ಶಿವಣ್ಣನ 'ಬೈರಾಗಿ' ಬಿಡುಗಡೆ : ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ
ಬೆಂಗಳೂರು, 1 ಜುಲೈ (ಹಿ.ಸ):ಆ್ಯಂಕರ್ : ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ 'ಬೈರಾಗಿ' ಸಿನಿಮಾ ಇಂದು ರಾಜ
ೇೇ


ಬೆಂಗಳೂರು, 1 ಜುಲೈ (ಹಿ.ಸ):ಆ್ಯಂಕರ್ :

ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ 'ಬೈರಾಗಿ' ಸಿನಿಮಾ ಇಂದು ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಅಭಿಮಾನಿ ಬಳಗದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸ್ಟಾರ್ ಸಿನಿಮಾಗಳು ಅಂದಾಕ್ಷಣ ರಾತ್ರಿ 12 ಗಂಟೆಗೆ, ಮುಂಜಾನೆ 5 ಗಂಟೆಗೆ ಅಭಿಮಾನಿಗಳಿಗಾಗಿ ಸ್ಪೆಷಲ್ ಶೋಗಳನ್ನು ಮಾಡಲಾಗುತ್ತದೆ. ಆದರೆ ಬೈರಾಗಿ ಸಿನಿಮಾ ರಾಜ್ಯಾದ್ಯಂತ ಮಾರ್ನಿಂಗ್ ಶೋ ಮೂಲಕವೇ ರಿಲೀಸ್ ಆಗುತ್ತಿದೆ.ಶಿವ ಸೈನ್ಯ ಚಿಕ್ಕಬಳ್ಳಾಪುರದ ಸಂಘದ ವತಿಯಿಂದ ಬೆಂಗಳೂರಿನ ವಾಣಿ ಚಿತ್ರಮಂದಿರದಲ್ಲಿ 50 ಅಡಿ ಎತ್ತರದ ಶಿವರಾಜ್ಕುಮಾರ್ ಕಟೌಟ್ ನಿಲ್ಲಿಸಿ, ಹೂವಿನ ಹಾರ ಹಾಕಿ ಸಂಭ್ರಮಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande