ಭಾರತ-ಫ್ರಾನ್ಸ್ ವಾರ್ಷಿಕ ರಕ್ಷಣಾ ಕುರಿತ ಮಾತುಕತೆ
ನವದೆಹಲಿ, 26 ನವೆಂಬರ್ (ಹಿ.ಸ): ಆ್ಯಂಕರ್: ದೆಹಲಿಯಲ್ಲಿ ಇಂದಿನಿಂದ ಇದೇ ೨೮ರ ವರೆಗೆ ನಡೆಯಲಿರುವ ೪ನೇ ಭಾರತ-ಫ್ರಾನ್ಸ್
ಭಾರತ-ಫ್ರಾನ್ಸ್ ವಾರ್ಷಿಕ ರಕ್ಷಣಾ ಕುರಿತ ಮಾತುಕತೆ


ನವದೆಹಲಿ, 26 ನವೆಂಬರ್ (ಹಿ.ಸ):

ಆ್ಯಂಕರ್:

ದೆಹಲಿಯಲ್ಲಿ ಇಂದಿನಿಂದ ಇದೇ ೨೮ರ ವರೆಗೆ ನಡೆಯಲಿರುವ ೪ನೇ ಭಾರತ-ಫ್ರಾನ್ಸ್ ವಾರ್ಷಿಕ ರಕ್ಷಣಾ ಕುರಿತ ಮಾತುಕತೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್ನ ಸಶಸ್ತ್ರ ಪಡೆಗಳ ಸಚಿವ ಸೆಬಾಸ್ಟಿಯನ್ ಲೆಕೊರ್ನು ಅವರೊಂದಿಗೆ ಜಂಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ರಕ್ಷಣಾ ಸಚಿವಾಲಯ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಸಶಸ್ತ್ರ ಪಡೆಗಳ ಸಚಿವರಾದ ಬಳಿಕ ಸೆಬಾಸ್ಟಿಯನ್ ಲೆಕೊರ್ನು ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸುತ್ತಿದ್ದಾರೆ. ಈ ಭೇಟಿಯ ವೇಳೆ ಅವರು, ವಿದೇಶಾಂಗ ವ್ಯವಹಾರಗಳ ಸಚಿವ ಡಾ: ಎಸ್. ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನೂ ಸಹ ಭೇಟಿಯಾಗಿ ಅನೇಕ ಪ್ರಮುಖ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ. ಅಲ್ಲದೆ, ಕೊಚ್ಚಿಯಲ್ಲಿರುವ ದಕ್ಷಿಣದ ನೌಕಾ ಕಮಾಂಡ್ನ ಕೇಂದ್ರ ಕಚೇರಿಗೂ ಭೇಟಿ ನೀಡಲಿರುವ ಫ್ರಾನ್ಸ್ನ ಸಶಸ್ತ್ರ ಪಡೆಗಳ ಸಚಿವರು, ಭಾರತದ ಮೊದಲ ಸ್ವದೇಶಿ ನಿರ್ಮಿತ ಏರ್ಕ್ರಾಫ್ಟ್ ಕ್ಯಾರಿಯರ್ ಐಎನ್ಎಸ್ ವಿಕ್ರಾಂತ್ ಅನ್ನು ಸಹ ವೀಕ್ಷಿಸಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande