಿ ಶೇಕಡ ೫೬ರಷ್ಟು ಪ್ರಗತಿ ಕಂಡಿದೆ. ೨೦೨೧ರ ಜೂನ್ನಲ್ಲಿ ೯೨ ಸಾವಿರದ ೮೦೦ ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಕರ್ನಾಟಕದಲ್ಲಿ ಕಳೆದ ಜೂನ್ನಲ್ಲಿ ೫ ಸಾವಿರದ ೧೦೩ ಕೋಟಿ ರೂಪಾಯಿ ಸಂಗ್ರಹವಾಗಿದ್ದರೆ, ಈ ವರ್ಷದ ಜೂನ್ನಲ್ಲಿ ೮ ಸಾವಿರದ ೮೪೫ ಕೋಟಿ ರೂಪಾಯಿ ಸಂಗ್ರಹವಾಗಿ, ಶೇಕಡ ೭೩ರಷ್ಟು ಬೆಳವಣಿಗೆಯಾಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande