ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮೀಷನರ್-ಒಎಚ್ಸಿಎಚ್ಆರ್ ಪ್ರತಿಕ್ರಿಯೆ
ದೆಹಲಿ, 30 ಜೂನ್ (ಹಿ.ಸ):ಆ್ಯಂಕರ್ : ತೀಸ್ತಾ ಸೆತಾಲ್ವಾಡ್ ಮತ್ತು ಇತರ ಇಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವು
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮೀಷನರ್-ಒಎಚ್ಸಿಎಚ್ಆರ್ ಪ್ರತಿಕ್ರಿಯೆ


ದೆಹಲಿ, 30 ಜೂನ್ (ಹಿ.ಸ):ಆ್ಯಂಕರ್ :

ತೀಸ್ತಾ ಸೆತಾಲ್ವಾಡ್ ಮತ್ತು ಇತರ ಇಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಂಡಿರುವುದಕ್ಕೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮೀಷನರ್-ಒಎಚ್ಸಿಎಚ್ಆರ್ ನೀಡಿರುವ ಪ್ರತಿಕ್ರಿಯೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆಕ್ಷೇಪ ವ್ಯಕ್ತಪಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ, ಈ ಮೂಲಕ ಒಎಚ್ಸಿಎಚ್ಆರ್ ಭಾರತದ ಸ್ವತಂತ್ರ್ಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗಿದೆ ಎಂದು ಆರೋಪಿಸಿದ್ದಾರೆ. ನ್ಯಾಯಾಂಗದ ಪ್ರಕ್ರಿಯೆಗಳ ಪ್ರಕಾರ ಅಧಿಕಾರಿಗಳು ತೀಸ್ತಾ ಮತ್ತು ಇತರರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಂಡಿದ್ದಾರೆ. ಇಂತಹ ಕ್ರಮದ ವಿರುದ್ಧ ಪ್ರತಿಕ್ರಿಯೆ ನೀಡಿರುವುದನ್ನು ಒಪ್ಪಲಾಗುವುದಿಲ್ಲ ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande