ವಿಶ್ವ ಪ್ರಾಣಿಗಳ ದಿನ ಇಂದು
ನವ ದೆಹಲಿ, 4 ಅಕ್ಟೋಬರ್ (ಹಿ.ಸ): ಆ್ಯಂಕರ್ ಪ್ರತಿ ವರ್ಷ ಅಕ್ಟೋಬರ್ 4ರಂದು ವಿಶ್ವ ಪ್ರಾಣಿಗಳ ದಿನವನ್ನು ಆಚರಿಸಲಾಗುತ್ತ
ವಿಶ್ವ ಪ್ರಾಣಿಗಳ ದಿನ ಇಂದು


ನವ ದೆಹಲಿ, 4 ಅಕ್ಟೋಬರ್ (ಹಿ.ಸ):

ಆ್ಯಂಕರ್

ಪ್ರತಿ ವರ್ಷ ಅಕ್ಟೋಬರ್ 4ರಂದು ವಿಶ್ವ ಪ್ರಾಣಿಗಳ ದಿನವನ್ನು ಆಚರಿಸಲಾಗುತ್ತೆ . ಅಳಿವಿನಂಚಿನಲ್ಲಿರುವ ಅನೇಕ ಜಾತಿಯ ಪ್ರಾಣಿಗಳ ದುಃಸ್ಥಿತಿಯ ಅರಿವನ್ನು ಹೆಚ್ಚಿಸಲು, ಪ್ರಾಣಿಗಳ ಸಂರಕ್ಷಣೆ ಹಾಗೂ ಪ್ರಕೃತಿಯಲ್ಲಿ ಅವುಗಳ ಮಹತ್ವವದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತೆ. ಕಾಡು ನಾಶ ಆಗಿ ನಾಡು ಬೆಳೆಯುತ್ತಾ ಹೋದಂತೆ ಪ್ರಾಣಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಅಲ್ಲದೆ ಪ್ರವಾಹ, ಬರ ಸಮಯದಲ್ಲಿ ನಾಡಿಗೆ ಕಾಲಿಡುವ ಪ್ರಾಣಿಗಳನ್ನು ಮನುಷ್ಯ ಎಂದೂ ಸಹಿಸುವುದಿಲ್ಲ. ಹೀಗಾಗಿ ಮಾನವರಿಂದ ಪ್ರಾಣಿಗಳಿಗೆ ಉಂಟಾಗುವ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಈ ದಿನವನ್ನು ಆಚರಿಸಲಾಗುತ್ತೆ.

ಪ್ರಾಣಿ ಪೋಷಕ ಸಂತ ಎಂದು ಕರೆಯಲ್ಪಡುವ ಸೈಂಟ್ ಫ್ಯಾನ್ಸಿಸ್ ಆಫ್ ಅಸ್ಸಿಸಿಯ ಹಬ್ಬದ ದಿನವನ್ನು ವಿಶ್ವ ಪ್ರಾಣಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಮೊಟ್ಟ ಮೊದಲ ಬಾರಿಗೆ 1925 ರಲ್ಲಿ ಜರ್ಮನಿಯ ಬರ್ಲಿನ್ನಲ್ಲಿ ಹೆನ್ರಿಕ್ ಝಿಮ್ಮರ್ಮ್ಯಾನ್ ಈ ದಿನವನ್ನು ಆಚರಣೆ ಮಾಡಿದರು. ಬಳಿಕ 1929 ರಲ್ಲಿ ಅಕ್ಟೋಬರ್ 4 ರಂದು ವಿಶ್ವ ಪ್ರಾಣಿ ಕಲ್ಯಾಣ ದಿನವನ್ನು ಆಚರಣೆ ಮಾಡಲಾಯಿತು. ವಿಶ್ವ ಪ್ರಾಣಿ ದಿನವು ಅಕ್ಟೋಬರ್ 4 ರಂದು ನಡೆಯುವ ವಾರ್ಷಿಕ ಕಾರ್ಯಕ್ರಮವಾಗಿದೆ. ಪ್ರಪಂಚದಾದ್ಯಂತ ಪ್ರಾಣಿಗಳ ಕಲ್ಯಾಣಕ್ಕಾಗಿ ಜಾಗೃತಿ ಮೂಡಿಸಲು ಈ ದಿನವನ್ನು ಮೀಸಲಿಡಲಾಗಿದೆ.

ಜಗತ್ತಿನಲ್ಲಿ ಮನುಷ್ಯರಿಗೆಷ್ಟು ಬದುಕಲು ಅವಕಾಶವಿದೆಯೂ ಅದೇ ರೀತಿ ಪ್ರಾಣಿಗಳಿಗೂ ಬದುಕುವ ಹಕ್ಕಿದೆ. ಹೀಗಾಗಿ ನಾವೆಲ್ಲ ವಿಶ್ವ ಪ್ರಾಣಿ ದಿನಾಚರಣೆಯಲ್ಲಿ ತೊಡಗಿಸಿಕೊಳ್ಳಬೇಕು. ಇದಕ್ಕೆ ಹಲವು ಮಾರ್ಗಗಳಿವೆ. ಪ್ರಾಣಿ ಕಲ್ಯಾಣ ಸಂಸ್ಥೆಗೆ ದೇಣಿಗೆ ನೀಡುವುದು ಅಥವಾ ಸ್ವಯಂಸೇವಕರಾಗುವುದು ಒಂದು ಮಾರ್ಗವಾಗಿದೆ. ಇನ್ನೊಂದು ಮಾರ್ಗವೆಂದರೆ ಈವೆಂಟ್ ಮಾಡುವುದು ಮತ್ತು ಈ ದಿನದ ಮಹತ್ವವನ್ನು ಜನರಿಗೆ ಸಾರುವ, ಜಾಗೃತಿ ಮೂಡಿಸುವ ಮೂಲಕ ಈ ದಿನವನ್ನು ಆಚರಿಸಬಹುದು.

ಹಿಂದೂಸ್ತಾನ್ ಸಮಾಚಾರ್


 rajesh pande