ಅಂತರಾಷ್ಟ್ರೀಯ ಸಹಕಾರಿಗಳ ದಿನ
ದೆಹಲಿ, 02 ಜುಲೈ (ಹಿ.ಸ):ಆ್ಯಂಕರ್: ಅಂತರಾಷ್ಟ್ರೀಯ ಸಹಕಾರಿಗಳ ದಿನವನ್ನು ಪ್ರತಿ ವರ್ಷ ಜುಲೈ ಮೊದಲನೇ ಶನಿವಾರದಂದು ದೇಶಾ
ಅಂತರಾಷ್ಟ್ರೀಯ ಸಹಕಾರಿಗಳ ದಿನ


ದೆಹಲಿ, 02 ಜುಲೈ (ಹಿ.ಸ):ಆ್ಯಂಕರ್:

ಅಂತರಾಷ್ಟ್ರೀಯ ಸಹಕಾರಿಗಳ ದಿನವನ್ನು ಪ್ರತಿ ವರ್ಷ ಜುಲೈ ಮೊದಲನೇ ಶನಿವಾರದಂದು ದೇಶಾದ್ಯಂತ ಆಚರಿಸಲಾಗುತ್ತದೆ. ಸಹಕಾರ ಚಳುವಳಿಯ ಕೊಡುಗೆಯನ್ನು ಜನತೆಗೆ ತಿಳಿಸುವ ಉದ್ದೇಶದಿಂದ ಈ ವರ್ಷದ ಜುಲೈ ೨ ರಂದು ಸಹಕಾರಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಸಂಸ್ಥೆಗಳ ಪರಿಶ್ರಮ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಹಕಾರಿಗಳಿಂದ ಉತ್ತಮ ಜಗತ್ತು ನಿರ್ಮಾಣ ಎಂಬ ಘೋಷವಾಕ್ಯದ ಅಡಿಯಲ್ಲಿ ಜಗತ್ತಿನಾದ್ಯಂತ ಈ ವರ್ಷ ಎಲ್ಲ ಸಹಕಾರಿಗಳು, ಅಂತಾರಾಷ್ಟ್ರೀಯ ಸಹಕಾರಿಗಳ ದಿನವನ್ನು ಆಚರಿಸುತ್ತಿದ್ದಾರೆ. ಈ ದಿನ ಸಾಮಾನ್ಯವಾಗಿ ಕೋ-ಆಪ್ಸ್ ಡೇ ಎಂದೇ ಜನಪ್ರಿಯವಾಗಿದೆ. ೧೯೨೩ರಿಂದ ವಿಶ್ವದಾದ್ಯಂತ ಸಹಕಾರಿಗಳ ದಿನವಾಗಿ ಆಚರಣೆಗೆ ಬಂದಿದೆ. ೧೯೯೫ರಲ್ಲಿ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿ ಅಂತಾರಾಷ್ಟ್ರೀಯ ಸಹಕಾರಿಗಳ ದಿನಾಚರಣೆಗೆ ಅಧಿಕೃತ ಮುದ್ರೆ ಬಿದ್ದಿದೆ. ಅಲ್ಲಿಂದೀಚೆಗೆ ಜುಲೈ ಮೊದಲ ಶನಿವಾರದಂದು ವಾರ್ಷಿಕವಾಗಿ ಅಂತಾರಾಷ್ಟ್ರೀಯ ಸಹಕಾರಿಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಹಕಾರಿಗಳ ಕುರಿತು ಜಾಗೃತಿ ಮೂಡಿಸುವುದು ಅಂತಾರಾಷ್ಟ್ರೀಯ ಒಗ್ಗಟ್ಟು, ಆರ್ಥಿಕ ದಕ್ಷತೆ, ಸಮಾನತೆ ಮತ್ತು ವಿಶ್ವ ಶಾಂತಿ ಎಂಬ ಕಲ್ಪನೆಗಳ ಚಳುವಳಿಯನ್ನು ಪ್ರೋತ್ಸಾಹಿಸುವ ಗುರಿಯೊಂದಿಗೆ ಕೋ-ಆಪ್ಸ್ ಡೇ ಆಚರಿಸಲಾಗುತ್ತಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande