ಅಬುಧಾಬಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಯೇದ್ ಅಲ್ ನಹ್ಯಾನ್ ದ್ವಿಪಕ್ಷೀಯ ಮಾತುಕತೆ.
ಅಬುಧಾಬಿ, 29ಜೂನ್ (ಹಿ.ಸ):ಆ್ಯಂಕರ್ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ನ ಅಬುಧಾಬಿಗ
ಅಬುಧಾಬಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಯೇದ್ ಅಲ್ ನಹ್ಯಾನ್ ದ್ವಿಪಕ್ಷೀಯ ಮಾತುಕತೆ.


ಅಬುಧಾಬಿ, 29ಜೂನ್ (ಹಿ.ಸ):ಆ್ಯಂಕರ್ :

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ನ ಅಬುಧಾಬಿಗೆ ತಲುಪಿದ್ದಾರೆ. ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಲ್ಲಿನ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಯೇದ್ ಅಲ್ ನಹ್ಯಾನ್ ಬರಮಾಡಿಕೊಂಡರು. ಬಳಿಕ ಇಬ್ಬರು ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಇದಕ್ಕೂ ಮುನ್ನ ಜರ್ಮನಿಯಲ್ಲಿ ನಡೆದ ಜಿ-೭ ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ನಾಯಕರೊಂದಿಗೆ ಸಮಾಲೋಚನೆ ನಡೆಸಿದರು. ಜಾಗತಿಕ ಸಮೃದ್ಧಿ ಮತ್ತು ಸಹಕಾರ ಕುರಿತು ಚರ್ಚೆ ನಡೆಯಿತು. ಶೃಂಗಸಭೆ ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ, ಭಾರತದಲ್ಲಿ ಮಹಿಳಾ ಅಭಿವೃದ್ಧಿಯು ’ಮಹಿಳೆ ನೇತೃತ್ವದ ಅಭಿವೃದ್ಧಿ’ಯಾಗಿ ಬದಲಾಗಿದೆ ಎಂದು ತಿಳಿಸಿದರು. ದೇಶದಲ್ಲಿ ಆಹಾರ ಭದ್ರತೆ, ಕೃಷಿ ಪ್ರತಿಭೆಗಳ ಬಳಕೆ, ಪೌಷ್ಟಿಕ ಪರ್ಯಾಯ ಆಹಾರ ಹಾಗೂ ಸಾವಯವ ಕೃಷಿ ಸೇರಿದಂತೆ ಹಲವು ಅಭಿವೃದ್ಧಿ ಕ್ರಮ ಅನುಸರಿಸಲಾಗುತ್ತಿದೆ ಎಂದು ತಿಳಿಸಿದರು. ಬಳಿಕ ಮ್ಯೂನಿಚ್ನಲ್ಲಿ ನಡೆದ ಸಮುದಾಯ ಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿಯಾದರು.

ಹಿಂದೂಸ್ತಾನ್ ಸಮಾಚಾರ್


 rajesh pande