"ಎಲ್ಲರಿಗೂ ಲಸಿಕೆ -ಉಚಿತ ಲಸಿಕೆ " ಅಭಿಯಾನದ ಯಶಸ್ಸಿನಲ್ಲಿ ಗೋವಾ ಪ್ರಮುಖ ಪಾತ್ರ ವಹಿಸುತ್ತಿದೆ
ಗೋವಾ , 18 ಸೆಪ್ಟೆಂಬರ್ (ಹಿ.ಸ):ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗೋವಾದ ವೈದ್ಯರು, ಆರೋಗ್ಯ ರಕ್ಷಣೆ ಕಾರ್ಯಕರ್ತರು
ಮೋದಿ


ಗೋವಾ , 18 ಸೆಪ್ಟೆಂಬರ್ (ಹಿ.ಸ):ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗೋವಾದ ವೈದ್ಯರು, ಆರೋಗ್ಯ ರಕ್ಷಣೆ ಕಾರ್ಯಕರ್ತರು ಮತ್ತು ಕೋವಿಡ್ ಲಸಿಕೆ ಫಲಾನುಭವಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು.

ಲಸಿಕಾ ಅಭಿಯಾನದಲ್ಲಿ ತಮ್ಮ ಕಾರ್ಯ ಮತ್ತು ಅನುಭವಗಳನ್ನು ವೈದ್ಯರು ಮತ್ತು ಆರೋಗ್ಯ ರಕ್ಷಣೆ ಕಾರ್ಯಕರ್ತರು ಪ್ರಧಾನಿ ಅವರೊಂದಿಗೆ ಹಂಚಿಕೊಂಡರು.

ಉಚಿತವಾಗಿ ಮತ್ತು ಸುಲಭವಾಗಿ ಲಸಿಕೆ ದೊರೆತಿರುವುದಕ್ಕೆ ಫಲಾನುಭವಿಗಳು ಪ್ರಧಾನಿಯವರಿಗೆ ಕೃತಜ್ಞತೆ ಸಲ್ಲಿಸಿದರು.

ಪ್ರಧಾನಿ, ನಿನ್ನೆ ಒಂದೇ ದಿನ ಎರಡುವರೆ ಕೋಟಿ ಲಸಿಕೆಗಳನ್ನು ನೀಡುವ ಮೂಲಕ ಭಾರತ ದಾಖಲೆ ನಿರ್ಮಿಸಿದೆ. ಈ ಯಶಸ್ಸಿಗಾಗಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಜನತೆಯನ್ನು ಅಭಿನಂದಿಸುವುದಾಗಿ ತಿಳಿಸಿದರು. ಪ್ರಬಲ ಹಾಗೂ ಶ್ರೀಮಂತ ದೇಶಗಳೂ ಸಹ ಈ ಕಾರ್ಯ ಸಾಧಿಸಲು ಸಾಧ್ಯವಾಗಿಲ್ಲ. ನಿನ್ನೆ ಪ್ರತಿ ತಾಸಿಗೆ 15 ಲಕ್ಷ , ಪ್ರತಿ ನಿಮಿಷಕ್ಕೆ 26 ಸಾವಿರ ಲಸಿಕೆಗಳನ್ನು ನೀಡಲಾಗಿದೆ. ಎಲ್ಲರ ಪ್ರಯತ್ನದಿಂದ ನಿನ್ನೆಯ ದಿನ ವಿಶೇಷ ದಿನವೆನಿಸಿದೆ ಎಂದರು.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ , ಸಂವಾದ ಕಾರ್ಯಕ್ರಮದಲ್ಲಿ ವಿಶ್ವದ ಅತಿ ದೊಡ್ಡ ಮತ್ತು ವೇಗದ

"ಎಲ್ಲರಿಗೂ ಲಸಿಕೆ -ಉಚಿತ ಲಸಿಕೆ " ಅಭಿಯಾನದ ಯಶಸ್ಸಿನಲ್ಲಿ ಗೋವಾ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಹಿಂದೂಸ್ತಾನ್ ಸಮಾಚಾರ್


 rajesh pande