ಕತಾರ್, 28 ನವೆಂಬರ್ (ಹಿ.ಸ):
ಆ್ಯಂಕರ್ :
ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಇಂದು ಕ್ಯಾಮರೂನ್ ಮತ್ತು ಸರ್ಬಿಯಾ ತಂಡಗಳು ಸೆಣಸಲಿವೆ. ಪಂದ್ಯ ಮಧ್ಯಾಹ್ನ ೩.೩೦ಕ್ಕೆ ಅಲ್ ಜನೌಬ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸಂಜೆ ೬.೩೦ ಗಂಟೆಗೆ ಎಜುಕೇಷನ್ ಸಿಟಿ ಕ್ರೀಡಾಂಣಗದಲ್ಲಿ ನಡೆಯಲಿರುವ ಎಚ್ ಗುಂಪಿನ ಮತ್ತೊಂದು ಪಂದ್ಯದಲ್ಲಿ ದಕ್ಷಿಣ ಕೊರಿಯಾ ಮತ್ತು ಘಾನಾ ತಂಡಗಳು ಮುಖಾಮುಖಿಯಾಗಲಿವೆ.
ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಬ್ರೆಜಿಲ್ ತಂಡ ಇಂದು ಸ್ವಿಟ್ಜರ್ಲೆಂಡ್ ವಿರುದ್ಧ ಆಡಲಿದೆ. ಪಂದ್ಯ ರಾತ್ರಿ ೯.೩೦ ಗಂಟೆಗೆ ದೋಹಾದ ರಾಸ್ ಅಬು ಅಬೌಂಡ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಹಿಂದೂಸ್ತಾನ್ ಸಮಾಚಾರ್