ಬಳ್ಳಾರಿ ನಗರದಲ್ಲಿ ವಿದ್ಯುತ್ ಕಡಿತ
ಬಳ್ಳಾರಿ, 6 ಅಕ್ಟೋಬರ್ (ಹಿ.ಸ): ಆ್ಯಂಕರ್: ಬಳ್ಳಾರಿ ನಗರ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿ ಬಿಸಿಲಹಳ್ಳಿ ವಿದ್ಯುತ್ ಉ
ಬಳ್ಳಾರಿ ನಗರದಲ್ಲಿ ವಿದ್ಯುತ್ ಕಡಿತ


ಬಳ್ಳಾರಿ, 6 ಅಕ್ಟೋಬರ್ (ಹಿ.ಸ):

ಆ್ಯಂಕರ್: ಬಳ್ಳಾರಿ ನಗರ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿ ಬಿಸಿಲಹಳ್ಳಿ ವಿದ್ಯುತ್ ಉಪ-ಕೇಂದ್ರದಲ್ಲಿ ವಿದ್ಯುತ್ ಪರಿವರ್ತಕದ ನಿರ್ವಹಣೆ ನಡೆಯುತ್ತಿರುವ ಕಾರಣ 11 ಕೆ.ವಿ.ಫೀಡರ್ನಲ್ಲಿ ಅಕ್ಟೋಬರ್ 7ರ ಶುಕ್ರವಾರ ಬೆಳಗ್ಗೆ 11ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜುವಿನಲ್ಲಿ ಕಡಿತ ಉಂಟಾಗಲಿದೆ.

ವಿದ್ಯುತ್ ಕಡಿತವಾಗಲಿರುವ ಪ್ರದೇಶಗಳಿವು: ಎಫ್-64 ಫೀಡರ್ನ ಏರಿಯಾಗಳಾದ ಎಸ್.ಆರ್.ಎಂ ಲೇ ಔಟ್, ಸಂಸ್ಕøತಿ ಶಾಲೆ, ವಿಶಾಲ ನಗರ, ಹನುಮಾನ್ ನಗರ, ಬಿ.ಗೋನಾಳ, ಹೌಸಿಂಗ್ ಬೋರ್ಡ್, ವೆಂಕಟಲಕ್ಮ್ಷಿನಗರ, ಅಂಜಿನಪ್ಪ ನಗರ, ಎಸ್.ಆರ್.ಪಿ ಕಾಲೋನಿ, ಎಂ.ಜಿ. ಅನಂತಪುರ ರಸ್ತೆ, ಆಗಡಿ ಮಾರೆಪ್ಪ ಕಾಂಪೌಂಡ್, ದತ್ತ ಸಾಯಿ ನಗರ, ಆಶ್ರಯ ಕಾಲೋನಿ ಹಾಗೂ ಎಫ್-62 ಫೀಡರ್ ಏರಿಯಾಗಳಾದ ಬಿ.ಗೋನಾಳ, ವೆಂಕಟಲಕ್ಮ್ಷಿನಗರ, ಹರಿಶ್ಚಂದ್ರ ಘಾಟ್, ನಬಿ ಕಾಲೋನಿ, ಆಶ್ರಯ ಕಾಲೋನಿ, ಗ್ರಾಂಡ್ ಫಂಕ್ಷನ್ ಹಾಲ್ ಹಾಗೂ ಇತರೆ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಜೆಸ್ಕಾಂ ಕೋರಿದೆ.


 rajesh pande