ಹೆಡ್ಕಾನ್ಸ್ಟೇಬಲ್ ಆತ್ಮಹತ್ಯೆ
ಗದಗ , 26 ನವೆಂಬರ್ (ಹಿ.ಸ): ಆ್ಯಂಕರ್:: ಅನಾರೋಗ್ಯದಿಂದ ಬೇಸತ್ತು ಹೆಡ್ಕಾನ್ಸ್ಟೇಬಲ್ ನೇಣು ಬಿಗಿದುಕೊಂಡು ಆತ್ಮಹತ್ಯ
ಹೆಡ್ಕಾನ್ಸ್ಟೇಬಲ್ ಆತ್ಮಹತ್ಯೆ


ಗದಗ , 26 ನವೆಂಬರ್ (ಹಿ.ಸ):

ಆ್ಯಂಕರ್:: ಅನಾರೋಗ್ಯದಿಂದ ಬೇಸತ್ತು ಹೆಡ್ಕಾನ್ಸ್ಟೇಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗನ ತೇಜಾ ನಗರದಲ್ಲಿ ನಡೆದಿದೆ. ಅನಿಲ್ ಸಜ್ಜನರ್(48) ಮೃತ ಹೆಡ್ಕಾನ್ಸ್ಟೇಬಲ್. ಅನಿಲ್ ಸಜ್ಜನರ್ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿದ್ದರು. ಅನಿಲ್ ಸಜ್ಜನರ್ 2 ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಇಂದು (ನ. 25) ಅನಿಲ್ ಸಜ್ಜನರ್ ಎಳನೀರು ತರುವಂತೆ ಪತ್ನಿಯನ್ನು ಹೊರಗೆ ಕಳುಹಿಸಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande