ಸರಕು ಸಾಗಣೆ ವಲಯದಲ್ಲಿ ಉದ್ಯೋಗಾವಕಾಶ 3 ವಿವಿಗಳೊಂದಿಗೆ ಒಪ್ಪಂದಕ್ಕೆ ಸಹಿ
ಬೆಂಗಳೂರು, 1 ಜುಲೈ (ಹಿ.ಸ):ಆ್ಯಂಕರ್ : : ಸರಕು ಸಾಗಾಣಿಕೆ ವಲಯದಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ಹಾಗೂ ಕೈಗಾರಿಕೆ


d d _1ಬೆಂಗಳೂರು, 1 ಜುಲೈ (ಹಿ.ಸ):ಆ್ಯಂಕರ್ :

: ಸರಕು ಸಾಗಾಣಿಕೆ ವಲಯದಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ಹಾಗೂ ಕೈಗಾರಿಕೆಗಳಿಗೆ ಅಗತ್ಯವಿರುವ ಮಾನವ ಸಂಪನ್ಮೂಲ ಒದಗಿಸುವ ಉದ್ದೇಶದಿಂದ ಕರ್ನಾಟಕದ ಮೂರು ವಿವಿಗಳಾದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ, ಮಂಡ್ಯ ವಿಶ್ವವಿದ್ಯಾಲಯ, ನೃಪತುಂಗ ವಿಶ್ವವಿದ್ಯಾಲಯ ಹಾಗೂ ಲಾಜಿಸ್ಟಿಕ್ಸ್ ಸೆಕ್ಟರ್ ಸ್ಕಿಲ್ಸ್ ಕೌನ್ಸಿಲ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಶುಕ್ರವಾರ ಕೌಶಲ್ಯಾಭಿವೃದ್ಧಿ ಇಲಾಖೆ ಆಯೋಜಿಸಿದ್ದ ಸರಕು ಸಾಗಾಣಿಕೆ ವಲಯಕ್ಕೆ ಸಂಬಂಧಿಸಿದಂತೆ ಇಂಡಸ್ಟ್ರಿ ಕನೆಕ್ಟ್ ಕಾನಕ್ಲೇವ್ ನಲ್ಲಿ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಪರಸ್ಪರ ಸಹಿ ಹಾಕಲಾಯಿತು. ಈ ಮೂಲಕ ಸರಕು ಸಾಗಣೆ ವಲಯದಲ್ಲಿ ಉದ್ಯೋಗ ಕಲ್ಪಿಸಲು ಶೈಕ್ಷಣಿಕ ಮತ್ತು ಉದ್ಯೋಗದಾತರನ್ನು ಒಂದು ಕಡೆ ಸೇರಿಸಲು ಸಾಧ್ಯವಾಗಿದೆ.

ಈ ಮೂರು ವಿಶ್ವವಿದ್ಯಾಲಯಗಳಲ್ಲಿ ಸ್ಟೈಪೆಂಡರಿ ಅಪ್ರೆಂಟಿಸ್ಶಿಪ್ ಎಂಬೆಡೆಡ್ ಪದವಿ ಕಾರ್ಯಕ್ರಮಗಳನ್ನು ಪರಿಚಯಿಸಲಾಗುತ್ತದೆ. ಮೂರನೇ ವರ್ಷದಲ್ಲಿ ಸಂಬಂಧಿತ ಕಂಪನಿಗಳಲ್ಲಿ 12 ತಿಂಗಳ ಸ್ಟೈಪೆಂಡರಿ ಅಪ್ರೆಂಟಿಸ್ಶಿಪ್ನೊಂದಿಗೆ ಸಮಗ್ರ ಭಾಗವಾಗುವಂತೆ ಮಾಡಲಾಗುತ್ತದೆ. 12 ತಿಂಗಳುಗಳ ಶಿಷ್ಯವೃತ್ತಿಯು ವಿದ್ಯಾರ್ಥಿಗಳನ್ನು ಕೌಶಲ್ಯಪೂರ್ಣರನ್ನಾಗಿ ಮಾಡುತ್ತದೆ. ಅವರನ್ನು ಉದ್ಯಮ-ಸಿದ್ಧರನ್ನಾಗಿ ಮಾಡುತ್ತದೆ. ಶಿಷ್ಯವೇತನದ ಅವಧಿಯಲ್ಲಿ ವಿದ್ಯಾರ್ಥಿಗಳು ಮಾಸಿಕ 7,500 ರೂ. ಸ್ಟೈಫಂಡ್ ಗಳಿಸುತ್ತಾರೆ.

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದಲ್ಲಿ ಇ-ಕಾಮರ್ಸ್ ಬಿಬಿಎ, ಮಂಡ್ಯ ವಿಶ್ವವಿದ್ಯಾಲಯದಲ್ಲಿ ಲಾಜಿಸ್ಟಿಕ್ಸ್ ವಿಷಯದಲ್ಲಿ ಬಿ.ಕಾಂ. ಹಾಗೂ ನೃಪತುಂಗ ವಿಶ್ವವಿದ್ಯಾಲಯದಲ್ಲಿ ವಾಯುಯಾನದಲ್ಲಿ ಬಿಬಿಎ ಮತ್ತ ಏರ್ ಕಾರ್ಗೋ ಕೋರ್ಸ್ ಪ್ರಾರಂಭಿಸಲಾಗುವುದು.

ಸಮಾವೇಶ ಉದ್ಘಾಟಿಸಿದ ಕೌಶಲ್ಯಾಭಿವೃದ್ಧಿ ಸಚಿವ ಅಶ್ವತ್ಥನಾರಾಯಣ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ, ಭವಿಷ್ಯದ ಭಾರತಕ್ಕಾಗಿ ಯುವಕರನ್ನು ಸಜ್ಜುಗೊಳಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್


 rajesh pande