ದ.ಕೊರಿಯಾಗೆ ʻಘಾನಾʼಘಾತ
ದೋಹಾ (ಕತಾರ್), 28 ನವೆಂಬರ್ (ಹಿ.ಸ): ಆ್ಯಂಕರ್ : ಮುಹಮ್ಮದ್ ಕುದುಸ್ ದಾಖಲಿಸಿದ ಎರಡು ಗೋಲುಗಳ ನೆರವಿನಿಂದ ಇಲ್ಲಿ ದಕ
ದ.ಕೊರಿಯಾಗೆ ʻಘಾನಾʼಘಾತ


ದೋಹಾ (ಕತಾರ್), 28 ನವೆಂಬರ್ (ಹಿ.ಸ):

ಆ್ಯಂಕರ್ : ಮುಹಮ್ಮದ್ ಕುದುಸ್ ದಾಖಲಿಸಿದ ಎರಡು ಗೋಲುಗಳ ನೆರವಿನಿಂದ ಇಲ್ಲಿ ದಕ್ಷಿಣ ಕೊರಿಯಾ ವಿರುದ್ಧದ ಪಂದ್ಯವನ್ನು ಘಾನಾ ೩-೨ರ ರೋಚಕ ಅಂತರದಲ್ಲಿ ಗೆದ್ದುಕೊಂಡು ʻಹೆಚ್ʼ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅತ್ತ ದಕ್ಷಿಣ ಕೊರಿಯಾ ಪರ ಚೊ ಗು ಸುಂಗ್ ಸಾಹಸಮಯ ರೀತಿಯಲ್ಲಿ ದಾಖಲಿಸಿದ ಎರಡು ಗೋಲುಗಳು ಈ ವೇಳೆ ವ್ಯರ್ಥಗೊಂಡಿತು.

ಇಲ್ಲಿನ ಎಜ್ಯುಕೇಶನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಆರಂಭದಲ್ಲೇ ಘಾನಾ ಮೊದಲ ಮುನ್ನಡೆ ಸಾಧಿಸಿತ್ತು. ೨೪ನೇ ನಿಮಿಷದಲ್ಲಿ ಸಾಲಿಸು ಆಕರ್ಷಕ ರೀತಿಯಲ್ಲಿ ಗೋಲು ದಾಖಲಿಸುವ ಮೂಲಕ ಎದುರಾಳಿ ದ.ಕೊರಿಯಾಗೆ ಆಘಾತ ಮೂಡಿಸಿದರು. ಅಲ್ಲದೆ ೩೪ನೇ ನಿಮಿಷದಲ್ಲಿ ದ.ಕೊರಿಯಾ ಮತ್ತೊಮ್ಮೆ ಹಿನ್ನಡೆ ಕಂಡಿತು. ಮುಹಮ್ಮದ್ ಕುದುಸ್ ಅಮೋಘ ರೀತಿಯಲ್ಲಿ ಗೋಲು ದಾಖಲಿಸಿ ಘಾನಾ ಮುನ್ನಡೆಯನ್ನು ೨-೦ಗೆ ಏರಿಸಿದರು. ಈ ಅವಧಿಯಲ್ಲಿ ದ.ಕೊರಿಯಾ ಮರುಹೋರಾಟ ನಡೆಸಿದರೂ ಗೋಲು ದಾಖಲಿಸುವಲ್ಲಿ ವಿಫಲತೆ ಕಂಡಿತು. ಆದರೆ ದ್ವಿತೀಯಾರ್ಧದಲ್ಲಿ ಮಾತ್ರ ದಕ್ಷಿಣ ಕೊರಿಯಾ ಅಮೋಗ ರೀತಿಯಲ್ಲಿ ಎದುರಾಳಿ ಘಾನಾಗೆ ತಿರುಗೇಟು ನೀಡಿತು. ದ್ವಿತೀಯಾರ್ಧದ ೫೮ ಹಾಗೂ ೬೧ನೇ ನಿಮಿಷದಲ್ಲಿ ಚೊ ಗು ಸುಂಗ್ ಎರಡು ಗೋಲುಗಳನ್ನು ದಾಖಲಿಸಿದ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾ ಪಂದ್ಯದಲ್ಲಿ ಅತ್ಯದ್ಬುತ ರೀತಿಯಲ್ಲಿ ಸಮಬಲ ಸಾಧಿಸಿದಾಗ ಸ್ಟೇಡಿಯಂನಲ್ಲಿ ನೆರೆದ ಕೊರಿಯಾ ಅಭಿಮಾನಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. ಆದರೆ ಏಳು ನಿಮಿಷಗಳ ತರುವಾಯ ಪರಿಸ್ಥಿತಿ ಮತ್ತೊಮ್ಮೆ ಬದಲಾವಣೆಯಾಯಿತು. ೬೧ನೇ ನಿಮಿಷದಲ್ಲಿ ಕುದುಸ್ ಪಂದ್ಯದಲ್ಲಿ ತನ್ನ ಎರಡನೇ ಗೋಲು ದಾಖಲಿಸಿ, ಘಾನಾ ಮತ್ತೆ ಮುನ್ನಡೆ ಒದಗಿಸಿದರು. ಅಲ್ಲದೆ ಪಂದ್ಯದ ನಿಗದಿತ ಅವಧಿ ಅಂತ್ಯಗೊಂಡು ಹೆಚ್ಚುವರಿ ೧೦ ನಿಮಿಷಗಳನ್ನು ನೀಡಿದರೂ ಬಳಿಕ ಯಾವುದೇ ತಂಡ ಕೂಡ ಗೋಲು ಗಳಿಸುವಲ್ಲಿ ಸಾಧ್ಯವಾಗಲಿಲ್ಲ. ಅಂತಿಮವಾಗಿ ಪಂದ್ಯವನ್ನು ಘಾನಾ ೩-೨ರ ರೋಚಕ ಅಂತರದಲ್ಲೇ ಗೆದ್ದುಕೊಂಡು, ಅಮೂಲ್ಯ ಮೂರು ಅಂಕ ಸಂಪಾದಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande