45 ಭಾರತೀಯರ ರಕ್ಷಣೆ
ನವದೆಹಲಿ, 5 ಅಕ್ಟೋಬರ್ (ಹಿ.ಸ): ಆ್ಯಂಕರ್ : ಮ್ಯಾನ್ಮಾರ್ನಲ್ಲಿ ನಕಲಿ ಉದ್ಯೋಗ ದಂಧೆಯಲ್ಲಿ ಸಿಲುಕಿದ್ದ ಸುಮಾರು 45 ಭಾ
45 ಭಾರತೀಯರ ರಕ್ಷಣೆ


ನವದೆಹಲಿ, 5 ಅಕ್ಟೋಬರ್ (ಹಿ.ಸ):

ಆ್ಯಂಕರ್ : ಮ್ಯಾನ್ಮಾರ್ನಲ್ಲಿ ನಕಲಿ ಉದ್ಯೋಗ ದಂಧೆಯಲ್ಲಿ ಸಿಲುಕಿದ್ದ ಸುಮಾರು 45 ಭಾರತೀಯರನ್ನು ರಕ್ಷಿಸಲಾಗಿದೆ.

ಮ್ಯಾನ್ಮಾರ್ನಲ್ಲಿ ಭಾರತೀಯರು ನಕಲಿ ಉದ್ಯೋಗ ದಂಧೆಯಲ್ಲಿ ಸಿಕ್ಕಿಬಿದ್ದಿರುವ ಪ್ರರಣವನ್ನು ಭಾರತ ಸಕ್ರಿಯವಾಗಿ ಪರಿಶೀಲಿಸುತ್ತಿದೆ. 32 ಭಾರತೀಯರನ್ನು ಈ ಮೊದಲೇ ರಕ್ಷಿಸಲಾಗಿದ್ದು, ಇದೀಗ 13 ಭಾರತೀಯರನ್ನೂ ರಕ್ಷಿಸಲಾಗಿದೆ. ಇಂದು ಅವರೆಲ್ಲರೂ ತಮಿಳುನಾಡನ್ನು ತಲುಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.

ಇನ್ನೂ ಕೆಲ ಭಾರತೀಯರನ್ನು ನಕಲಿ ಉದ್ಯೋಗದಾತರಿಂದ ರಕ್ಷಿಸಲಾಗಿದ್ದು, ಅವರೆಲ್ಲರೂ ಮ್ಯಾನ್ಮಾರ್ನ ಅಧಿಕಾರಿಗಳ ವಶದಲ್ಲಿದ್ದಾರೆ. ಅವರನ್ನು ಭಾರತಕ್ಕೆ ವಾಪಸ್ ಕರೆತರಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇಂತಹ ನಕಲಿ ಉದ್ಯೋಗ ದಂಧೆ ಮ್ಯಾನ್ಮಾರ್ನಲ್ಲಿ ಮಾತ್ರವಲ್ಲದೇ ಲಾವೋಸ್ ಹಾಗೂ ಕಾಂಬೋಡಿಯಾದಲ್ಲೂ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ವಿಯೆಂಟಿಯಾನ್, ನಾಮ್ ಪೆನ್ ಹಾಗೂ ಬ್ಯಾಂಕಾಕ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಅಲ್ಲಿಂದ ಭಾರತೀಯರನ್ನು ವಾಪಸ್ ಕಳುಹಿಸಲು ಸಹಾಯ ಮಾಡುತ್ತಿದೆ ಎಂದು ವರದಿಯಾಗಿದೆ.

ಈ ರೀತಿ ಸಂಶಯಾಸ್ಪದವಾಗಿ ಉದ್ಯೋಗಾವಕಾಶಗಳು ಬಂದರೆ, ಮೊದಲಿಗೆ ಅದರ ಬಗ್ಗೆ ಕ್ರಾಸ್ ಚೆಕ್ ಮಾಡುವಂತೆ ಹಾಗೂ ಎಚ್ಚರಿಕೆ ವಹಿಸುವಂತೆ ಬಾಗ್ಚಿ ನಾಗರಿಕರಲ್ಲಿ ಮನವಿ ಮಾಡಿದ್ದಾರೆ. ಇಂತಹ ನಕಲಿ ಉದ್ಯೋಗ ದಂಧೆಗಳಿಗೆ ಐಟಿ ನುರಿತ ಯುವಕರೇ ಹೆಚ್ಚಾಗಿ ಗುರಿಯಾಗಿದ್ದಾರೆ ಎಂದು ಬಾಗ್ಚಿ ಸೆಪ್ಟೆಂಬರ್ನಲ್ಲಿ ತಿಳಿಸಿದ್ದರು.

ಹಿಂದೂಸ್ತಾನ್ ಸಮಾಚಾರ್


 rajesh pande