ಇಂಡಿಯಾ ಸ್ಕಿಲ್ ಕಾಂಪಿಟೀಷನ್
ಬಳ್ಳಾರಿ, 6 ಅಕ್ಟೋಬರ್ (ಹಿ.ಸ): ಆ್ಯಂಕರ್: ಫ್ರಾನ್ಸ್ನ ಲಿಯಾನ್ನಲ್ಲಿ ವಲ್ರ್ಡ್ ಸ್ಕಿಲ್ ಕಾಂಪಿಟೀಷನ್ 2024 ಸೆಪ್ಟಂಬರ್
ಇಂಡಿಯಾ ಸ್ಕಿಲ್ ಕಾಂಪಿಟೀಷನ್ ,, ಭಾಗವಹಿಸಲು ನೊಂದಣಿಗೆ ಆಹ್ವಾನ


ಇಂಡಿಯಾ ಸ್ಕಿಲ್ ಕಾಂಪಿಟೀಷನ್ ,, ಭಾಗವಹಿಸಲು ನೊಂದಣಿಗೆ ಆಹ್ವಾನ


ಬಳ್ಳಾರಿ, 6 ಅಕ್ಟೋಬರ್ (ಹಿ.ಸ):

ಆ್ಯಂಕರ್: ಫ್ರಾನ್ಸ್ನ ಲಿಯಾನ್ನಲ್ಲಿ ವಲ್ರ್ಡ್ ಸ್ಕಿಲ್ ಕಾಂಪಿಟೀಷನ್ 2024 ಸೆಪ್ಟಂಬರ್ 2024ರಲ್ಲಿ ನಡೆಯಲಿದ್ದು, ಕರ್ನಾಟಕ ಕೌಶಲ್ಯಭಿವೃದ್ಧಿ ನಿಗಮ ವತಿಯಿಂದ ಇಂಡಿಯಾ ಸ್ಕಿಲ್ ಕಾಂಪಿಟೀಷನ್ 2023 ಏರ್ಪಡಿಸಿದ್ದು, ವಲ್ರ್ಡ್ ಸ್ಕಿಲ್ ಕಾಂಪಿಟೀಷನ್ 2024/ಇಂಡಿಯಾ ಸ್ಕಿಲ್ ಕಾಂಪಿಟೀಷನ್ 2023 ನಲ್ಲಿ ಭಾಗವಹಿಸಲು ಅರ್ಹರಿಂದ ನೊಂದಣಿಗೆ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.

ಅರ್ಹತೆಗಳು: ಅಭ್ಯರ್ಥಿ/ವಿದ್ಯಾರ್ಥಿಗಳು 55 ಕೌಶಲ್ಯಗಳಲ್ಲಿಯೂ ಭಾಗವಹಿಸಬಹುದಾಗಿದೆ.

45 ಕೌಶಲ್ಯಗಳಲ್ಲಿ ಭಾಗವಹಿಸುವ ಅಭ್ಯರ್ಥಿ/ವಿದ್ಯಾರ್ಥಿಗಳು 01.01.2002ರಂದು ಅಥವಾ ನಂತರದಲ್ಲಿ ಜನಿಸಿದವರಾಗಿರಬೇಕು. 10 ಕೌಶಲ್ಯಗಳಲ್ಲಿ ಭಾಗವಹಿಸುವ ಅಭ್ಯರ್ಥಿ/ವಿದ್ಯಾರ್ಥಿಗಳು 01.01.1999ರಂದು ಅಥವಾ ನಂತರದಲ್ಲಿ ಜನಿಸಿದವರಾಗಿರಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿ/ವಿದ್ಯಾರ್ಥಿಗಳು //https://www.kaushalkar.com/app/world-skill-registration ನಲ್ಲಿ ನೊಂದಣಿ ಮಾಡಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ ಅಥವಾ ಮೊ.8217607423, 9113505020ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.


 rajesh pande