ಸರಕು ಸೇವಾ ತೆರಿಗೆ - ಜಿಎಸ್ಟಿ ೫ನೇ ವಾರ್ಷಿಕೋತ್ಸವ - ರಾಜ್ಯದಲ್ಲಿ ಹೆಚ್ಚು ತೆರಿಗೆ ಸಂಗ್ರಹಿಸಿದ ಸಿಬ್ಬಂದಿಗೆ ಪ್ರಶಸ್ತಿ ಪ್ರದಾನ
ದೆಹಲಿ, 2 ಜುಲೈ (ಹಿ.ಸ):ಆ್ಯಂಕರ್ ಸರಕು ಮತ್ತು ಸೇವಾ ತೆರಿಗೆ-ಜಿಎಸ್ಟಿ ದಿನ. ದೇಶದಲ್ಲಿ ಹಳೆಯ ಪರೋಕ್ಷ ತೆರಿಗೆ
ಸರಕು ಸೇವಾ ತೆರಿಗೆ - ಜಿಎಸ್ಟಿ ೫ನೇ ವಾರ್ಷಿಕೋತ್ಸವ - ರಾಜ್ಯದಲ್ಲಿ ಹೆಚ್ಚು ತೆರಿಗೆ ಸಂಗ್ರಹಿಸಿದ ಸಿಬ್ಬಂದಿಗೆ ಪ್ರಶಸ್ತಿ ಪ್ರದಾನ


ದೆಹಲಿ, 2 ಜುಲೈ (ಹಿ.ಸ):ಆ್ಯಂಕರ್

ಸರಕು ಮತ್ತು ಸೇವಾ ತೆರಿಗೆ-ಜಿಎಸ್ಟಿ ದಿನ. ದೇಶದಲ್ಲಿ ಹಳೆಯ ಪರೋಕ್ಷ ತೆರಿಗೆ ವ್ಯವಸ್ಥೆಗೆ ಬದಲಾಗಿ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಿದ ಸ್ಮರಣಾರ್ಥ ಇಂದು ಜಿಎಸ್ಟಿ ದಿನವನ್ನಾಗಿ ಆಚರಿಸಲಾಗುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜಿಎಸ್ಟಿ ೫ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ದೆಹಲಿಯಲ್ಲಿ ನಿನ್ನೆ ಉದ್ಘಾಟಿಸಿ, ಜಿಎಸ್ಟಿ ಸಂಗ್ರಹದಲ್ಲಿ ಗುರಿ ಸಾಧನೆ ಮಾಡಿದ ಹಿರಿಯ ಅಧಿಕಾರಿಗಳಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಕಂದಾಯ ಕಾರ್ಯದರ್ಶಿ ಸಿಬಿಐಸಿ ಅಧ್ಯಕ್ಷರು ಜಿಎಸ್ಟಿ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ೨೦೧೭ರ ಜೂನ್ ೩೦ ಹಾಗೂ ಜುಲೈ ೧ರ ಮಧ್ಯರಾತ್ರಿ ಸಂಸತ್ತಿನ ಕೇಂದ್ರೀಯ ಸಭಾಂಗಣದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಜಿಎಸ್ಟಿ ತೆರಿಗೆ ವ್ಯವಸ್ಥೆಯನ್ನು ದೇಶದಲ್ಲಿ ಜಾರಿಗೊಳಿಸಲಾಯಿತು. ಒಂದು ದೇಶ-ಒಂದು ಮಾರುಕಟ್ಟೆ-ಒಂದು ತೆರಿಗೆ ಪರಿಕಲ್ಪನೆಯಡಿ ಜಿಎಸ್ಟಿ ಪರಿಚಯಿಸಲಾಯಿತು. ಇದೊಂದು ಪರೋಕ್ಷ ಬಳಕೆದಾರರ ಆಧಾರಿತ ತೆರಿಗೆ ವ್ಯವಸ್ಥೆಯಾಗಿದ್ದು, ಒಂದೇ ಶೀರ್ಷಿಕೆಯಡಿ ಹಲವು ದೇಶೀಯ ಪರೋಕ್ಷ ತೆರಿಗೆಗಳನ್ನು ಒಳಗೊಂಡಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಜಿಎಸ್ಟಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಸಚಿವರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್


 rajesh pande