ರೈತ ವೃತ್ತ ನಿರ್ಮಾಣಕ್ಕೆ ಭೂಮಿ ಪೂಜೆ
ಕಂಪ್ಲಿ, 6 ಅಕ್ಟೋಬರ್ (ಹಿ.ಸ): ಆ್ಯಂಕರ್:ಕುರುಗೋಡು ರಸ್ತೆಯ ಎಪಿಎಂಸಿ ಹತ್ತಿರದ ವೃತ್ತದಲ್ಲಿ ರೈತ ವೃತ್ತ ನಿರ್ಮಾಣಕ್ಕೆ
  ರೈತ ವೃತ್ತ ನಿರ್ಮಾಣಕ್ಕೆ ಭೂಮಿ ಪೂಜೆ.


ಕಂಪ್ಲಿ, 6 ಅಕ್ಟೋಬರ್ (ಹಿ.ಸ):

ಆ್ಯಂಕರ್:ಕುರುಗೋಡು ರಸ್ತೆಯ ಎಪಿಎಂಸಿ ಹತ್ತಿರದ ವೃತ್ತದಲ್ಲಿ ರೈತ ವೃತ್ತ ನಿರ್ಮಾಣಕ್ಕೆ ಕಿಸಾನ್ ಜಾಗೃತಿ ವಿಕಾಸ್ ಸಂಘಟನೆಯ ಪದಾಧಿಕಾರಿಗಳು ಭೂಮಿ ಪೂಜೆಯನ್ನು ನೆರವೇರಿಸಿದ್ದಾರೆ.

ಕಿಸಾನ್ ಜಾಗೃತಿ ವಿಕಾಸ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಪಿ.ಯುಗಂಧರನಾಯ್ಡು ಮಾತನಾಡಿ ಪಟ್ಟಣದ ವಿವಿಧ ವೃತ್ತಗಳಲ್ಲಿ,ಪ್ರಮುಖ ಸ್ಥಳಗಳಲ್ಲಿ ಎಲ್ಲಾ ಮಹಾನೀಯರ ವೃತ್ತಗಳನ್ನು ನಿರ್ಮಿಸಿ ಖ್ಯಾತ ನಾಮರ ಹೆಸರುಗಳನ್ನು ಇಡಲಾಗಿದೆ,

ರೈತರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕುರುಗೋಡು ರಸ್ತೆಯ ಎಪಿಎಂಸಿ ಕಛೇರಿ ಮುಂಭಾಗದ ರಾಜ್ಯ ಹೆದ್ದಾರಿಯಲ್ಲಿ ರೈತರ ಗೌರವಾರ್ಥ ರೈತ ವೃತ್ತವನ್ನು ನಿರ್ಮಿಸುತ್ತಿದ್ದು, ಡಿ.23ರಂದು ಲೋಕಾರ್ಪಣೆ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಕೃಷ್ಣ, ಪ್ರಧಾನಕಾರ್ಯದರ್ಶಿ ಬಲಕುಂದೆಪ್ಪ, ತಾಲ್ಲೂಕು ಕಾರ್ಯದರ್ಶಿ ನಾಗಪ್ಪ ಸೇರಿದಂತೆ ಇತರರು ಇದ್ದರು.


 rajesh pande