ಬಾಲಿ, 22 ನವೆಂಬರ್ (ಹಿ.ಸ):
ಆ್ಯಂಕರ್ :
: ಸೊಲೊಮನ್ ದ್ವೀಪಗಳಲ್ಲಿ ಮಂಗಳವಾರ (ನ 22) ಮಧ್ಯಾಹ್ನ 1 ಗಂಟೆಗೆ (ಭಾರತೀಯ ಕಾಲಮಾನ ಬೆಳಿಗ್ಗೆ 7 ಗಂಟೆ) ಪ್ರಬಲ ಭೂಕಂಪ ಸಂಭವಿಸಿದ್ದು ಸುನಾಮಿ ಎಚ್ಚರಿಕೆ ರವಾನಿಸಲಾಗಿದೆ. ಭೂ ಮೇಲ್ಮೈಯಿಂದ 15 ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರವಿತ್ತು ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೇ ಹೇಳಿದೆ. ಸೊಲೊಮನ್ ದ್ವೀಪಗಳ ಸುತ್ತಮುತ್ತಲ 300 ಕಿಮೀ ವ್ಯಾಪ್ತಿಯಲ್ಲಿ ಅಪಾಯಕಾರಿ ಸುನಾಮಿ ಅಲೆಗಳು ಕಾಣಿಸಿಕೊಳ್ಳಬಹುದು ಎಂದು ಶಾಂತಸಾಗರದ ಸುನಾಮಿ ಮುನ್ನೆಚ್ಚರಿಕಾ ಕೇಂದ್ರ ಎಚ್ಚರಿಕೆ ನೀಡಿದೆ. ಆಸ್ಟ್ರೇಲಿಯಾದ ಪೂರ್ವ ತೀರದಲ್ಲಿ 3.2 ತೀವ್ರತೆಯ ಭೂಕಂಪವು ಮಂಗಳವಾರ ನಸುಕಿನಲ್ಲಿ ವರದಿಯಾಗಿತ್ತು. ಜನಪ್ರಿಯ ಪ್ರವಾಸಿ ತಾಣವಾಗಿರುವ ಬಾಟೆಮನ್ಸ್ ಬೇ ಸಮೀಪದ ಸಮುದ್ರ ತೀರದಲ್ಲಿ ಈ ಭೂಕಂಪನದ ಕೇಂದ್ರವಿತ್ತು ಎಂದು ಜಿಯೊಸೈನ್ಸ್ ಆಸ್ಟ್ರೇಲಿಯಾ ಹೇಳಿದೆ. ಈ ಭೂಕಂಪನದ ಕೇಂದ್ರವು ಭೂಗರ್ಭದ 10 ಕಿಮೀ ಆಳದಲ್ಲಿತ್ತು.
ಹಿಂದೂಸ್ತಾನ್ ಸಮಾಚಾರ್