ಭೂತಂತ್ರಜ್ಞಾನ ಕುರಿತ ವಾರ್ಷಿಕ ಕಾರ್ಯಕ್ರಮ
ನವದೆಹಲಿ, 29 ನವೆಂಬರ್ (ಹಿ.ಸ): ಆ್ಯಂಕರ್ : ಭಾರತದ ಅಭಿವೃದ್ಧಿ ಭಾರತೀಯ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಆಳವಾದ ಸಂಬಂ
ಭೂತಂತ್ರಜ್ಞಾನ ಕುರಿತ ವಾರ್ಷಿಕ ಕಾರ್ಯಕ್ರಮ


ನವದೆಹಲಿ, 29 ನವೆಂಬರ್ (ಹಿ.ಸ):

ಆ್ಯಂಕರ್ :

ಭಾರತದ ಅಭಿವೃದ್ಧಿ ಭಾರತೀಯ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಆಳವಾದ ಸಂಬಂಧ ಹೊಂದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ನವದೆಹಲಿಯಲ್ಲಿಂದು ಹೇಳಿದ್ದಾರೆ. ೭ನೇ ಆವೃತ್ತಿಯ ಜಾಗತಿಕ ತಂತ್ರಜ್ಞಾನ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮೂರು ದಿನಗಳ ಈ ಶೃಂಗಸಭೆ ಭಾರತದ ಭೂತಂತ್ರಜ್ಞಾನ ಕುರಿತ ವಾರ್ಷಿಕ ಕಾರ್ಯಕ್ರಮವಾಗಿದ್ದು, ಈ ಸಮಾವೇಶವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಕರ್ನೆಗಿ ಇಂಡಿಯಾ ಸಹಕಾರದೊಂದಿಗೆ ಆಯೋಜಿಸಲಾಗಿದೆ. ಭೌಗೋಳಿಕ ರಾಜಕೀಯದ ಇಂದಿನ ಯುಗದಲ್ಲಿ ತಂತ್ರಜ್ಞಾನ ಹೃದಯವಾಗಿದ್ದು, ಈ ಬಾರಿಯ ಶೃಂಗಸಭೆಯ ವಿಷಯ, ತಂತ್ರಜ್ಞಾನ ಆಯ್ಕೆ ಮಾಡಿರುವುದು ಅತ್ಯಂತ ಸಕಾಲಿಕವಾಗಿದೆ ಎಂದು ಹೇಳಿದರು. ತಂತ್ರಜ್ಞಾನವನ್ನು ರಾಷ್ಟ್ರೀಯ ಭದ್ರತೆಗೆ ಬಳಸುವ ಸಂಬಂಧ ದೇಶಗಳು ನಿರ್ಧಾರ ಕೈಗೊಂಡಿವೆ ಎಂದು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್


 rajesh pande