ಉಕ್ರೇನ್ ನಲ್ಲಿ ಶಾಪಿಂಗ್ ಮಾಲ್ ಮೇಲೆ ರಷ್ಯಾ ಕ್ಷಿಪಣಿ ದಾಳಿ
ಕೀವ್ (ಉಕ್ರೇನ್), 28ಜೂನ್ (ಹಿ.ಸ):ಆ್ಯಂಕರ್ : : ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿ ತಿಂಗಳುಗಳೇ ಕಳೆದಿದ್ದರೂ ರಷ್
ೇ


ಕೀವ್ (ಉಕ್ರೇನ್), 28ಜೂನ್ (ಹಿ.ಸ):ಆ್ಯಂಕರ್ :

: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿ ತಿಂಗಳುಗಳೇ ಕಳೆದಿದ್ದರೂ ರಷ್ಯಾ ತನ್ನ ದಾಳಿಯನ್ನು ಕಡಿಮೆ ಮಾಡಿಲ್ಲ. ಇಂದು ಉಕ್ರೇನ್ ನ ಶಾಪಿಂಗ್ ಮಾಲ್ ಅನ್ನು ಗುರಿಯಾಗಿಸಿಕೊಂಡು ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸಿದ್ದು, ಶಾಪಿಂಗ್ ಮಾಲ್ ನಲ್ಲಿದ್ದ ನೂರಾರು ಜನರು ಮೃತಪಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ ಸ್ಕಿ ಕ್ರೆಮೆನ್ಚುಕ್ನಲ್ಲಿರುವ ದಾಳಿ ನಡೆದ ಶಾಪಿಂಗ್ ಮಾಲ್ ನ ವಿಡಿಯೋ ಹಂಚಿಕೊಂಡಿದ್ದು, ರಷ್ಯಾ ಸೇನೆ ಶಾಪಿಂಗ್ ಮಾಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ದಾಳಿ ನಡೆದ ಸಂದರ್ಭದಲ್ಲಿ ಸುಮಾರು 1000 ಜನರು ಶಾಪಿಂಗ್ ಮಾಡುತ್ತಿದ್ದರು. ದಾಳಿಯ ಬಳಿಕ ಶಾಪಿಂಗ್ ಮಾಲ್ ಹೊತ್ತಿ ಉರಿಯುತ್ತಿದ್ದು, ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತಪಟ್ಟವರ ಸಂಖ್ಯೆಯನ್ನು ನಾವು ಊಹಿಸಲೂ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande