ಮುಂಬೈ, 29 ನವೆಂಬರ್ (ಹಿ.ಸ):
ಆ್ಯಂಕರ್ : ಕಾಶ್ಮೀರಿ ಫೈಲ್ಸ್ ಚಿತ್ರ ಕುರಿತು ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರ ಮುಖ್ಯಸ್ಥ ನಡ್ವ ಲಾಪಿಡ್ ನೀಡಿದ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
53ನೇ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭ ನಿನ್ನೆ ನಡೆದಿತ್ತು. ಅದರಲ್ಲಿ ಮಾತನಾಡಿದ ನಡ್ವಾ, ಕಾಶ್ಮೀರಿ ಫೈಲ್ ಚಿತ್ರ ಅಪಪ್ರಚಾರ ಮತ್ತು ಅಸಹ್ಯವಾಗಿದೆ. ಇಂತಹ ಚಿತ್ರ ಪ್ರತಿಷ್ಠಿತ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಕಾಣಿಸಿಕೊಂಡಿರುವುದು ನನಗೆ ಆಘಾತ ತರಿಸಿದೆ ಎಂದು ಹೇಳಿಕೆ ನೀಡಿದ್ದರು.
ನಡ್ವಾ ಇಸ್ರೇಲಿನ ಚಲನಚಿತ್ರ ಕ್ಷೇತ್ರದ ಪ್ರತಿಷ್ಠಿತ ವ್ಯಕ್ತಿಯಾಗಿದ್ದಾರೆ. ಚಿತ್ರೋತ್ಸವಕ್ಕೆ ಅವರನ್ನು ತೀರ್ಪುಗಾರರ ತಂಡದ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಆದರೆ ಸಮಾರೋಪ ಸಮಾರಂಭದಲ್ಲಿ ಅವರು ಕಾಶ್ಮೀರಿ ಫೈಲ್ಸ್ ಕುರಿತ ಹೇಳಿಕೆ ಸಮಾರಂಭದ ಆಯೋಜಕರಿಗೆ ದಿಗ್ಬ್ರಮೆ ಉಂಟು ಮಾಡಿದೆ. ಅನಿರೀಕ್ಷಿತವಾದ ಈ ಹೇಳಿಕೆಗಳು ಪರ-ವಿರೋಧಕ್ಕೆ ಕಾರಣವಾಗಿದೆ.
ಸೈಲೆಂಟ್ ಸುನಿಲ್ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ: ಕಟೀಲ್
ಚಿತ್ರದ ಪ್ರಮುಖ ಭೂಮಿಕೆಯಲ್ಲಿ ನಟಿಸಿರುವ ಅನುಪಮ್ ಖೇರ್, ನಡ್ವಾ ಅವರ ಹೇಳಿಕೆಯನ್ನು ನಾಚಿಕೆಗೇಡು ಎಂದು ಟೀಕಿಸಿದ್ದಾರೆ. ಕಾಶ್ಮೀರ ಪಂಡಿತರ ಮಾರಣಹೋಮ ನಡೆದಿದೆ. ನಡ್ವಾ ಅವರ ಹೇಳಿಕೆಗಳು ಅಲ್ಲಿ ಜೀವ ಕಳೆದುಕೊಂಡವರಿಗೆ ಅಗೌರವ ಉಂಟು ಮಾಡಿದೆ.
ಈ ಹೇಳಿಕೆ ಪೂರ್ವ ನಿಯೋಜಿತವಾಗಿದೆ. ಇದು ಟೂಲ್ಕಿಟ್ ಗ್ಯಾಂಗ್ ಸಕ್ರಿಯವಾಗಿರುವುದರ ಸಂಕೇತ. ಧರ್ಮ ಸಂಘರ್ಷದಲ್ಲಿ ಸಂಕಷ್ಟಕ್ಕೊಳಗಾದ ಜುಹು ಸಮುದಾಯದಿಂದ ಬಂದ ನಡ್ವಾ ಕಾಶ್ಮೀರಿ ಪಂಡಿತರ ಸಮಸ್ಯೆ ಕುರಿತ ಚಿತ್ರದ ಬಗ್ಗೆ ಟೀಕೆ ಮಾಡಿರುವುದು ಅಕ್ಷಮ್ಯ.
ಹಿಂದೂಸ್ತಾನ್ ಸಮಾಚಾರ್