ಮುಂಬೈ, 27 ನವೆಂಬರ್ (ಹಿ.ಸ):
ಆ್ಯಂಕರ್:
ದೇಶೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ದರ ಸತತ ಎರಡನೇ ದಿನ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ, ಬೆಳ್ಳಿ ದರ ಮತ್ತೆ ತುಸು ಇಳಿಕೆಯಾಗಿದೆ. ಸತತ ಮೂರು ದಿನಗಳಿಂದ ಕುಸಿತ ಕಂಡಿದ್ದ ಉಭಯ ಲೋಹಗಳ ದರ ಶುಕ್ರವಾರ ತುಸು ಚೇತರಿಸಿತ್ತು. ಇದೀಗ ಬೆಳ್ಳಿ ದರ ಎರಡನೇ ದಿನವೂ ಇಳಿಕೆಯಾಗುವುದರೊಂದಿಗೆ ಮತ್ತೆ ಕುಸಿತದತ್ತ ಮುಖ ಮಾಡಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿದೆ.
ಬೆಂಗಳೂರು ಸೇರಿ ಪ್ರಮುಖ ನಗರಗಳ ದರ ವಿವರ
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ನಿನ್ನೆಯಷ್ಟೇ ಇದ್ದು 48,550 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 52,970 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 200 ರೂ. ಇಳಿಕೆಯಾಗಿ 61,800 ರೂಪಾಯಿ ಆಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 49,250 ರೂ. ಮುಂಬೈ- 48,550 ರೂ, ದೆಹಲಿ- 48,700 ರೂ, ಕೊಲ್ಕತ್ತಾ- 48,550 ರೂ, ಬೆಂಗಳೂರು- 48,600 ರೂ, ಹೈದರಾಬಾದ್- 48,550 ರೂ, ಕೇರಳ- 48,550 ರೂ, ಪುಣೆ- 48,550 ರೂ, ಮಂಗಳೂರು- 48,600 ರೂ, ಮೈಸೂರು- 48,600 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ:
ಚೆನ್ನೈ- 53,730 ರೂ, ಮುಂಬೈ- 52,970 ರೂ, ದೆಹಲಿ- 53,120 ರೂ, ಕೊಲ್ಕತ್ತಾ- 52,970 ರೂ, ಬೆಂಗಳೂರು- 53,020 ರೂ, ಹೈದರಾಬಾದ್- 52,970 ರೂ, ಕೇರಳ- 52,970 ರೂ, ಪುಣೆ- 52,970 ರೂ, ಮಂಗಳೂರು- 52,020 ರೂ, ಮೈಸೂರು- 53,020 ರೂ. ಆಗಿದೆ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ; ಬೆಂಗಳೂರು- 67,500 ರೂ, ಮೈಸೂರು- 67,500 ರೂ., ಮಂಗಳೂರು- 67,500 ರೂ., ಮುಂಬೈ- 61,800 ರೂ, ಚೆನ್ನೈ- 67,500 ರೂ, ದೆಹಲಿ- 61,800 ರೂ, ಹೈದರಾಬಾದ್- 67,500 ರೂ, ಕೊಲ್ಕತ್ತಾ- 61,800 ರೂ. ಆಗಿದೆ.
ಹಿಂದೂಸ್ತಾನ್ ಸಮಾಚಾರ್