ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಕ್ತಾಯ
ಗೋವಾ, 28 ನವೆಂಬರ್ (ಹಿ.ಸ): ಆ್ಯಂಕರ್: ಭಾರತದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ( ಐ ಎಫ್ ಎಫ್ ಐ ) ಇಂದು ಗೋವಾದ
ುೀ


ಗೋವಾ, 28 ನವೆಂಬರ್ (ಹಿ.ಸ):

ಆ್ಯಂಕರ್:

ಭಾರತದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ( ಐ ಎಫ್ ಎಫ್ ಐ ) ಇಂದು ಗೋವಾದಲ್ಲಿ ಮುಕ್ತಾಯವಾಗಲಿದೆ. ಸಂಜೆ ಪಣಜಿ ಬಳಿಯ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್, ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ.ಎಲ್.ಮುರುಗನ್ ಮತ್ತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಚಿತ್ರರಂಗದ ಗಣ್ಯರು ಕೂಡ ಆಗಮಿಸಲಿದ್ದಾರೆ.

ಅವರಲ್ಲಿ ಅಕ್ಷಯ್ ಕುಮಾರ್, ಆಶಾ ಪರೇಖ್, ಆಯುಷ್ಮಾನ್ ಖುರಾನಾ, ಮಾನುಷಿ ಛಿಲ್ಲರ್, ಇಶಾ ಗುಪ್ತಾ, ರಾಣಾ ದುಗ್ಗುಬಾಟಿ ಮತ್ತು ಆನಂದ್ ರೈ ಸೇರಿದ್ದಾರೆ. ಸಮಾರೋಪ ಸಮಾರಂಭದಲ್ಲಿ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಅವರಿಗೆ 2022 ರ ಭಾರತೀಯ ಚಲನಚಿತ್ರ ವ್ಯಕ್ತಿತ್ವ ಪ್ರಶಸ್ತಿಯನ್ನು ನೀಡಲಾಗುವುದು. Krzysztof Zanussi ನಿರ್ದೇಶನದ ಪೋಲಿಷ್ ಚಲನಚಿತ್ರ 'ಪರ್ಫೆಕ್ಟ್ ನಂಬರ್' ಈ ವರ್ಷದ ಐ ಎಫ್ ಎಫ್ ಐನ ಮುಕ್ತಾಯದ ಚಿತ್ರವಾಗಿದೆ. ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ (ಪುರುಷ ಮತ್ತು ಮಹಿಳೆ), ಮತ್ತು ವಿಶೇಷ ತೀರ್ಪುಗಾರರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಸಮಾರೋಪ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ.

ಹಿಂದೂಸ್ತಾನ್ ಸಮಾಚಾರ್


 rajesh pande