ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿದೇಶಿ ಪ್ರವಾಸ
ಟೋಕಿಯೊ, 21 ನವೆಂಬರ್ (ಹಿ.ಸ): ಕೃತಕ ಬುದ್ಧಿಮತ್ತೆಯ ಜಾಗತಿಕ ಪಾಲುದಾರಿಕೆಯ ಅಧ್ಯಕ್ಷತೆಯನ್ನು ಭಾರತ ಇಂದು ಫ್ರಾನ್ಸ್ನಿ
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿದೇಶಿ ಪ್ರವಾಸ


ಟೋಕಿಯೊ, 21 ನವೆಂಬರ್ (ಹಿ.ಸ):

ಕೃತಕ ಬುದ್ಧಿಮತ್ತೆಯ ಜಾಗತಿಕ ಪಾಲುದಾರಿಕೆಯ ಅಧ್ಯಕ್ಷತೆಯನ್ನು ಭಾರತ ಇಂದು ಫ್ರಾನ್ಸ್ನಿಂದ ಸ್ವೀಕರಿಸಲಿದೆ. ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಫ್ರಾನ್ಸ್ ನಿಂದ ಸಾಂಕೇತಿಕ ಸ್ವೀಕರಿಸಲು ಟೋಕಿಯೊದಲ್ಲಿ ನಡೆಯಲಿರುವ ಜಿಪಿಎಐ ಸಭೆಯಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ. ಈ ಬೆಳವಣಿಗೆಯು ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಒಕ್ಕೂಟವಾದ ಜಿ-೨೦ ರ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ನಂತರ ಭಾರತಕ್ಕೆ ಒಲಿದಿದೆ. ಜಿಪಿಎಐ ಜವಾಬ್ದಾರಿಯುತ ಮತ್ತು ಮಾನವ-ಕೇಂದ್ರಿತ ಅಭಿವೃದ್ಧಿ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಬೆಂಬಲಿಸುವ ಅಂತಾರಾಷ್ಟ್ರೀಯ ಉಪಕ್ರಮ ಇದಾಗಿದೆ. ಅಮೆರಿಕ, ಇಂಗ್ಲೆಂಡ್, ಯುರೋಪ್ ಯೂನಿಯನ್, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಮೆಕ್ಸಿಕೊ, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ ಮತ್ತು ಸಿಂಗಾಪುರ ಸೇರಿದಂತೆ ೨೫ ಸದಸ್ಯ ರಾಷ್ಟ್ರಗಳ ಸಭೆ ಜಿಪಿಎಐ ಆಗಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande