ಜಿ-೨೦ ಶೃಂಗಸಭೆಗೆ ಭಾರತ ಸನ್ನದ್ಧ
ನವದೆಹಲಿ, 30 ನವೆಂಬರ್ (ಹಿ.ಸ): ಆ್ಯಂಕರ್ :ಜಾಗತಿಕ ಆರ್ಥಿಕತೆಯಲ್ಲಿ ಬಹುಪಾಲು ಹೊಂದಿರುವ ಜಿ-೨೦ ಒಕ್ಕೂಟದ ಅಧ್ಯಕ್ಷತೆಯ
ಜಿ-೨೦ ಶೃಂಗಸಭೆಗೆ ಭಾರತ ಸನ್ನದ್ಧ


ನವದೆಹಲಿ, 30 ನವೆಂಬರ್ (ಹಿ.ಸ):

ಆ್ಯಂಕರ್ :ಜಾಗತಿಕ ಆರ್ಥಿಕತೆಯಲ್ಲಿ ಬಹುಪಾಲು ಹೊಂದಿರುವ ಜಿ-೨೦ ಒಕ್ಕೂಟದ ಅಧ್ಯಕ್ಷತೆಯನ್ನು ಭಾರತ ನಾಳೆಯಿಂದ ಒಂದು ವರ್ಷಗಳ ಕಾಲ ವಹಿಸಿಕೊಳ್ಳಲಿದೆ.

ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ೨೦೦ಕ್ಕೂ ಹೆಚ್ಚು ಸಭೆಗಳನ್ನು ೫೦ಕ್ಕೂ ಹೆಚ್ಚು ಸ್ಥಳಗಳಲ್ಲಿ ಆಯೋಜಿಸಲು ಸಿದ್ಧತೆ ನಡೆಸಲಾಗಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಜಿ-೨೦ ಒಕ್ಕೂಟದ ಅಧ್ಯಕ್ಷತೆ ವಹಿಸುತ್ತಿರುವುದರಿಂದ ಭಾರತದ ಆರ್ಥಿಕ ಬೆಳವಣಿಗೆಗೆ ಮತ್ತಷ್ಟು ನಾಂದಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ವೇದಿಕೆಯಾದ ’ಕೂ’ ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಭಾರತದ ಉಪಕ್ರಮಗಳನ್ನು ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ ಎಂದು ತಿಳಿಸಲಾಗಿದೆ.

ನಾಳೆಯಿಂದ ಅಧಿಕೃತವಾಗಿ ಜಿ- ೨೦ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುತ್ತಿದ್ದಂತೆ, ಕೇಂದ್ರ ಸರ್ಕಾರ ತನ್ನ ರಾಜತಾಂತ್ರಿಕ ಕ್ಯಾಲೆಂಡರ್ ಅನ್ನು ಸಾಂಸ್ಕೃತಿಕ ಉಪಕ್ರಮಗಳ ಸರಣಿಯೊಂದಿಗೆ ಪ್ರಾರಂಭಿಸಲು ಯೋಜಿಸಿದೆ.

ಅಜೆಂಡಾದಲ್ಲಿ ೭೫ ಶಿಕ್ಷಣ ಸಂಸ್ಥೆಗಳೊಂದಿಗೆ ಸಂವಾದ, ಜಿ- ೨೦ ಲಾಂಛನದೊಂದಿಗೆ ೧೦೦ ಸ್ಮಾರಕಗಳಲ್ಲಿ ಕಾರ್ಯಕ್ರಮ ನಾಗಾಲ್ಯಾಂಡ್ನ ಹಾರ್ನ್ಬಿಲ್ ಉತ್ಸವವನ್ನು ಜಿ- ೨೦ ಶೃಂಗ ಸಭೆಯ ಸಂದರ್ಭದಲ್ಲಿ ಪ್ರದರ್ಶನ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಪುರಿ ಬೀಚ್ನಲ್ಲಿ ೨೦-ರಾಷ್ಟ್ರಗಳ ಜಾಗತಿಕ ವೇದಿಕೆಯ ಲೋಗೋ ಬಿಡಿಸುವುದು ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ಇದರ ಜೊತೆಗೆ ದೇಶದಲ್ಲಿ ಜಿ-೨೦ ಜವಾಬ್ದಾರಿ ವಹಿಸಿಕೊಂಡ ಸ್ಮರಣೆಗಾಗಿ ವರ್ಷಪೂರ , ಸರ್ಕಾರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಉದ್ದೇಶಿದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ

ಇಂಡೋನೇಷಿಯಾದ ಬಾಲಿಯಲ್ಲಿ ನಡೆದ,ಜಿ-೨೦ ಶೃಂಗದಲ್ಲಿ ಭಾರತಕ್ಕೆ ಇತ್ತೀಚೆಗಷ್ಟೇ ಅಧಿಕರವಾಗಿ ಅಧ್ಯಕ್ಷತೆ ಹಸ್ತಾಂತರ ಮಾಡಲಾಗಿತ್ತು.

ಸಮರ್ಥ ಬಳಕೆ

ಈ ಮಧ್ಯೆ ವಿದೇಶಾಂಗ ಸಚಿವ ಜೈಶಂಕರ್ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿ, ಜಾಗತಿಕ ಹಿತಾಸಕ್ತಿ ಮತ್ತು ಕಾಳಜಿ ಪ್ರತಿಬಿಂಬಿಸಲು ಭಾರತಕ್ಕೆ ಸಿಕ್ಕ ಜಿ – ೨೦ ಅಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ಬಳಸಿಕೊಳ್ಳಲಿದೆ ಎಂದು ತಿಳಿಸಿದರು.

ದೇಶದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ-೨೦ ಶೃಂಗ ಸಭೆಯ ಹಿನ್ನೆಲೆಯಲ್ಲಿ ೨೦೦ ಸಭೆಗಳನ್ನು ದೇಶಾದ್ಯಂತ ನಡೆಸಲು ಉದ್ದೇಶಿಸಲಾಗಿದೆ. ದೇಶದ ೫೦ ನಗರಗಳಲ್ಲಿ ಸಭೆ ನಡೆಯಲಿದೆ ಎಂದು ಹೇಳಿದರು.

ದೆಹಲಿಯಲ್ಲಿ ಆಯೋಜಿಸಿದ್ದ ವಾರ್ಷಿಕ ಶೃಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು

ಕಾಶ್ಮೀರದಲ್ಲಿ ಜಿ-೨೦ ಸಭೆಗಳನ್ನು ಆಯೋಜಿಸಲು ಸರ್ಕಾರ ಪರಿಗಣಿಸುತ್ತಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.

ತಂತ್ರಜ್ಞಾನ ವಲಯದಲ್ಲಿನ ಬೆಳವಣಿಗೆಗಳಿಂದ ದೇಶ ಮತ್ತಷ್ಟು ಅಭಿವೃದ್ದಿಯಾಗಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.

ಸೆಮಿಕಂಡಕ್ಟರ್ ,೫ಜಿ, ಕೃತಕ ಬುದ್ಧಿಮತ್ತೆ, ವಾಣಿಜ್ಯ ಬಾಹ್ಯಾಕಾಶ ಉಡಾವಣೆಗಳು, ಉಪಗ್ರಹ ತಯಾರಿಕೆ ಸೇರಿದಂತೆ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಯಲಿದೆ ” ಎಂದು ಅವರು ಹೇಳಿದ್ದಾರೆ.

ನಾಳೆಯಿಂದ ಅಧಿಕೃತವಾಗಿ ಜಿ ೨೦ ಅಧ್ಯಕ್ಷತೆ ವಹಿಸಿಕೊಳ್ಳಲಿರುವ ಭಾರತ, ಜಗತ್ತನ್ನು ಒಗ್ಗೂಡಿಸುವ ಕೆಲಸ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಭಾರತ ತನ್ನ ಜಿ ೨೦ ಅಧ್ಯಕ್ಷ ಸ್ಥಾನವನ್ನು ಜಾಗತಿಕ ದಕ್ಷಿಣದ ಹಿತಾಸಕ್ತಿ ಮತ್ತು ಕಾಳಜಿಗಳನ್ನು ಪ್ರತಿಬಿಂಬಿಸಲು ಬಯಸುತ್ತದೆ ಎಂದು ಜೈಶಂಕರ್ ಹೇಳಿದರು. “ಭಾರತದ ಉದಯವು ಭಾರತೀಯ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಆಳವಾಗಿ ಸಂಬಂಧಿಸಿದೆ. ಅದು

ವಿಶೇಷವಾಗಿ ಕಳೆದ ಎರಡು ವರ್ಷಗಳಲ್ಲಿ ಭಾರತದ ತಂತ್ರಜ್ಞಾನದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande