ಬಹುಭಾಷಾ ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ..!
ಬೆಂಗಳೂರು, 29ಜೂನ್ (ಹಿ.ಸ):ಆ್ಯಂಕರ್ : : ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ (48) ಅವರು ಬುಧವಾರ ಮುಂಜಾನ
್


ಬೆಂಗಳೂರು, 29ಜೂನ್ (ಹಿ.ಸ):ಆ್ಯಂಕರ್ :

: ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ (48) ಅವರು ಬುಧವಾರ ಮುಂಜಾನೆ ನಿಧನರಾಗಿದ್ದಾರೆ.ವಿದ್ಯಾಸಾಗರ್ ಬೆಂಗಳೂರು ಮೂಲದವರಾಗಿದ್ದು, ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದರು. ವಿದ್ಯಾಸಾಗರ್ ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದರು. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ತಿಂಗಳ ಹಿಂದೆ ಕೊರೋನ ಸೋಂಕಿಗೂ ತುತ್ತಾಗಿದ್ದರು. ಪೋಸ್ಟ್ ಕೋವಿಡ್ ಸಮಸ್ಯೆಯಿಂದ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧರರಾಗಿದ್ದಾರೆ. ವಿದ್ಯಾಸಾಗರ್ ಪತ್ನಿ ಮೀನಾ ಮತ್ತು ಮಗಳು ನೈನಿಕಾಳನ್ನು ಬಿಟ್ಟು ಅಗಲಿದ್ದಾರೆ. 2009ರಲ್ಲಿ ನಟಿ ನಟಿ ಮೀನಾ ಹಾಗೂ ವಿದ್ಯಾಸಾಗರ್ ಮದುವೆ ಆಗಿದ್ದರು. ವಿದ್ಯಾಸಾಗರ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಸ ಸೂಚಿಸುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande