ಪ್ರೀ ಪೇಯ್ಡ್ ಆಟೋ ಸೌಲಭ್ಯ
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರೀ ಪೇಯ್ಡ್ ಆಟೋ ಸೌಲಭ್ಯ ಕಲ್ಪಿಸಲು ಮಾಜಿ ಶಾಸಕರ ಭರವಸೆ ಕೋಲಾರ.ನ.೩೦(ಹಿ.ಸ): ಆಟ
ಕೋಲಾರದಲ್ಲಿ ಆಟೋರಿಕ್ಷಾ ಯೂನಿಯನ್ ಆಶ್ರಯದಲ್ಲಿ ನಡೆದ ಕನ್ನಡರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಟೋ ಚಾಲಕರಿಗೆ ಮಾಜಿ ಶಾಸಕ ವರ್ತೂರ್ ಪ್ರಕಾಶ್ ಸಮವಸ್ತç ವಿತರಿಸಿದರು.


ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರೀ ಪೇಯ್ಡ್ ಆಟೋ ಸೌಲಭ್ಯ ಕಲ್ಪಿಸಲು ಮಾಜಿ ಶಾಸಕರ ಭರವಸೆ

ಕೋಲಾರ.ನ.೩೦(ಹಿ.ಸ): ಆಟೋ ಪ್ರಯಾಣಿಕರ ಅನಕೂಲಕ್ಕಾಗಿ ಮೂಲಭೂತ ಸೌಲಭ್ಯಗಳೊಂದಿಗೆ ನವೀಕೃತ ಆಟೋನಿಲ್ದಾಣ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಪ್ರೀ ಪೇಯ್ಡ್ ಆಟೋ ನಿಲ್ದಾಣ ಸೌಲಭ್ಯವನ್ನು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಅತಿ ಶೀಘ್ರದಲ್ಲಿ ಸ್ವಂತ ಖರ್ಚಿನಿಂದ ನಿರ್ಮಿಸಿಕೊಡಲಾಗುವುದೆಂದು ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್ ಘೋಷಿಸಿದರು.

ಕೋಲಾರ ತಾಲೂಕು ತ್ರಿಚಕ್ರ ವಾಹನ ಚಾಲಕರ ಸಂಘದ ಆಶ್ರಯದಲ್ಲಿ ಶ್ರೀ ಭುವನೇಶ್ವರಿ ಆಟೋ ನಿಲ್ದಾಣದಲ್ಲಿ (ಕೆ.ಎಸ್.ಆರ್.ಟಿ.ಸಿ ಬಸ್ನಿಲ್ದಾಣ) ೬೭ನೇ ರಾಜ್ಯೋತ್ಸವದ ಸಮಾರೋಪ ಸಮಾರಂಭದ ಅಂಗವಾಗಿ ಚಾಲಕರಿಗೆ ಸಮವಸ್ತç ವಿತರಿಸಿ ಮಾತನಾಡಿದರು. ಚಾಲಕರು ಶ್ರಮಜೀವಿಗಳಾಗಿದ್ದು, ನಾಡು ನುಡಿ, ನೆಲ ಜಲದ ಬಗ್ಗೆ ಹಾಗೂ ಸಮಾಜಮುಖಿ ಘೋಷಣೆಗಳನ್ನು ಆಟೋ ಹಿಂಬದಿಯುಲ್ಲಿ ಬರೆದು ಆದರ್ಶವಾದ್ದಾರೆ. ಇವರು ಕಡು ಬಡವರಾಗಿದ್ದು, ಲೈಸನ್ಸ್ ಇಲ್ಲದವರಿಗೆ ಆರ್.ಟಿ.ಓ ಇಲಾಖೆಯಿಂದ ಲೈಸನ್ಸ್ ಪಡೆದುಕೊಳ್ಳಲು ನೆರವಾಗುವುದಾಗಿ ಹಾಗೂ ಅದೇ ರೀತಿ ದಾಖಲೆಗಳನ್ನು ಸಕ್ರಮ ಮಾಡಿಕೊಳ್ಳದಿದ್ದಲ್ಲಿ ಪೊಲೀಸರಿಗೆ ಆಹಾರವಾಗಬಾರದೆಂದು ದಾಖಲೆಗಳನ್ನು ಸಕ್ರಮ ಮಾಡಿಕೊಂಡು ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡಬೇಕೆಂದು ಎಚ್ಚರಿಕೆ ನೀಡಿದರು.

ರಾಜ್ಯ ಆಟೋ ಯೂನಿಯನ್ ಅಧ್ಯಕ್ಷ ಕೆ.ವಿ.ಸುರೇಶ್ಕುಮಾರ್ ಮಾತನಾಡಿ, ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಬ್ಯಾಡ್ಜ್ ಹೊಂದಿರುವ ಚಾಲಕರುಗಳಿಗೆ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆಯಡಿಯಲ್ಲಿ ಕರ್ತವ್ಯ ನಿರತ ಅಥವಾ ಕರ್ತವ್ಯ ರಹಿತವಾಗಿ ಅಪಘಾತಕ್ಕೊಳಗಾದಲ್ಲಿ ಆಸ್ಪತ್ರೆ ಚಿಕಿತ್ಸೆ ವೆಚ್ಚ ೩ ಲಕ್ಷ ಹಾಗೂ ಮರಣ ಹೊಂದಿದ್ದಲ್ಲಿ ೫ ಲಕ್ಷ ರೂಗಳ ಪರಿಹಾರವನ್ನು ಅವಲಂಭಿತರು ಹೊಂದಬಹುದಾಗಿದ್ದು, ೬೦ ವರ್ಷ ವಯಸ್ಸಿನ ನಂತರ ಚಾಲಕರು ನಿವೃತ್ತಿ ಪಿಂಚಣಿ ತಿಂಗಳು ೨೦೦೦ ರೂಗಳನ್ನು ಪಡೆಯಲು ಸರ್ಕಾರ ಯೋಜನೆ ರೂಪಿಸಿದೆ. ಇದರಡಿ ಉಚಿತವಾಗಿ ನೊಂದಾಯಿಸಿಕೊಳ್ಳಲು ಚಾಲಕರಿಗೆ ಕರೆ ನೀಡಿದರು.

ಚಾಲಕರಿಗೆ ಸಮವಸ್ತçದೊಂದಿಗೆ ಸುರಕ್ಷತಾ ಕಿಟ್ ವಿತರಿಸಿದರು. ನಂತರ ಮಾಜಿ ಸಚಿವರು ಆಟೋ ರೀಕ್ಷಾವನ್ನು ಚಲಾಯಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಬೆಗ್ಲಿ ಸೂರ್ಯಪ್ರಕಾಶ್, ಬಂಕ್ ಮಂಜು, ನಗರಸಭಾ ಮಾಜಿ ಅಧ್ಯಕ್ಷ ಕೆ.ಎನ್.ಮಧುಸೂದನ್, ಜಿಲ್ಲಾ ಕಾರ್ಯದರ್ಶಿ ಕೆ.ನಾರಾಯಣಸ್ವಾಮಿ, ಕುಡಾ ಸದಸ್ಯ ಟಮಕ ರಮೇಶ್, ಭುವನೇಶ್ವರಿ ಆಟೋ ನಿಲ್ದಾಣದ ಸುಮನ್, ರಾಜು, ಬಿಜೆಪಿ ಚಿನ್ನಪ್ಪಿ, ಹರಿಕೃಷ್ಣ, ಮಾರುತಿ, ವಿನೋದ, ಮೂರ್ತಿ ಉಪಸ್ಥಿತರಿದ್ದರು.

ಚಿತ್ರ : ಕೋಲಾರದಲ್ಲಿ ಆಟೋರಿಕ್ಷಾ ಯೂನಿಯನ್ ಆಶ್ರಯದಲ್ಲಿ ನಡೆದ ಕನ್ನಡರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಆಟೋ ಚಾಲಕರಿಗೆ ಮಾಜಿ ಶಾಸಕ ವರ್ತೂರ್ ಪ್ರಕಾಶ್ ಸಮವಸ್ತç ವಿತರಿಸಿದರು.


 rajesh pande