ಉಪರಾಷ್ಟ್ರಪತಿ ಕತಾರ್ ಗೆ ಭೇಟಿ,ಭಾರತೀಯರೊಂದಿಗೆ ಸಂವಾದ
ನವದೆಹಲಿ, 20 ನವೆಂಬರ್ (ಹಿ.ಸ): ಆ್ಯಂಕರ್ : ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಭಾರತದ
ಉಪರಾಷ್ಟ್ರಪತಿ ಕತಾರ್ ಗೆ ಭೇಟಿ,ಭಾರತೀಯರೊಂದಿಗೆ ಸಂವಾದ


ನವದೆಹಲಿ, 20 ನವೆಂಬರ್ (ಹಿ.ಸ):

ಆ್ಯಂಕರ್ :

ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಪ್ರತಿನಿಧಿಯಾಗಿ ಪಾಲ್ಗೊಳ್ಳಲು ಉಪರಾಷ್ಟ್ರಪತಿ ಜಗದೀಪ್ ಧನಕರ್ ಇಂದಿನಿಂದ ಕತಾರ್ಗೆ ಎರಡು ದಿನಗಳ ಭೇಟಿ ನೀಡಲಿದ್ದಾರೆ.

ಭಾರತ ಮತ್ತು ಕತಾರ್ ನಡುವೆ ದೀರ್ಘಾವಧಿಯ ಉತ್ತಮ ಬಾಂಧವ್ಯವಿದ್ದು, ವ್ಯಾಪಾರ, ಭದ್ರತೆ, ರಕ್ಷಣೆ, ಆರೋಗ್ಯ, ಶಿಕ್ಷಣ ಮತ್ತು ಇನ್ನಿತರೆ ಕ್ಷೇತ್ರಗಳಲ್ಲಿ ಬಹುಪಕ್ಷೀಯ ಪಾಲುದಾರಿಕೆ ವಿಸ್ತರಣೆಯಾಗಿದೆ.

ಕಳೆದ ಹಣಕಾಸು ವರ್ಷದಲ್ಲಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ವ್ಯಾಪಾರ ೧೫ ಬಿಲಿಯನ್ ಅಮೆರಿಕನ್ ಡಾಲರ್ ದಾಟಿದೆ. ಮುಂದಿನ ವರ್ಷ ಎರಡೂ ದೇಶಗಳು ರಾಜತಾಂತ್ರಿಕ ಸಂಬಂಧದ ೫೦ನೇ ವರ್ಷಾಚರಣೆಯನ್ನು ಆಚರಿಸಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಕತಾರ್ ಭೇಟಿಯ ವೇಳೆ ಉಪರಾಷ್ಟ್ರಪತಿ, ಅಲ್ಲಿರುವ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದಾರೆ. ೨೦೨೨ರ ವಿಶ್ವಕಪ್ ಫುಟ್ಬಾಲ್ ಟೂರ್ನಿ ಇಂದಿನಿಂದ ಡಿಸೆಂಬರ್ ೧೮ರ ವರೆಗೆ ನಡೆಯಲಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande