ಐರ್ಲೆಂಡ್ಗೆ ವೀರೋಚಿತ ಸೋಲು; ಸರಣಿ ಗೆದ್ದ ಭಾರತ
ಡಬ್ಲಿನ್ (ಐರ್ಲೆಂಡ್), 29ಜೂನ್ (ಹಿ.ಸ):ಆ್ಯಂಕರ್ : : ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ನಡೆದ ಎರಡನೇ ಟಿ-20 ಪಂದ
 HELPS INDIA BEAT IRELAND BY 4 RUNS TO POCKET SERIES 2 0


ಡಬ್ಲಿನ್ (ಐರ್ಲೆಂಡ್), 29ಜೂನ್ (ಹಿ.ಸ):ಆ್ಯಂಕರ್ :

: ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ನಡೆದ ಎರಡನೇ ಟಿ-20 ಪಂದ್ಯದಲ್ಲಿ ದೀಪಕ್ ಹೂಡಾ ಶತಕ ಮತ್ತು ಸ್ಯಾಮ್ಸನ್ ಅರ್ಧ ಶತಕ ಸಿಡಿಸಿ ಅಬ್ಬರಿಸಿದ್ದು, ಎದುರಾಳಿ ತಂಡದ ಗೆಲುವಿಗೆ 226 ರನ್ಗಳ ಬೃಹತ್ ಟಾರ್ಗೆಟ್ ನೀಡಿತ್ತು. ಆದರೆ ಭಾರತ ತಂಡ ನೀಡಿದ ಗುರಿಯನ್ನು ಬೆನ್ನತ್ತಿದ್ದ ಐರ್ಲೆಂಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಗೆಲುವಿನ ಹಾದಿಯಲ್ಲಿ ಸೋಲು ಕಂಡಿತು.

ಭಾರತ ಇನ್ನಿಂಗ್ಸ್: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಆರಂಭದಲ್ಲೇ ವಿಕೆಟ್ ಕೀಪರ್ ಇಶಾನ್ ಕಿಶನ್ (3 ರನ್) ವಿಕೆಟ್ ಕಳೆದುಕೊಂಡಿತು. ಈ ವೇಳೆ, ಒಂದಾದ ಸ್ಯಾಮ್ಸನ್ ಹಾಗೂ ದೀಪಕ್ ಹೂಡಾ ಜೋಡಿ ಐರ್ಲೆಂಡ್ ಬೌಲರ್ಗಳನ್ನ ಬೆಂಡೆತ್ತಿದರು. ದೀಪಕ್ ಹೂಡಾ ತಾವು ಎದುರಿಸಿದ 57 ಎಸೆತಗಳಲ್ಲಿ 6 ಸಿಕ್ಸರ್, 9 ಬೌಂಡರಿ ಸಮೇತ 104 ರನ್ ಗಳಿಕೆ ಮಾಡಿದರೆ, ಸ್ಯಾಮ್ಸನ್ 4 ಸಿಕ್ಸರ್, 9 ಬೌಂಡರಿ ಸಮೇತ 42 ಎಸೆತಗಳಲ್ಲಿ 77 ರನ್ ಗಳಿಸಿದರು. ಈ ಆಟಗಾರರು ಜೊತೆಯಾಟವಾಡಿ 176 ರನ್ಗಳ ಕಾಣಿಕೆ ನೀಡಿದರು.104 ರನ್ ಗಳಿಕೆ ಮಾಡಿದ್ದ ಹೂಡಾ ಲಿಟ್ಲಿ ಓವರ್ನಲ್ಲಿ ವಿಕೆಟ್ ಒಪ್ಪಿಸಿದರೆ, ಸ್ಯಾಮ್ಸನ್ ಮಾರ್ಕ್ ಓವರ್ನಲ್ಲಿ ಔಟಾದರು. ಇದಾದ ಬಳಿಕ ಬಂದ ಸೂರ್ಯಕುಮಾರ್ ಯಾದವ್ (15 ರನ್), ಹಾರ್ದಿಕ್ ಪಾಂಡ್ಯ (15 ರನ್) ಗಳಿಸಿದರೆ, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್ ಹಾಗೂ ಹರ್ಷಲ್ ಪಟೇಲ್ ಶೂನ್ಯ ಸುತ್ತಿದರು. ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 225 ರನ್ಗಳಿಕೆ ಮಾಡಿದ್ದು, ಎದುರಾಳಿ ತಂಡಕ್ಕೆ 226 ರನ್ಗಳ ಬೃಹತ್ ಟಾರ್ಗೆಟ್ ನೀಡಿತು. ಐರ್ಲೆಂಡ್ ಪರ ಮಾರ್ಕ್ 3 ವಿಕೆಟ್ ಪಡೆದರೆ, ಲಿಟ್ಲ್ ಹಾಗೂ ಯಂಗ್ ತಲಾ 2 ವಿಕೆಟ್ ಪಡೆದುಕೊಂಡು ಮಿಂಚಿದರು.

ಹಿಂದೂಸ್ತಾನ್ ಸಮಾಚಾರ್


 rajesh pande