ಕಂಪ್ಲಿ: ಜೋಡಿ ರಥೋತ್ಸವ
ಕಂಪ್ಲಿ, 30 ನವೆಂಬರ್ (ಹಿ.ಸ): ಆ್ಯಂಕರ್:ಕಂಪ್ಲಿಯ ಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ಜೋಡಿ ರಥೋತ್ಸವದ ಅಂಗವಾಗಿ ದೇ
ಕಂಪ್ಲಿ: ಜೋಡಿ ರಥೋತ್ಸವ


ಕಂಪ್ಲಿ, 30 ನವೆಂಬರ್ (ಹಿ.ಸ):

ಆ್ಯಂಕರ್:ಕಂಪ್ಲಿಯ ಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ಜೋಡಿ ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬಸವೇಶ್ವರ ಮತ್ತು ನೀಲಮ್ಮನವರ ವಿವಾಹ ಮಹೋತ್ಸವ ಎರಡು ವರ್ಷಗಳ ನಂತರ ಅತ್ಯಂತ ಅದ್ದೂರಿಯಾಗಿ ಸಡಗರ ಸಂಭ್ರಮ ಶ್ರದ್ಧಾ ಭಕ್ತಿಯಿಂದ ನಡೆದಿದೆ.

ಬಸವೇಶ್ವರ ಮತ್ತು ನೀಲಮ್ಮನವರ ವಿವಾಹ ಸಮಾರಂಭಕ್ಕಿಂತ ಮುಂಚೆ ವಿವಾಹದ ಕಾರ್ಯಕ್ರಮವನ್ನು ನೆರೆದ ಕೆಲವೇ ಸದ್ಭಕ್ತರ ಸಮ್ಮುಖದಲ್ಲಿ ಸವಾಲು ಹಾಕಲಾಯಿತು. ಬಸವೇಶ್ವರ ಕಡೆಯ ಪಾಲಕರಾಗಿ ಕರ್ಜಗಿ ಮಠದ ಹೇಮಯ್ಯಸ್ವಾಮಿ ಮತ್ತು ಕುಟುಂಬದವರು 30501 ರೂಗಳಿಗೆ ಪಡೆದರೆ, ನೀಲಮ್ಮನವರ ಕಡೆಯ ಪಾಲಕರಾಗಿ ಎಚ್.ನಾಗರಾಜ ಮತ್ತು ಕುಟುಂಬದವರು 30501 ರೂಗಳಿಗೆ ಸವಾಲನ್ನು ಪಡೆದು, ಎರಡು ಕುಟುಂಬದವರು ಮತ್ತು ಪಟ್ಟಣದ ವೀರಶೈವ ಸಮಾಜದವರು ಹಾಗೂ ವಿವಿಧ ಸಮಾಜಗಳ ಮುಖಂಡರು, ವರ್ತಕರು ಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ವಿವಾಹ ಮಹೋತ್ಸವವನ್ನು ಧಾರ್ಮಿಕ ವಿಧಿಗಳಾನುಸಾರವಾಗಿ ನೆರೆವೇರಿಸಿದರು. ವಿವಾಹ ವೇದಿಕೆಯಲ್ಲಿ ಕೆ.ಎಂ.ಅರುಣ್,ಶಾರದಾ, ಎಚ್.ನಾಗರಾಜ ದಂಪತಿಗಳು ವಿವಾಹ ಕಾರ್ಯವನ್ನು ನೆರವೇರಿಸಿ ಕೊಟ್ಟರೆ, ಕಲ್ಯಾಣಚೌಕಿ ಮಠದ ಕೆ.ಎಂ.ಬಸವರವಾರ ಶಾಸ್ತ್ರಿ, ಸಾಂಗತ್ರಯ ಸಂಶ್ಕøತ ಪಾಠಶಾಲೆಯ ಘನಮಠದಯ್ಯ ಶಾಸ್ತ್ರಿ ಹಾಗೂ ಬಿ.ಎಂ.ವಿಶ್ವನಾಥ್ ಶಾಸ್ತ್ರಿ ಹಾಗೂ ಸಾಂಗತ್ರಯ ಸಂಸ್ಕøತ ಪಾಠಶಾಲೆಯ ವಿದ್ಯಾರ್ಥಿಗಳು ಮಂಗಳಮಹೋತ್ಸವದ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಜೆ.ಎನ್.ಗಣೇಶ ಸನ್ಮಾನ ಸ್ವೀಕರಿಸಿ ಮಾತನಾಡಿ ಪಟ್ಟಣದ ಆರಾಧ್ಯ ದೇವರ ಆಶೀವಾದದಿಂದ ಕ್ಷೇತ್ರದ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಮಾಣಿಕ ಪ್ರಯತ್ನವನ್ನು ಮಾಡಿದ್ದೇನೆ,ಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ಆರ್ಶೀವಾದದಿಂದ ಮುಂಬರುವ ಚುನಾವಣೆಯಲ್ಲಿ ಮತ್ತೊಮ್ಮೆ ಶಾಸಕನಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದರು.ನಂತರ ಸರ್ವರಿಗೂ ಕಲ್ಗುಡಿ ವಿಶ್ವನಾಥ್ ಕುಟುಂಬದವರು ಭೋಜನ ವ್ಯವಸ್ಥೆಯನ್ನು ಮಾಡಿದ್ದರು. ಕಾರ್ಯಕ್ರಮದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಡಿ.ವೀರಪ್ಪ, ದೇವಸ್ಥಾನ ಸಮಿತಿಯ ಪದಾಧಿಕಾರಿಗಳಾದ, ಜೌಕಿನ ಸತೀಶ್, ಮಣ್ಣೂರು ಶರಣಪ್ಪ, ವಸ್ತ್ರದ ಜಡೆಯ್ಯಸ್ವಾಮಿ, ಸಜ್ಜನರ ಮಂಜುನಾಥ್,ಯು.ಎಂ.ವಿದ್ಯಾಶಂಕರ್, ಜೌಕಿನ್ ಸತೀಶ್, ಪವಾಡಶೆಟ್ಟಿ ಯರ್ರಿಸ್ವಾಮಿ, ಮಣ್ಣೂರು ನವೀನ್, ಅರವಿ ಅಮರೇಶಗೌಡ, ಎಚ್.ಎಸ್.ವೀರೇಶ್,ಎಸ್.ಡಿ.ಬಸವರಾಜ, ಬಂಡೆಯ್ಯಸ್ವಾಮಿ, ವಾಲಿಕೊಟ್ರಪ್ಪ, ಎಸ್ಎಸ್ಎಂ ಚನ್ನಬಸವರಾಜ್ ಸಲಹಾ ಸಮಿತಿಯ ಪದಾಧಿಕಾರಿಗಳು, ಅಕ್ಕಮಹಾದೇವಿ ಮಹಿಳಾ ಬಳಗದ ಪದಾಧಿಕಾರಿಗಳು ಹಾಗೂ ಸಮಸ್ತ ಸದ್ಭಕ್ತರು ಮತ್ತು ಮಹಿಳೆಯರು, ವಿವಿಧ ಸಮಾಜಗಳ ಮುಖಂಡರು ಭಾಗವಹಿಸಿದ್ದರು. ಡಿ.01ರಂದು ಆಕರ್ಷಕ ಹೂವಿನ ಪಲ್ಲಕ್ಕಿ ಉತ್ಸವ, ಡಿ.2ರಂದು ಪೇಟೆ ಬಸವೇಶ್ವರ ಮತ್ತು ನೀಲಮ್ಮನವರ ಜೋಡಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.


 rajesh pande